ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪೇಚಿನಲ್ಲಿ ಪೇಟಿಎಂ

05:00 AM Feb 07, 2024 IST | Samyukta Karnataka

ರಿಸರ್ವ್ ಬ್ಯಾಂಕ್ ಸೂಚನೆಯಂತೆ ಪೇಟಿಎಂ ಫೆ. ೨೯ ರಿಂದ ಪೇಟಿಎಂ ಪೇಮೆಂಟ್ ಬ್ಯಾಂಕ್ ತನ್ನ ವಹಿವಾಟು ನಿಲ್ಲಿಸಬೇಕಾಗಿ ಬಂದಿದೆ. ಹಣ ಠೇವಣಿ ಮಾಡುವಂತಿಲ್ಲ, ಸಾಲ ಇಲ್ಲ, ವಹಿವಾಟು ಇಲ್ಲ, ವ್ಯಾಲೆಟ್ ಟಾಪ್ ಅಪ್ ಮತ್ತು ಬಿಲ್ ಪೇಮೆಂಟ್ ಕೂಡ ಮಾಡುವಂತಿಲ್ಲ.
ಒನ್೯೭ ಕಮ್ಯುನಿಕೇಷನ್ಸ್(ಒಸಿಎಲ್) ಸಂಸ್ಥೆ ಪೇಟಿಎಂ ಪೇಮೆಂಟ್ ಬ್ಯಾಂಕ್(ಪಿಪಿಬಿಎಲ್) ಅನ್ನು ನಿರ್ವಹಿಸುತ್ತದೆ.
ಪಿಪಿಬಿಎಲ್‌ನಲ್ಲಿ ಅಕ್ರಮ ಹಣ ವಹಿವಾಟು ನಡೆದಿದೆ ಎಂದು ರಿಸರ್ವ್ ಬ್ಯಾಂಕ್ ಆರೋಪಿಸಿದೆ. ೨೦೨೨ರ ಆಡಿಟ್ ನಂತರ ಅಕ್ರಮದ ವಾಸನೆ ಆರ್‌ಬಿಐ ಮೂಗಿಗೆ ಬಡಿದಿತ್ತು. ಇದರ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಬ್ಯಾಂಕ್ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಲಿಲ್ಲ. ಅದಕ್ಕಾಗಿ ವ್ಯವಹಾರ ನಿಲ್ಲಿಸಲು ಸೂಚನೆ ನೀಡಲಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಆದರೆ ಬೇರೆ ಬ್ಯಾಂಕ್ ಮೂಲಕ ವ್ಯವಹಾರ ನಡೆಸಲು ಇನ್ನೂ ನಿರ್ಬಂಧ ಹಾಕಿಲ್ಲ ಎಂದು ಪೇಟಿಎಂ ಸ್ಪಷ್ಟಪಡಿಸಿದೆ.
ಪೇಟಿಎಂನಿಂದ ಆಗಿರುವ ನಿಯಮಗಳ ಉಲ್ಲಂಘನೆಯಿಂದಾಗಿ ಗ್ರಾಹಕರ ಮಾಹಿತಿ ಕಳವು, ವಂಚನೆಗೆ ಅನುವು ಮಾಡಿಕೊಟ್ಟಂತಾಗಿದೆ. ಜೊತೆಗೆ ಕಂಪನಿಯ ಪ್ರವರ್ತಕರಲ್ಲಿ ಪಾರದರ್ಶಕತೆ ಕೊರತೆ ಕಾಣಿಸುತ್ತಿದೆ. ಕೆಲವೊಮ್ಮೆ ನಿಯಮ ಪಾಲನೆ ಕುರಿತು ಸುಳ್ಳು ವರದಿಯನ್ನು ಕೂಡ ನೀಡಿರುವುದಕ್ಕೆ ಆರ್‌ಬಿಐ ಇಂಥ ಗಂಭೀರ ಕ್ರಮ ಕೈಗೊಳ್ಳುವುದಕ್ಕೆ ಕಾರಣ. ಆರ್‌ಬಿಐ ತನ್ನ ನಿಲುವನ್ನು ಪ್ರಕಟಿಸಿದ ಮೇಲೆ ೨೦ ಸಾವಿರ ಕೋಟಿ ರೂ. ನಷ್ಟ ಸಂಭವಿಸಿದೆ.
ಏನಿರುತ್ತೇ, ಏನಿರಲ್ಲ?
-ಈಗ ಪಿಪಿಬಿಎಲ್ ಮೂಲಕ ಪೇಟಿಎಂ ನಡೆಸುವ ಎಲ್ಲ ವಹಿವಾಟು ನಿಲ್ಲುತ್ತದೆ. ಇದರಲ್ಲಿ ದೊಡ್ಡ ಮೊತ್ತದ ವಹಿವಾಟು ನಡೆಯುವುದು ವ್ಯಾಲೆಟ್ ಮೂಲಕ. ವ್ಯಾಲೆಟ್‌ನಲ್ಲಿರುವ ಹಣ ಖರ್ಚಾಗುವವರೆಗೂ ಅದನ್ನು ಉಪಯೋಗಿಸಬಹುದು. ಆದರೆ ಮತ್ತೆ ವ್ಯಾಲೆಟ್‌ಗೆ ಹಣ ಕೂಡಿಸುವಂತಿಲ್ಲ. ಪೇಟಿಎಂ ಫಾಸ್ಟ್ಯಾಗ್ ಕೂಡ ನಿಲ್ಲುತ್ತದೆ. ಮೆಟ್ರೋದಲ್ಲಿ ಸಂಚರಿಸಲು ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಪೇಟಿಎಂ ಮೂಲಕ ನಡೆಯುವುದಿಲ್ಲ.
-ಆದರೆ ಪಿಪಿಬಿಎಲ್ ಒಳಗೊಳ್ಳದ ಆರ್ಥಿಕ ಸೇವೆಗಳಾದ ಸಾಲ ನೀಡಿಕೆ, ವಿಮೆ, ಷೇರು ಬ್ರೋಕರೇಜ್, ಪೇಟಿಎಂ ಸೌಂಡ್‌ಬಾಕ್ಸ್, ಪೇಟಿಎಂ ಕಾರ್ಡ್ ಮೆಷಿನ್, ಪೇಟಿಎಂ ಕ್ಯುಆರ್ ಮುಂದುವರಿಯಲಿದೆ.
ಎಷ್ಟು ವ್ಯವಹಾರ?
ಪಿಪಿಪಿಎಲ್ ೨೦೧೭ ರಿಂದ ಬ್ಯಾಂಕಿಂಗ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಡಿಜಿಟಲ್ ಬ್ಯಾಂಕಿಂಗ್, ಉಳಿತಾಯ ಖಾತೆ, ಚಾಲ್ತಿ ಖಾತೆ, ಠೇವಣಿ ಖಾತೆಗಳನ್ನು ಪಾಲುದಾರ ಬ್ಯಾಂಕ್‌ಗಳೊಂದಿಗೆ ನಿರ್ವಹಿಸುತ್ತದೆ. ವ್ಯಾಲೆಟ್‌ಗಳು, ಫಾಸ್ಟಾಗ್ ಪೇಮೆಂಟ್ ಕೂಡ ಸೇರಿದೆ. ಇದರ ಯುಪಿಐ ವ್ಯವಸ್ಥೆಯೇ ಪೇಟಿಎಂ. ೨೦೨೩ರಲ್ಲಿ ಪೇಟಿಎಂನಲ್ಲಿ ೨೪.೭೨ ಕೋಟಿ ವಹಿವಾಟು ನಡೆದಿದೆ. ಸುಮಾರು ೮೦೦೦ ಕೋಟಿ ರೂ. ಮೌಲ್ಯದ ವಸ್ತುಗಳು ಮತ್ತು ಸೇವೆಗಳಲ್ಲಿ ವಹಿವಾಟು ಆಗಿದೆ. ೨.೦೭ ಕೋಟಿ ವಹಿವಾಟುಗಳಲ್ಲಿ ೫,೯೦೦ ಕೋಟಿ ರೂಪಾಯಿ ಹಣ ವರ್ಗಾವಣೆಯಾಗಿದೆ.
ಅಕ್ರಮದ ವಾಸನೆ
ಪೇಟಿಎಂನಲ್ಲಿ ಅಕ್ರಮ ನಡೆಯುತ್ತಿರುವುದು ಎದ್ದು ಕಾಣಿಸುತ್ತಿದೆ. ನೂರಕ್ಕೂ ಹೆಚ್ಚು ಗ್ರಾಹಕರು ಒಂದೇ ಪಾನ್ ಸಂಖ್ಯೆ ಹೊಂದಿರುವ ಪ್ರಕರಣಗಳು ಬೇಕಾದಷ್ಟು. ಕೆಲವು ಪ್ರಕರಣಗಳಲ್ಲಿ ಸುಮಾರು ೧೦೦೦ ಖಾತೆಗಳಿಗೆ ಒಂದೇ ಪಾನ್ ಸಂಖ್ಯೆ ಇದೆ ಎನ್ನುವುದು ಅಕ್ರಮಕ್ಕೊಂದು ಸಣ್ಣ ಉದಾಹರಣೆಯಷ್ಟೆ. ಅಕ್ರಮ ಹಣ ವಹಿವಾಟಿಗೆ ಇದು ಕಾರಣವಾಗಿದೆ. ಲಕ್ಷಾಂತರ ಖಾತೆಗಳ ಗ್ರಾಹಕರ ಕೆವೈಸಿ(ಗ್ರಾಹಕರ ಮಾಹಿತಿ) ಲಭ್ಯವಿಲ್ಲ. ೩೫ ಕೋಟಿ ವ್ಯಾಲೆಟ್ ಖಾತೆಗಳ ಪೈಕಿ ೩೧ ಕೋಟಿ ಖಾತೆಗಳು ನಿಷ್ಕಿçಯಗೊಂಡಿವೆ. ಆ ಗ್ರೂಪ್ ಆಫ್ ಕಂಪನಿಯ ಆರ್ಥಿಕ ವ್ಯವಹಾರ ಮತ್ತು ಹಣಕಾಸೇತರ ವ್ಯವಹಾರಗಳನ್ನು ಒಟ್ಟಿಗೆ ಸೇರಿಸಲಾಗಿದ್ದು, ವ್ಯವಹಾರ ಅಸ್ಪಷ್ಟವಾಗಿದೆ.
ಗ್ರಾಹಕರ ಮುಂದಿನ ದಾರಿ
ಸುಮಾರು ೨೦ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಾದ ಮೊಬಿಕ್‌ವಿಕ್, ಫೋನ್‌ಪೇ, ಎಸ್‌ಬಿಐ, ಐಸಿಐಸಿಐ ಮುಂತಾದವು ವ್ಯಾಲೆಟ್ ಸೇವೆ ಒದಗಿಸುತ್ತವೆ. ಅದೇ ರೀತಿ ಸಾರ್ವಜನಿಕ ಮತ್ತು ಖಾಸಗಿ ವಲಯದ ೩೭ ಬ್ಯಾಂಕುಗಳು ಫಾಸ್ಟಾö್ಯಗ್ ರೀಚಾರ್ಜ್ ಸೇವೆ ನೀಡುತ್ತದೆ.
ಲೇಆಫ್ ಇಲ್ಲ
ಒನ್೯೭ ಕಮ್ಯೂನಿಕೇಷನ್ಸ್ ಕಂಪನಿಗೆ ಸೇರಿದ್ದು. ವಿಜಯ ಶೇಖರನ್ ಸಂಸ್ಥಾಪಕರು. ಶೇ.೫೧ ರಷ್ಟು ಷೇರು ಹೊಂದಿದ್ದಾರೆ. ಶೇ.೪೯ರಷ್ಟು ಷೇರನ್ನು ಇತರರು ಹೊಂದಿದ್ದಾರೆ. ಪೇಟಿಎಂ ವ್ಯಾಲೆಟ್ ಬ್ಯಾಂಕ್ ವ್ಯವಹಾರದಲ್ಲಿ ಪ್ರಮುಖ ಅಂಗ. ಸದ್ಯದಲ್ಲಿಯೇ ನೌಕರರನ್ನು ಕೆಲಸದಿಂದ ತೆಗೆಯುವುದಿಲ್ಲ ಎಂದು ವಿಜಯ ಶೇಖರನ್ ತಮ್ಮ ನೌಕರರಿಗೆ ಭರವಸೆ ನೀಡಿದ್ದಾರೆ.

Next Article