ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಗಾಯಕಿ ಶಾರದಾ ಸಿನ್ಹಾ ನಿಧನ

10:47 AM Nov 06, 2024 IST | Samyukta Karnataka

ನವದೆಹಲಿ: ಹೆಸರಾಂತ ಹಾಗೂ ಜನಪ್ರಿಯ ಜಾನಪದ ಗಾಯಕಿ ಶಾರದಾ ಸಿನ್ಹಾ ದೆಹಲಿಯಲ್ಲಿ ನಿನ್ನೆ ರಾತ್ರಿ ನಿಧನರಾಗಿದ್ದಾರೆ.
ಅವರಿಗೆ ೭೨ ವರ್ಷ ವಯಸ್ಸಾಗಿತ್ತು. ರಾಷ್ಟ್ರ ರಾಜಧಾನಿಯಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಅವರು ಕೊನೆಯುಸಿರೆಳೆದರು. ಭೋಜಪುರಿ, ಮೈಥೀಲಿ ಮತ್ತು ಹಿಂದಿ ಗಾಯನ ರಂಗದಲ್ಲಿ ತಮ್ಮ ಇಂಪಾದ ಧ್ವನಿಯ ಮೂಲಕ ಪ್ರಖ್ಯಾತಿ ಗಳಿಸಿದ್ದ ಶಾರದಾ, ಭಾರತೀಯ ಜನಪದ ಸಂಗೀತದಲ್ಲಿ ಅನನ್ಯ ಗುರುತನ್ನು ಸಂಪಾದಿಸಿದ್ದರು.

2018ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡುವ ಮೂಲಕ ರಾಷ್ಟ್ರವು ಗೌರವ ಅರ್ಪಿಸಿತ್ತು. ದೇಶಾದ್ಯಂತ ಬಿಹಾರದ ಹಬ್ಬ-ಹರಿದಿನಗಳಲ್ಲಿ ಶಾರದಾ ಅವರ ಹೃದಯಸ್ಪರ್ಶಿ ಹಾಡುಗಳು ನಿಜಕ್ಕೂ ಜನರನ್ನು ಮಂತ್ರಮುಗದ್ಧಗೊಳಿಸುತ್ತಿತ್ತು. ಇವರ ಪ್ರಸಿದ್ಧ ಗೀತೆಗಳು ಜನಮನದಲ್ಲಿ ಆಳವಾಗಿ ನೆಲೆಸಿದೆ.

ಅವರ ನಿಧನವು ಕಲಾರಂಗದಲ್ಲಿ ಅಪಾರ ನಷ್ಟವನ್ನು ತಂದಿದ್ದು, ಸಂಗೀತ ಪ್ರಿಯರು ಮತ್ತು ಹಿರಿಯ ಕಲಾವಿದರು ಶೋಕ ವ್ಯಕ್ತಪಡಿಸಿದ್ದಾರೆ. ಭಾರತೀಯ ಜನಪದ ಸಂಗೀತದ ಅಭಿಮಾನಿಗಳಿಗೆ ಶಾರದಾ ಅವರ ಧ್ವನಿ ಎಂದಿಗೂ ಜೀವಂತವಾಗಿರುತ್ತದೆ. ಅವರು ತೋರಿಸಿದ ಗಾನಪಥವು ಯುವ ಪೀಳಿಗೆಗೆ ಪ್ರೇರಣೆ ನೀಡುವಂತಿದೆ.

Tags :
#‌FolkSinger#PadmaBhushan#ShardaSinha#Singer
Next Article