ನೌಕಾಪಡೆಯ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
ನವದೆಹಲಿ: ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ್ ತ್ರಿಪಾಠಿ ಅವರು ನೇಮಕಗೊಂಡಿದ್ದಾರೆ.
ಏಪ್ರಿಲ್ 30 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದು. ಪ್ರಸ್ತುತ ನೌಕಾಪಡೆ ಮುಖ್ಯಸ್ಥ ಆರ್ ಹರಿಕುಮಾರ್ ಇದೇ ದಿನ ನಿವೃತ್ತಿಯಾಗಲಿದ್ದಾರೆ. ಜುಲೈ 1985 ರಲ್ಲಿ ನೌಕಾಪಡೆಗೆ ಸೇರಿದ ವೈಸ್ ಅಡ್ಮಿರಲ್ ತ್ರಿಪಾಠಿ ಅವರು ಸಂವಹನ ಮತ್ತು ಎಲೆಕ್ಟ್ರಾನಿಕ್ಸ್ ಯುದ್ಧ ತಜ್ಞ ಮತ್ತು INS ಕಿರ್ಚ್ ಮತ್ತು INS ತ್ರಿಶೂಲ್‌ನಂತಹ ನೌಕಾ ಹಡಗುಗಳಿಗೆ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು. ಅಷ್ಟುಮಾತ್ರವಲ್ಲದೆ ಈ ಹಿಂದೆ ಡೈರೆಕ್ಟರ್ ಜನರಲ್ ನೇವಲ್ ಆಪರೇಷನ್ಸ್ ಮತ್ತು ಫ್ಲಾಗ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್, ವೆಸ್ಟರ್ನ್ ನೇವಲ್ ಕಮಾಂಡ್ ಹುದ್ದೆಗಳನ್ನು ಅಲಂಕರಿಸಿದ್ದಾರೆ. ದಿನೇಶ್ ಕುಮಾರ್ ತ್ರಿಪಾಠಿ ಕೇರಳದ ಇಂಡಿಯನ್ ನೇವಲ್ ಅಕಾಡೆಮಿಯ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸಿದ್ದಾರೆ. ಅವರು 2020 ರಿಂದ 2021 ರವರೆಗೆ ಒಂದು ವರ್ಷದ ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ದಿನೇಶ್ ತ್ರಿಪಾಠಿ ಅವರ ವೃತ್ತಿಜೀವನದಲ್ಲಿ ಅನೇಕ ಪದಕಗಳೊಂದಿಗೆ ಗೌರವಾನ್ವಿತರಾಗಿದ್ದಾರೆ.