ಪಿಜಿಸಿಇಟಿ-2024: ಪರಿಷ್ಕೃತ ವೇಳಾಪಟ್ಟಿ ಪ್ರಕಟ
10:44 AM Jul 15, 2024 IST | Samyukta Karnataka
ಬೆಂಗಳೂರು: ಪಿಜಿಸಿಇಟಿ-2024 - ಎಂಬಿಎ ಮತ್ತು ಎಂಸಿಎ ಕೋರ್ಸುಗಳ ಪ್ರವೇಶಕ್ಕೆ ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.
ಎಂಬಿಎ ಮತ್ತು ಎಂಸಿಎ ಕೋರ್ಸುಗಳ ಪ್ರವೇಶಾತಿಗೆ ಪಿಜಿಸಿಇಟಿ-2024 ಅನ್ನು 04-08-2024 ರಂದು ಈ ಕೆಳಗಿನ ಪರಿಷ್ಕೃತ ವೇಳಾಪಟ್ಟಿಯಂತೆ ನಡೆಸಲಾಗುವುದು. ಪಿಜಿಸಿಇಟಿ-2024ಕ್ಕೆ ನೋಂದಣಿ ಮಾಡಿ, ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿರುವ ಅಭ್ಯರ್ಥಿಗಳು ದಿನಾಂಕ 27-07-2024 ರಿಂದ ಪ್ರವೇಶ ಪತ್ರವನ್ನು ಪ್ರಾಧಿಕಾರದ ವೆಬ್‌ಸೈಟಿನಿಂದ ಡೌನ್‌ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗುವುದು. ಎಂಇ / ಎಂಟೆಕ್ ಕೋರ್ಸುಗಳಿಗೆ ಪಿಜಿಸಿಇಟಿ ಪರೀಕ್ಷೆಯ ದಿನಾಂಕಗಳನ್ನು ಸದ್ಯದಲ್ಲಿಯೇ ಪ್ರಕಟಿಸಲಾಗುವುದು ಎಂದಿದೆ.