For the best experience, open
https://m.samyuktakarnataka.in
on your mobile browser.

ನೆರವಿನ ವಿಶ್ವಾಸ'ದಲ್ಲಿ ರಾಜ್ಯ ಈಜುಪಟು

09:49 AM Jul 25, 2024 IST | Samyukta Karnataka
ನೆರವಿನ ವಿಶ್ವಾಸ ದಲ್ಲಿ ರಾಜ್ಯ ಈಜುಪಟು

ಕೈ-ಕಾಲುಗಳೆಲ್ಲಾ ಸರಿಯಿದ್ದು, ಆರ್ಥಿಕತೆ ಉತ್ತಮವಾಗಿದ್ದರೂ ಸಾಧನೆ ಮಾಡಲು ಮೀನಾಮೇಷ ಎಣಿಸುವ ಕೆಲ ಸೋಮಾರಿಗಳ ಮಧ್ಯೆ ಅಂಗವೈಕಲ್ಯತೆ ದೌರ್ಬಲ್ಯವೇ ಅಲ್ಲ ಎಂದು ತೋರಿಸಿಕೊಟ್ಟ ರಾಜ್ಯದ ಈಜುಪಟುವಿನ ಕಥೆಯಿದು. ಚಿಕ್ಕಂದಿನಲ್ಲೇ ತನ್ನ ಎರಡು ಕೈಗಳನ್ನು ಕಳೆದುಕೊಂಡಿದ್ದರೂ, ತನ್ನನ್ನು ಕಾಪಾಡಲು ಬಂದ ತಂದೆಯೇ ಸಾವಿಗೀಡಾದರೂ, ಸಾಕು ಸಲುಹಿದ ತಾಯಿ ಎಚ್೧ಎನ್೧ಗೆ ಬಲಿಯಾದರೂ, ಸಾಧಿಸಬೇಕೆಂಬ ಒಂದೇ ಒಂದು ಛಲದಿಂದ ಹಲವು ದಾಖಲೆಗಳ ಜೊತೆ ಈಗಲೂ ಕನಸು ಕಾಣತ್ತಿರುವ ಈ ಛಲದಂಕಮಲ್ಲ, ಯಾರಾದರೂ ನೆರವಾಗಲಿದ್ದಾರೆ ಎಂಬವಿಶ್ವಾಸ'ದಲ್ಲಿದ್ದಾರೆ.

ವಯಸ್ಸು ೨೬. ಈ ವಯಸ್ಸಿಗೆ ಎಂಥಹ ಕ್ರೀಡಾಪಟುವಾದರೂ, ನಿವೃತ್ತಿ ಘೋಷಿಸಲು ನಿರ್ಧರಿಸುತ್ತಾರೆ. ಆದರೆ, ಕರ್ನಾಟಕದ ಈ ಈಜುಪಟು, ಈಗಲೂ ಬೆಳಗ್ಗೆಯಿಂದ ಸಂಜೆವರೆಗೂ ತನ್ನನ್ನು ತಾನು ಈಜಿನಲ್ಲಿ ತೊಡಗಿಸಿಕೊಂಡಿದ್ದಾರೆ. ವಾರದ ೩ ದಿನಗಳ ಕಾಲ ವಿಜಯನಗರದಿಂದ ಜಯನಗರಕ್ಕೆ ಪ್ರವಾಸ ಮಾಡುವ ವಿಶ್ವಾಸ್, ರಾಷ್ಟೊçÃತ್ಥಾನ ಜಿಮ್‌ನಲ್ಲಿ ಒಂದು ಗಂಟೆಗೂ ಅಧಿಕ ಕಾಲ ವರ್ಕೌಟ್ ಮಾಡಲಾಗುತ್ತಿದೆ. ಕೋಚ್ ಹರೀಶ್ ಅವರ ಮಾರ್ಗದರ್ಶನದಲ್ಲಿ ದೇಹ ದಂಡಿಸುತ್ತಿದ್ದಾರೆ. ಅಚ್ಚರಿ ಎಂದರೆ, ಜಿಮ್‌ನಲ್ಲಿ ಸಾಮಾನ್ಯ ವ್ಯಕ್ತಿ ಒಂದು ಗಂಟೆ ಕಾಲ ವರ್ಕೌಟ್ ಮಾಡುವುದೇ ಕಷ್ಟಕರ. ಅಂತಹ ಸನ್ನಿವೇಶದಲ್ಲಿ ವಿಶೇಷಚೇತನರಾಗಿದ್ದುಕೊಂಡು ಜಿಮ್‌ನಲ್ಲಿ ಬೆವರಿಳಿಸುವುದಕ್ಕೆ ವಿಶೇಷ ತರಬೇತಿಯನ್ನೇ ನೀಡಲಾಗುತ್ತಿದೆ.

ಕೈ ಕಸಿದ ವಿದ್ಯುತ್ ಅವಘಡ
ತನ್ನ ೧೦ನೇ ವಯಸ್ಸಿನವರೆಗೂ ಯಾವುದೇ ಅಂಗವಿಕಲತೆ ಇಲ್ಲದೇ ಇದ್ದ ವಿಶ್ವಾಸ್, ಮಕ್ಕಳೊಂದಿಗೆ ಆಟವಾಡಲು ಹೋಗಿ, ವಿದ್ಯುತ್ ಕಂಬದ ಮೇಲೆ ಬಿದ್ದು, ಮತ್ತೆ ಬದುಕಿದ್ದೇ ವಿಪರ್ಯಾಸ. ಈತನನ್ನು ರಕ್ಷಿಸಲು ಬಂದ ತಂದೆ, ವಿದ್ಯುತ್ ಅವಘಡಕ್ಕೆ ತುತ್ತಾಗಿ ಪ್ರಾಣವನ್ನೇ ಬಿಟ್ಟಿದ್ದರು. ೨ ತಿಂಗಳ ಕಾಲ ಕೋಮದಲ್ಲಿದ್ದ ವಿಶ್ವಾಸ್, ಕೋಮದಿಂದ ಹೊರ ಬರುವ ವೇಳೆಗೆ, ಎರಡೂ ಕೈಗಳು ಕೂಡ ಕಳೆದುಕೊಂಡಿದ್ದರು. ಮೂಲತಃ ಕೋಲಾರದವರಾಗಿರುವ ವಿಶ್ವಾಸ್, ನಂತರ ಬೆಂಗಳೂರಿಗೆ ಬಂದು ವಿದ್ಯಾಭ್ಯಾಸವನ್ನೂ ನಡೆಸಿದ್ದಾರೆ. ಬಿ.ಕಾಮ್‌ವರೆಗೂ ಓದಿರುವ ವಿಶ್ವಾಸ್‌ಗೆ ಅಂಗವೈಕಲ್ಯತೆಯಿAದ ಅತ್ತ ಉದ್ಯೋಗವೂ ಸಿಕ್ಕಿಲ್ಲ. ಹೀಗಾಗಿ, ಆರ್ಥಿಕ ಸಂಕಷ್ಟ ಈತನನ್ನು ಕ್ರೀಡೆಯಲ್ಲಿ ಬೆಳೆಯಲು ಬಿಟ್ಟಿಲ್ಲ.

ಡ್ಯಾನ್ಸರ್-ಮೋಟಿವೇಷನಲ್ ಸ್ಪೀಕರ್
ಸದ್ಯ ಈಜು ಬಿಟ್ಟು ಈತ ಜೀವನೋಪಾಯಕ್ಕೆ ಹುಡುಕಿಕೊಂಡಿರುವ ದಾರಿಗಳೆಂದರೆ ಅದು ಒಂದು ನೃತ್ಯ, ಮತ್ತೊಂದು ಮೋಟಿವೇಷನಲ್ ಸ್ಪೀಕರ್. ಒಂದು ಸಣ್ಣ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದರೂ, ಅದು ಸದ್ಯ ಮೂಲೆಗುಂಪಾಗಿದೆ. ಅತ್ಯುತ್ತಮವಾಗಿ ಡ್ಯಾನ್ಸ್ ಮಾಡುವ ವಿಶ್ವಾಸ್, ಹಲವು ಕಾರ್ಪೋರೇಟ್ ಸಂಸ್ಥೆಗಳಿಗೆ ಮೋಟಿವೇಷನಲ್ ಸ್ಪೀಚ್ ಮಾಡುತ್ತಾ, ಐಟಿ ಉದ್ಯೋಗಿಗಳನ್ನು ಹುರಿದುಂಬಿಸುತ್ತಿದ್ದಾರೆ. ಇದು ವರ್ಷದಲ್ಲಿ ಆಗೊಂದು ಹೀಗೊಂದು ಎನ್ನುವಂತಾಗಿದ್ದು, ಕುಟುಂಬ ನಿರ್ವಹಿಸಲು ಕೂಡ ಸಾಧ್ಯವಾಗುತ್ತಿಲ್ಲ. ಹಾಗಾಗಿ ಈಗ ಈಜಿನಲ್ಲಿ ನಿಪುಣರಾಗಿರುವ ವಿಶ್ವಾಸ್, ಶತಾಯ ಗತಾಯ ವಿದೇಶಿ ಟೂರ್ನಿಗಳಲ್ಲಿ ಪಾಲ್ಗೊಂಡು ದೇಶದ ಕೀರ್ತಿ ಪತಾಕೆ ಹಾರಿಸಲು ಶ್ರಮ ವಹಿಸುತ್ತಿದ್ದಾರೆ. ಆದರೆ, ಈತನಿಗೆ ನೆರವಿನ ಅಗತ್ಯವಿದೆ.
ಈ ಪ್ಯಾರಾ ಒಲಿಂಪಿಯನ್‌ಗೆ ನೆರವಾಗಲು ಯಾರಾದರೂ ಬಯಸಿದರೆ, ನೇರವಾಗಿ ಸಂಪರ್ಕಿಸಬಹುದು.
ಸಂಪರ್ಕಿಸಬೇಕಾದ ನಂ.೯೯೭೨೫೩೦೩೦೩

ಪದಕಗಳು
೨೦೧೭ರ ಕೆನಡಾದಲ್ಲಿ ನಡೆದ ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು
೨೦೧೭ರ ಬರ್ಲಿನ್ ಐಓಎಂ ಪ್ಯಾರಾ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ
೨೦೧೭ರ ಉದಯ್‌ಪುರ್ ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ ೧ ಚಿನ್ನ & ೨ ಬೆಳ್ಳಿ
೨೦೧೮ರಲ್ಲಿ ಬೆಂಗಳೂರಿನ ಓಪನ್ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ೫ ಚಿನ್ನದ ಪದಕ

ಸಾಧನೆಗಳ ಮಹಾಪೂರ
ಅಮೆರಿಕಾದ ಎಯೂಜಿಪಿಯ ವಿಶೇಷ ಗೋಲ್ಡನ್ ಅಚೀವರ್
ಉಪರಾಷ್ಟçಪತಿಗಳಿಂದ ರೋಲ್ ಮಾಡೆಲ್ ಪ್ರಶಸ್ತಿ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.ಬೆಂಗಳೂರು
ವಿಶ್ವೇಶ್ವರಯ್ಯ ಪ್ರಶಸ್ತಿ. ಬೆಂಗಳೂರು
ಕೆAಪೇಗೌಡ ಪ್ರಶಸ್ತಿ. ಬೆಂಗಳೂರು