ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪರಸ್ಪರ ಅರಿತರೆ ದಾಂಪತ್ಯಕ್ಕೆ ಅರ್ಥ

05:00 AM Oct 16, 2024 IST | Samyukta Karnataka

ಸಾಮಾನ್ಯವಾಗಿ ಗಂಡಸು ಶ್ರೇಷ್ಠ, ಮಹಿಳೆಯನ್ನು ಮೇಲ್ನೋಟಕ್ಕೆ ಶ್ರೇಷ್ಠವೆಂದು ಕರೆದರೂ ಕೂಡ ನಿತ್ಯ ಬದುಕಿನಲ್ಲಿ ಅವಳು ಗಂಡಸಿಗಿಂತ ಕಡಿಮೆಯೇ ಎಂಬ ಭಾವನೆ ಸಮಾಜದಲ್ಲಿದೆ.
ಇದರಿಂದ ಸಮಾಜದಲ್ಲಿ ಸುಭಿಕ್ಷತೆ, ಶಾಂತಿ ನೆಮ್ಮದಿ ಸ್ಥಿರೀಕರಿಸುವದಿಲ್ಲ. ಶ್ರೇಷ್ಠವೆಂಬುದರಲ್ಲಿ ಕಳೆದುಕೊಳ್ಳುವದೇ ಹೆಚ್ಚು. ಪಡೆಯುವದೇನೂ ಇಲ್ಲ.
ಹಾಗಾಗಿ ದಂಪತಿ, ಹೆಣ್ಣು ಗಂಡು ಯಾರೇ ಆಗಲಿ ಅವರಿಗೆ ತಕ್ಕಂತೆ ಗೌರವ ಕೊಟ್ಟು ಆದರಿಸುವದು ಮರೆಯಬಾರದು. ಸಮಾನತೆ ಎಂದರೆ ಹೇಗೆ..? ಎಂದು ಕೇಳಿದರೆ ಶಾಸ್ತç ಮನುಷ್ಯನ ಹಿತಕ್ಕಾಗಿ ಏಳಿಗೆಗಾಗಿ ವಿನಯವನ್ನು ಕಲಿಸಿದೆ. ಒಬ್ಬರನ್ನ ಮೇಲು ಕೀಳು ಮಾಡಿ ಜೀವನ ನಡೆಸುವುದಲ್ಲ. ಎಲ್ಲರಿಗೂ ಆ ಚಕ್ರದಲ್ಲಿ ಬಂದು ಹೋಗಲೇಬೇಕು.
ಹೆಂಡತಿಯು ಗಂಡನಿಗೆ ತಲೆಬಾಗಿ ನಡೆಲೇಬೇಕು. ಹಾಗಿದ್ದರೆ ಮಾತ್ರ ಮಕ್ಕಳು ಅಪ್ಪನ ಮಾತು ಅಮ್ಮನ ಮಾತು ಮನೆಯಲ್ಲಿ ಕೇಳುತ್ತಾರೆ. ಚೆನ್ನಾಗಿ ಬಾಳುವ ಕುಟುಂಬ ಆಗಬೇಕು ಎಂದರೆ ಅಲ್ಲಿ ವಿನಯಿರಬೇಕು. ಗಂಡು ದೊಡ್ಡವಳು ಹೆಣ್ಣು ಚಿಕ್ಕವಳು ಎಂಬ ಭಾವವಿಲ್ಲ. ಏಕೆಂದರೆ ಮಗ ತಾಯಿಗೆ ಎಂದು ಚಿಕ್ಕವನೇ ಇಲ್ಲಿ ಹೆಣ್ಣು ಶ್ರೇಷ್ಠವಾಗುತ್ತಾಳೆ. ಅವನು ಗಂಡಾದರೂ ತನ್ನ ತಾಯಿಯನ್ನು ಹೆಣ್ಣಿಗೆ ಅವನು ದಾಸನೇ ತಲೆಯಾಗಿ ನಡೆಯಲೇಬೇಕು. ಇದೆಲ್ಲ ಸಂಸ್ಕೃತಿಯನ್ನು ಬರೆಸಿದವ ಶ್ರೀಮನ್ನಾರಾಯಣ… ನಾರಾಯಣನು ಸ್ತ್ರೀಯು ಹೌದು ಪುರುಷನು ಹೌದು. ಭಗವಂತನಿಗೆ ಸ್ತ್ರೀರೂಪಗಳು ಇವೆ ಪುರುಷರುಪಗಳು ಇವೆ. ಸ್ತ್ರೀ ಪುರುಷನು ಆಗಿ ಮೆರೆಯುವ ಅವನು ನಾರಾಯಣನು ಹೌದು ನಾರಾಯಣಿಯು ಹೌದು.
ನಾನು ಕೇಳಿದ್ದನ್ನು ಗಂಡ ಕೊಟ್ಟಿಲ್ಲ ಅಥವಾ ತನ್ನ ಗಂಡನಲ್ಲಿ ತಾನು ಕಂಡ ಸೌಂದರ್ಯಕ್ಕಿಂತಲೂ ಹೆಚ್ಚಿನ ಸೌಂದರ್ಯವನ್ನು ಪರ ಪುರುಷರಲ್ಲಿ ಕಂಡು ಅದಕ್ಕೆ ಮೋಹಿತಳಾಗಿ ಪ್ರೀತಿಗೆ ಬಲಿಯಾಗಿ ಗಂಡನಿಗೆ ವಿಷ ಹಾಕುವವರೂ ಕಲಿಯುಗದಲ್ಲಿದ್ದಾರೆ. ನಾನಾ ರೀತಿಯಿಂದ ತೊಂದರೆ ಕೊಡುವವರೂ ಇದ್ದಾರೆ. ಇಂಥವರಿಗೆ ಅಕಾಲದಲ್ಲಿ ಜನ್ಮಾಂತರದಲ್ಲಿ ವೈಧವ್ಯ ಪ್ರಾಪ್ತಿಯಾಗುತ್ತದೆ. ಒಟ್ಟಾರೆ ಸಾರವಿಷ್ಟೇ; ದೇವರು ಕೊಟ್ಟಾಗ ಅದರ ಸಕಾಲ ಉಪಯೋಗ ಮಾಡಿಕೊಳ್ಳಬೇಕು. ಕೊಟ್ಟಗಾದ್ರೂ ಸದುಪಯೋಗ ಮಾಡಿಕೊಳ್ಳಲಿಲ್ಲವೆಂದರೆ ಅದನ್ನು ದೇವರು ಕಸಿದುಕೊಳ್ಳುತ್ತಾನೆ. ತನ್ನ ಸರ್ವಸ್ವವನ್ನು ಕೊಟ್ಟು ಸೌಭಾಗ್ಯವನ್ನು ಕೊಟ್ಟು ಸೌಭಾಗ್ಯವನ್ನು ಕೊಟ್ಟು ತಲೆಯೆತ್ತಿ ನಡೆಯುವಂತೆ ಮಾಡಿ ಎಲ್ಲ ರೀತಿಯಯಿಂದ ಮಡದಿಯನ್ನು ನೋಡಿಕೊಳ್ಳುವ ವ್ಯಕ್ತಿ ಅವನು ಅಮಿತವಾದವನ್ನು ಕೊಡುತ್ತಾನೆ. ಅಂತಹ ಸೌಭಾಗ್ಯವನ್ನು ಪರಿಚಯ ತ್ಯಜಿಸಿ ವಿವೇಕ ಇರುವ ಸ್ತ್ರೀಯಾದ ಸೀತೆ ಅಂತಹ ಪತಿಯನ್ನು ಅವನು ಅರಣ್ಯದಲ್ಲಿ ಇದ್ದರೆ ಅದೇ ರಾಜ್ಯ, ಅವನಿಲ್ಲದ ರಾಜ್ಯವು ಅರಣ್ಯ ಎಂದು ರಾಮ ಇದ್ದಲ್ಲಿ ನಾನು ಎಂದು ದೃಢವಾದ ಸಂಕಲ್ಪ ಮಾಡಿದ ಸೀತೆ ಶ್ರೀ ರಾಮನನ್ನು ಹಿಂಬಾಲಿಸಿದಳು ಎಂದು ಕೇಳುತ್ತೇವೆ. ಹೆಂಡತಿ ಗಂಡನ ಅಧೀನವಾಗಿರಬೇಕು ವಿನೀತರಾಗಿರಬೇಕು ಎಂಬ ವ್ಯವಸ್ಥೆ ವಿನಯದ ಪದ್ಧತಿ, ಜೀವನದಲ್ಲಿ ಇದ್ದರೆ ಎಲ್ಲರೂ ಸುಖವಾಗಿ ಇರುವುದಕ್ಕೆ ಸಾಧ್ಯ ಎಂದು ಶಾಸ್ತ್ರದ ಸಂದೇಶ ಎಂದು ತಿಳಿದು ಪರಿಪಾಲಿಸಬೇಕು ಇದು ಪಕ್ಷಪಾತದ ಮಾತುಗಳು ಎಂದು ಯಾರೂ ತಿಳಿಯಬಾರದು.

Next Article