ನಿವೃತ್ತಿ ಕುರಿತು ಯಾವುದೇ ನಿರ್ಧಾರ ನಾನು ಮಾಡಿಲ್ಲ
ಮುಂಬೈ: `ನಿವೃತ್ತಿಯ ಬಗ್ಗೆ ನಾನು ಈ ವರೆಗೆ ಯಾವುದೇ ಯೋಚನೆ ಮಾಡಿಲ್ಲ. ಆ ದಿನ ಕುರಿತು ನಾನು ಯಾವುದೇ ನಿರ್ಧಾರ ಕೂಡ ಮಾಡಿಲ್ಲ'
ಈ ಮಾತನ್ನು ಆಡಿದವರು ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ. ಇದೇ ಮೊದಲ ಬಾರಿ ಅವರು ನಿವೃತ್ತಿ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರತಿಯೊಬ್ಬ ಕ್ರೀಡಾಪಟು ಒಂದಿಲ್ಲೊಂದು ದಿನ ವಿದಾಯ ಹೇಳಲೇ ಬೇಕು. ಅದು ಅನಿವಾರ್ಯ ಕೂಡ. ನನ್ನ ನಿವೃತ್ತಿ ಕುರಿತು ನಾನು ಯಾವದೇ ದಿನಾಂಕವನ್ನು ನಿಗದಿಪಡಿಸಿಲ್ಲವೆಂದು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತ ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದರು.
ಪ್ರತಿ ವೃತ್ತಿಪರ ಕ್ರೀಡಾಪಟುಗಳು ನಿವೃತ್ತಿಯನ್ನು ಆಲೋಚಿಸುವಾಗ ಅವರ ಮನಸ್ಸಿನಲ್ಲಿ 'ನಾನು ನಿಲ್ಲಿಸಿದ ನಂತರ ಮುಂದೇನು' ಎಂಬ ಪ್ರಶ್ನೆ ಏಕರೂಪವಾಗಿ ಉದ್ಭವಿಸುತ್ತದೆ. ಜೀವನದ ಇತರ ಹಂತಗಳಿಗಿಂತ ಭಿನ್ನವಾಗಿ, ಕ್ರೀಡಾಪಟುವಿನ ವೃತ್ತಿಜೀವನವು ಅತ್ಯಂತ ಉನ್ನತ ಮಟ್ಟದಲ್ಲಿದ್ದಾಲೇ ಅಂತ್ಯವಾಗುತ್ತದೆ ಎಂದು ಅವರು ವಿವರಿಸಿದರು.
ನಿವೃತ್ತಿಯ ನಂತರ ಎಂಬ ಪ್ರಶ್ನೆ ಪ್ರತಿಯೊಬ್ಬ ಕ್ರೀಡಾಪಟುವಿನ ಮನದಲ್ಲಿ ಸಹಜವಾಗಿ ಪ್ರಶ್ನೆ ಏಳುತ್ತದೆ. ಸಿದ್ಧತೆ ಇಲ್ಲ ಖಚಿತ ನಿರ್ಧಾರದೊಂದಿಗೆ ನಿವೃತ್ತಿ ಕುರಿತು ನಿರ್ಧಾರ ಕೈಕೊಳ್ಳಬೇಕಾಗುತ್ತದೆ ಎಂದು ಕೊಹ್ಲಿ ತಿಳಿಸಿದರು.
ವೃತ್ತಿಪರ ಕ್ರಿಕೆಟ್‌ಗೆ ವಿದಾಯ ಹೇಳುವ ಕುರಿತು ನಾನಿನ್ನು ಯಾವುದೇ ನಿರ್ಧಾರ ಕೈಕೊಳ್ಳದಿರುವಾಗ ಸಧ್ಯ ವಿದಾಯದ ನಂತರ ಮುಂದೆ ಏನು ಎಂಬ ಕುರಿತು ನಿರ್ಧಾರ ಕೈಕೊಳ್ಳುವ ಪ್ರಶ್ನೆಯೇ ಇಲ್ಲವೆಂದು ವಿರಾಟ್ ಹೇಳಿದರು.
ಪ್ರತಿಯೊಬ್ಬ ಕ್ರೀಡಾಪಟು ನಿವೃತ್ತಿ ಹೊಂದಲೇಬೇಕು. ಅದಕ್ಕೆ ನಾನೇನು ಹೊರತಲ್ಲ. ನಾನು ಕೂಡ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಕೊಳ್ಳುವೆ ಎಂದು ಆರ್‌ಸಿಬಿ ತಂಡ ದ ಮಾಜಿ ನಾಯಕ ಹಾಗೂ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ವಿವರಿಸಿದರು.