For the best experience, open
https://m.samyuktakarnataka.in
on your mobile browser.

ನಿಮ್ಮ ದುರಾಡಳಿತ ಜನತೆಗೆ ತಿಳಿಸಲು ನೀವೇ ಅವಕಾಶ ಮಾಡಿಕೊಟ್ಟಿದ್ದಕ್ಕೆ…….

11:07 AM Nov 12, 2024 IST | Samyukta Karnataka
ನಿಮ್ಮ ದುರಾಡಳಿತ ಜನತೆಗೆ ತಿಳಿಸಲು ನೀವೇ ಅವಕಾಶ ಮಾಡಿಕೊಟ್ಟಿದ್ದಕ್ಕೆ……

ಪೋಸ್ಟ್‌ ಮಾಡಿದ್ದು ಹಗರಣ ನಡೆದಿದ್ದು ನಿಮ್ಮ ಸರ್ಕಾರದಲ್ಲಿ, ಅಮಾನತು ಕ್ರಮ ಜರುಗಿಸಿದ್ದು ನಮ್ಮ ಸರ್ಕಾರದಲ್ಲಿ ಎನ್ನುವುದನ್ನು ಮರೆಯದಿರಿ

ಬೆಂಗಳೂರು: ನಿಮ್ಮ ಸರ್ಕಾರದ ದುರಾಡಳಿತವನ್ನು ಜನತೆ ತಿಳಿಸಲು ನೀವೇ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು! ಎಂದು ಸಚಿವ ಪ್ರಿಯಾಂಕ್​ ಖರ್ಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಹಗರಣ ನಡೆದಿದ್ದು ನಿಮ್ಮ ಸರ್ಕಾರದಲ್ಲಿ, ಅಮಾನತು ಕ್ರಮ ಜರುಗಿಸಿದ್ದು ನಮ್ಮ ಸರ್ಕಾರದಲ್ಲಿ ಎನ್ನುವುದನ್ನು ಮರೆಯದಿರಿ. 2020-21 ರಿಂದ 2022-23ರವರೆಗೆ ನರೇಗಾ ಯೋಜನೆಯ ಅನುಷ್ಠಾನದಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ, ದೇವದುರ್ಗ ತಾಲ್ಲೂಕಿನ ಅಧಿಕಾರಿಗಳು ಸೇರಿ 37 ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ಜನವರಿ 2024ರಲ್ಲಿ ಆದೇಶಿಸಲಾಗಿತ್ತು.

  • ಅವ್ಯವಹಾರ ನಡೆದಿರುವ ಬಗ್ಗೆ ತಿಳಿದರೂ ಯಾವುದೇ ಕ್ರಮ ಜರುಗಿಸದೆ ಕುಳಿತಿದ್ದ ನಿಮ್ಮ ಸರ್ಕಾರ ಭ್ರಷ್ಟಾಚಾರಕ್ಕೆ ಬೆಂಬಲ ನೀಡಿತ್ತಲ್ಲವೇ?
  • ಕರ್ನಾಟಕ ನಾಗರಿಕ ಸೇವಾ (ಸಿಸಿಎ) ನಿಯಮಗಳನ್ವಯ ಸರ್ಕಾರಿ ಅಧಿಕಾರಿ/ನೌಕರರನ್ನು 06 ತಿಂಗಳ ಕಾಲದವರೆಗೆ ಅಮಾನತ್ತಿನಲ್ಲಿ ಇರಿಸಲು ಅವಕಾಶ ಕಲ್ಪಿಸಲಾಗಿದೆ.
  • ಆದರೆ, ನಿಮ್ಮ ಸರ್ಕಾರ 25/11/2020 ರಂದು ಹೊರಡಿಸಿದ ಆದೇಶದಲ್ಲಿ ಏನಿದೆ ಎಂದು ಒಮ್ಮೆ ಫ್ಯಾಕ್ಟ್ ಚೆಕ್ ಮಾಡಿಕೊಳ್ಳಿ,

“ ಅಮಾನತ್ತುಗೊಂಡ ಆರು ತಿಂಗಳ ಅವಧಿಯೊಳಗೆ ಆಪಾದಿತ ನೌಕರನ ವಿರುದ್ಧ ಇಲಾಖಾ ವಿಚಾರಣೆ ಪ್ರಾರಂಭಿಸದಿದ್ದಲ್ಲಿ ಅಥವಾ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸದಿದ್ದಲ್ಲಿ ಅಂತಹ ನೌಕರನ ಅಮಾನತ್ತನ್ನು ರದ್ದುಗೊಳಿಸುವ ಅಥವಾ ಮುಂದುವರೆಸುವ ಬಗ್ಗೆ ಸಕ್ಷಮ ಪ್ರಾಧಿಕಾರವು ವಿಳಂಬವಿಲ್ಲದೇ ತೀರ್ಮಾನಿಸತಕ್ಕದ್ದು ಹಾಗೂ ಈ ಅವಧಿಯೊಳಗೆ ತೀರ್ಮಾನಿಸಿ ಮುಂದುವರೆಸಲು ಆದೇಶಿಸದಿದ್ದಲ್ಲಿ ಅಮಾನತ್ತು ಭಾವಿತ (Deemed) ಆಧಾರದಮೇಲೆ ಅಂದರೆ ಅಮಾನತ್ತಿನ ದಿನಾಂಕದಿಂದ 6 ತಿಂಗಳು ಪೂರ್ಣಗೊಂಡ ದಿನಾಂಕದಿಂದ ರದ್ದಾಗುವುದು.”

ಇದು ನಿಮ್ಮದೇ ಸರ್ಕಾರ ಅದೇಶಿಸಿರುವುದು ನಾರಾಯಣಸ್ವಾಮಿಯವರೇ,

  • ಅವ್ಯವಹಾರದ ಬಗ್ಗೆ ನಡೆಯುತ್ತಿರುವ ತನಿಖೆ ಅಂತಿಮ ಹಂತದಲ್ಲಿದೆ, ಅಧಿಕಾರಿಗಳ ವಿರುದ್ಧದ ಆರೋಪ ಸಾಬೀತಾದ ನಂತರ ಕಠಿಣ ಕ್ರಮ ಜರುಗಿಸಲು ನಮ್ಮ ಸರ್ಕಾರ ಬದ್ದವಾಗಿದೆ.
  • ಅಮಾನತ್ತು ಆದ ಅಧಿಕಾರಿ/ಸಿಬ್ಬಂದಿಗಳನ್ನು ಶಾಶ್ವತವಾಗಿ ಅಮಾನತ್ತಿನಲ್ಲಿ ಇಡಲು ನಿಯಮಗಳನ್ವಯ ಸಾಧ್ಯವಿಲ್ಲ, ಹಾಗಾಗಿ ಅವ್ಯವಹಾರದ ಗಂಭೀರತೆಯನ್ನು ಪರಿಗಣಿಸಿ ಅಮಾನತ್ತು ಮಾಡಿದ 08/09 ತೀಂಗಳ ನಂತರ ಅಮಾನತುಗೊಂಡ ಅದೇ ಹುದ್ದೆಯಲ್ಲಿ ಮುಂದುವರೆಸದೆ, ನಿಯಮಾನುಸಾರ ಇಲಾಖಾ ವಿಚಾರಣೆ ಬಾಕಿ ಇರಿಸಿ, ರಾಯಚೂರು ಜಿಲ್ಲೆಯ ಹೊರಗಡೆ ಸೇವೆಗೆ ಪುನರ್‌ ಸ್ಥಾಪಿಸಿ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.

ಇದು ನಿಯಮಗಳನ್ನೂ ಪಾಲಿಸಿ, ಭ್ರಷ್ಟಾಚಾರವನ್ನೂ ನಿಗ್ರಹಿಸಲು ನಮ್ಮ ಸರ್ಕಾರ ಕಂಡುಕೊಂಡಿರುವ ಮಾರ್ಗ, ಸಿಸಿಎ ನಿಯಮಗಳ ಬಗ್ಗೆ ನಿಮಗೆ ಅರಿವಿಲ್ಲದಿದ್ದರೆ ನೀವು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಅನರ್ಹರು ಎನ್ನುವುದು ನನ್ನ ಭಾವನೆ.

ತಾವು ಯಾವುದೇ ಹೇಳಿಕೆ ನೀಡುವಾಗ, ಆರೋಪ ಮಾಡುವಾಗ ಪ್ರಜ್ಞಾವಂತರಲ್ಲಿ “Fact check” ಮಾಡಿಕೊಂಡು ನಂತರ ಮುಂದುವರೆಯಿರಿ, ಇಲ್ಲದಿದ್ದರೆ ಚಡ್ಡಿ ಹೊತ್ತಾಗ ನಗೆಪಾಟಲಿಗೆ ಈಡಾದಂತೆ ಹಾಸ್ಯಾಸ್ಪದವಾಗುತ್ತೀರಿ ಎನ್ನುವುದು ನನ್ನ ಸಲಹೆ ಎಂದಿದ್ದಾರೆ.

Tags :