ಪ್ರಕರಣದ ವಿಚಾರಣೆ: ಪ್ರಮಾಣ ವಚನ ಬೋಧಿಸದಂತೆ ಮನವಿ
ಬೆಂಗಳೂರು: ಪ್ರಕರಣದ ವಿಚಾರಣೆ ಮುಗಿಯುವವರೆಗೂ ನಾಸೀರ್ ಹುಸೇನ್ ಅವರಿಗೆ ಪ್ರಮಾಣ ವಚನ ಬೋಧಿಸದಂತೆ ರಾಜ್ಯ ಸಭಾ ಅಧ್ಯಕ್ಷರೂ ಆದ ಉಪರಾಷ್ಟ್ರಪತಿಗಳಿಗೆ ಬಿಜೆಪಿ ಮನವಿ ನೀಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಪಾಕಿಸ್ತಾನ್ ಜಿಂದಾಬಾದ್ ಕೂಗಿಸಲೆಂದೇ ಭಾರತ ವಿರೋಧಿ ವಿದ್ರೋಹಿಗಳನ್ನು ವಿಧಾನ ಸೌಧದೊಳಗೆ ಪಾಸ್ ಕೊಟ್ಟು ಕರೆತಂದ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಅವರನ್ನೂ ಆರೋಪಿಯಾಗಿ ಪರಿಗಣಿಸಿ ಕಾನೂನು ಕ್ರಮ ಜರುಗಿಸಲಿ.
ಸದರಿ ಪ್ರಕರಣವನ್ನು ದೇಶದ್ರೋಹ ಹಾಗೂ ಭಾರತದ ಸಾರ್ವಭೌಮತ್ವವನ್ನು ಅವಮಾನಿಸಿದ ಪ್ರಕರಣ ಎಂದು ಪರಿಗಣಿಸಿ ಪೊಲೀಸರು ತನಿಖೆ ನಡೆಸಲಿ. ಪ್ರಕರಣದ ವಿಚಾರಣೆ ಮುಗಿಯುವವರೆಗೂ ನಾಸೀರ್ ಹುಸೇನ್ ಅವರಿಗೆ ಪ್ರಮಾಣ ವಚನ ಬೋಧಿಸದಂತೆ ರಾಜ್ಯ ಸಭಾ ಅಧ್ಯಕ್ಷರೂ ಆದ ಉಪರಾಷ್ಟ್ರಪತಿಗಳಿಗೆ ಬಿಜೆಪಿ ಮನವಿ ನೀಡಲಿದೆ. ಕಾಂಗ್ರೆಸ್ ಗೆ ನಿಜಕ್ಕೂ ರಾಷ್ಟ್ರೀಯ ಬದ್ಧತೆ ಇದ್ದರೆ ಈ ಪ್ರಕರಣದಲ್ಲಿ ವಿದ್ರೋಹಿಗಳನ್ನು ಬೆಂಬಲಿಸದೇ ತನ್ನ ದೇಶ ನಿಷ್ಠೆ ಪ್ರದರ್ಶಿಸಲಿ ಎಂದಿದ್ದಾರೆ.