ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪಾಕ್ ಧ್ವಜದ ರೀಲ್ಸ್ : ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

03:36 PM Sep 18, 2024 IST | Samyukta Karnataka

ಕಲಾದಗಿ: ಗ್ರಾಮದ ತೌಸೀಪ್ ಮೆಹತರ ಎನ್ನುವ ಯುವಕ ತನ್ನ ಮೊಬ್ಯೆಲ್ ಸ್ಟೇಟಸ್ ನಲ್ಲಿ ಪಾಕ್ ಧ್ವಜವಿರುವ ರೀಲ್ಸ್ ಇಟ್ಟುಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಾದಗಿಯಲ್ಲಿ ಬುಧವಾರ ಮುಂಜಾನೆ ದೇಶಭಕ್ತರ ಬಳಗ ಹಾಗೂ ಹಿಂದೂಪರ ಸಂಘಟನೆಗಳವರು ಪ್ರತಿಭಟನಾ ಮೆರವಣಿಗೆ ನಡೆಸಿ ಕೃತ್ಯವನ್ನು ಖಂಡಿಸಿ ಆರೋಪಿ ತೌಸೀಪ್ ನನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಗ್ರಾಮದ ಬಯಲುರಂಗಮಂದಿರದಿಂದ ಹೊರಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಆಕ್ರೋಶದಿಂದ ಘೋಷಣೆಗಳನ್ನು ಕೂಗಲಾಯಿತು,ಆರೋಪಿ ತೌಸೀಪ್ ನಿಗೆ ತಕ್ಕ ಶಿಕ್ಷೆಯಾಗಬೇಕು,ಆತನನ್ನ ಗಡಿಪಾರುಮಾಡಬೇಕು ಎಂದು ಆಗ್ರಹಿಸಿದರಲ್ಲದೆ ಪ್ರಮುಖ ವೃತ್ತಗಳಲ್ಲಿ ಆತನ ಭಾವಚಿತ್ರವನ್ನು ಸುಡುವುದರ ಮೂಲಕ ಆಕ್ರೋಶ ಹೊರಹಾಕಿದರು.
ನಾಡಕಛೇರಿ ಮುಂದೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಹಿಂದೂಪರ ಮುಖಂಡ ಮುಧೋಳದ ಶಂಕರಗೌಡ ಪಾಟೀಲ ನಮ್ಮದೇಶದ ಅನ್ನ ತಿಂದು ನಮಗೆ ದ್ರೋಹ ಬಗೆಯುವ ಇಂಥಹ ದೇಶದ್ರೊಹಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಡಿವ್ಯೆಎಸ್ ಪಿ ಪಂಪನಗೌಡ,ಪಿಎಸ್ ಐಗಳಾದ ಚಂದ್ರಶೇಖರ ಹೆರಕಲ್,ನೂರಜಾನ ಸಾಬರ ಸ್ಥಳದಲ್ಲಿದ್ದು ಸೂಕ್ತ ರಕ್ಷಣಾ ವ್ಯವಸ್ಥೆ ಮಾಡಿದರು.

Tags :
#ಅಪರಾಧ
Next Article