ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪರಮಾತ್ಮನ ಸ್ಮರಣೆಯಿಂದ ಭಯ ನಿವಾರಣೆ

12:23 AM Jan 31, 2024 IST | Samyukta Karnataka
PRATHAPPHOTOS.COM

ದೇವರನ್ನು ನಾವು ಹೇಗೆ ಉಪಾಸನೆ ಮಾಡುತ್ತೇವೆಯೋ ಹಾಗೆ ಅವನು ನಮ್ಮನ್ನು ಕಾಪಾಡುತ್ತಾನೆ. ನಮ್ಮ ಯೋಗ್ಯತೆಗೆ ತಕ್ಕಷ್ಟು ನಮ್ಮ ಗುಣಗಳು ನಮ್ಮಲ್ಲಿರುವಂತೆ ನಾವು ನೋಡಿಕೊಂಡು ನಾವು ಚ್ಯುತರಾಗದಂತೆ ಇದ್ದರೆ ಆ ಅಚ್ಯುತ ನಮ್ಮನ್ನು ಕಾಪಾಡುತ್ತಾನೆ.
ಜೊತೆಗೆ ಆ ಭಗವಂತ ಅನಂತ ಕೂಡ.. ಮಾರ್ಕಂಡೇಯರಿಗೆ ಮತ್ತೆ ಮತ್ತೆ ಭೃಗುಋಷಿಗಳು ಅನಂತನಾದ ನರಸಿಂಹದೇವರನ್ನು ನೀನು ಉಪಾಸನೆ ಮಾಡು ಎಂದು ಉಪದೇಶಿಸಿದ್ದಾರೆ.
ಆ ಅಂಥ ಭಯ ಮೃತ್ಯುವಿನ ಭಯ ಪರಿಹಾರ ಮಾಡುವಂತೆ ಆ ನರಸಿಂಹ ದೇವರನ್ನು ಸ್ಮರಿಸು, ಭಯವನ್ನು ಪರಿಹಾರ ಮಾಡುತ್ತಾನೆ. ಆ ಅಂತ್ಯ, ನಾಶ ಮತ್ತು ಮೃತ್ಯುವೇ ಇಲ್ಲದವನು ಅಂದರೆ ಅಕಾಲ ಮೃತ್ಯು ಪರಿಹಾರವಾಗಿ ದೀರ್ಘವಾದ ಐಶ್ವರ್ಯ ಆಯಷ್ಯವನ್ನು ಪರಮಾತ್ಮ ಕೊಡುತ್ತಾನೆ ಹೀಗಾಗಿ ಅವನಿಗೆ ಅನಂತ ಎಂದು ಕರೆಯುತ್ತಾರೆ.
ಮೂರು ರೀತಿಯಿಂದ ಪರಮಾತ್ಮ ಅನಂತನಾಗಿದ್ದಾನೆ ಎಂದು ಶಾಸ್ತ್ರಗಳು ಹೇಳುತ್ತವೆ. ದೇಶ, ಕಾಲ, ಗುಣಗಳಿಂದ ಅನಂತವಾಗಿರುವುದೇ ಈ ಮೂರು ಅನಂತಗಳಾಗಿವೆ.
ಪರಮಾತ್ಮ ಅಂದು ಇಂದು ಎಂದೆಂದಿಗೂ ನಮ್ಮನ್ನು ಕಾಯಲು ಪರಮಾತ್ಮ ಇರುತ್ತಾನೆ ಎಂಬ ಅನುಸಂಧಾನ ಮಾಡಿಕೊಂಡು ಸ್ಮರಿಸಿದರೆ ಪರಮಾತ್ಮ ಎಲ್ಲ ಕಾಲದಲ್ಲಿ ಎಲ್ಲ ದೇಶಗಳಲ್ಲಿ ನಮ್ಮನ್ನು ಅಭಯವಿತ್ತು ಕಾಯುತ್ತಾನೆ. ನಮ್ಮ ಒಳಗೆ ಇರುವ ಅನಂತ ಗುಣಪೂರ್ಣನಾದ ದೇವರು ಪ್ರತಿಬಿಂಬರೂಪಿಯಾಗಿರುವದರಿಂದ ನಾನು ಅನಾಥನಲ್ಲ. ಅದಕ್ಕೆ ನಾನು ಸನಾಥ, ನನಗೆ ರಕ್ಷಕರು ಇಲ್ಲ ಎಂದು ಧೃತಿಗೆಡುವುದು ಬೇಡ, ಎಲ್ಲ ಹೊತ್ತಿಗೂ ಮಹಾ ವೈದ್ಯನಾದ ಪರಮಾತ್ಮ ನಮ್ಮ ಜೊತೆಗೆ ಇರುತ್ತಾನೆ ಅನಂತರೂಪದಿಂದ ನಮ್ಮ ಸುತ್ತಮುತ್ತಲು ಇರುತ್ತಾನೆ ಎಂಬ ಚಿಂತನೆಯನ್ನು ಮಾಡಿಕೊಳ್ಳಬೇಕು.
ಲೌಕಿಕ ಪ್ರಯತ್ನಗಳು ಬೇಡ ಅಂತ ಸರ್ವಥಾ ಹೇಳಿಲ್ಲ. ಅವಶ್ಯವಾಗಿ ಆರೋಗ್ಯದ ರಕ್ಷಣೆಗಾಗಿ ಮಾಡುವ ಪ್ರಯತ್ನಗಳನ್ನು ಮಾಡಲೇಬೇಕು ವೈದ್ಯರ ಸಲಹೆ ಸೂಚನೆಗಳು ಔಷಧಿಗಳನ್ನು ಸ್ವೀಕಾರ ಮಾಡಬೇಕು. ಕರ್ಮ ಸಹಿತನಾಗಿಯೇ ದೇವರ ಚಿಂತನೆ ಮಾಡಬೇಕು. ಔಷಧದಲ್ಲಿ ಗಂಗೆಯ ಸನ್ನಿಧಾನ ಇದೆ ಸ್ವಯಂ ಪರಮಾತ್ಮ ಸನ್ನಿಧಾನ ಇದೆ ಎಂದು ಅನುಸಂಧಾನ ಮಾಡಿಕೊಂಡು ಔಷಧಿ ಸ್ವೀಕರಿಸಬೇಕು. ಅನಂತ ಶಕ್ತಿ ಸಂಪನ್ನ, ನನಗಾಗಿ, ನನ್ನ ಅಸ್ತಿತ್ವಕ್ಕಾಗಿ ಅನಂತಪರಿಗಳನ್ನು ಮಾಡುವಂತಹ ವ್ಯಕ್ತಿ.
ಅನಂತ ಪೂರ್ಣ ಪರಮಾತ್ಮ ನಮ್ಮಲ್ಲಿ ಇದ್ದಾನೆ ಎಂದು ಕೊಂಡಾಗಲೇ ನಮ್ಮಲ್ಲಿ ಚಲನವಲನಗಳಿವೆ. ನಾವು ಕ್ರಿಯಾಶೀಲರಾಗಿರುವುದು, ನಾವು ಕ್ರಿಯಾಶೀಲರಾಗಿರುವಂತೆ ಮಾಡುತ್ತಾನೆ ಆದುದರಿಂದ ಅವನು ಅನಂತ. ಕೆಲವೊಮ್ಮೆ ಮನುಷ್ಯ ತಪ್ಪು ತಿಳಿವಳಿಕೆಯಿಂದ ತನ್ನ ದೈಹಿಕ ಮಾನಸಿಕ ಆರೋಗ್ಯವನ್ನು ಕಳೆದುಕೊಳ್ಳುವ ಮನುಷ್ಯನಿಗೆ ಸರಿಯಾದ ತಿಳುವಳಿಕೆಯನ್ನು ಪರಮಾತ್ಮ ಕೊಟ್ಟು ರಕ್ಷಣೆಯನ್ನು ಮಾಡುತ್ತಾನೆ. ಯಾವ ಪರಮಾತ್ಮನ ಅನುಗ್ರಹ ಇಲ್ಲದೆ ನಮಗೆ ಅಂತ ಅಥವಾ ಪರಿಣಾಮ ಇಲ್ಲವೋ ಅಂತ ಪರಮಾತ್ಮನಿಗೆ ಅನಂತ ಎಂದು ಕರೆಯುತ್ತಾರೆ.

Next Article