ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪ್ರತಿಫಲಾಪೇಕ್ಷೆ ರಹಿತ ಕರ್ಮ ವಿಹಿತ

04:00 AM Aug 28, 2024 IST | Samyukta Karnataka

ವಿಹಿತ ಕರ್ಮಗಳನ್ನು ಮಾಡದೇ ಪುಣ್ಯ ದೊರಕದು. ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಕರ್ಮವನ್ನು ಮಾಡಬೇಕು. ಎಂಥ ಕರ್ಮಗಳನ್ನು ಮಾಡಬೇಕು. ಮಾಡುವ ಕರ್ಮದಲ್ಲಿ ಮನಸ್ಸು, ಬುದ್ಧಿ ಹೇಗಿರಬೇಕು. ಮೊದಲಾದ ವಿಷಯಗಳನ್ನು ಹೇಳುತ್ತಾನೆ.
ವಿಹಿತ ಕರ್ಮಗಳು ಎಂದರೆ, ಕುಕರ್ಮಗಳನ್ನು ಮಾಡದೇ ಇರುವುದು. ಮನುಷ್ಯ ಆನಂದವಾಗಿರಬೇಕಾದರೆ, ಸಾಧನೆ ಅತ್ಯಗತ್ಯವಾಗಿ ಬೇಕೇ ಬೇಕು. ಪರೋಪಕಾರ, ಹೆತ್ತವರ ಸೇವೆ, ತಪಸ್ಸು, ಮಾಡಬೇಕಾಗುತ್ತದೆ. ಕರ್ಮ ಮಾಡುವದರಿಂದ ದುಃಖದ ಲೇಪ ಸಹಜವಾದದ್ದು, ಆದರೆ ಕರ್ಮ ಫಲದ ಆಸೆಯಿಂದ ಮಾಡಿದರೆ ದುಃಖ ತಪ್ಪಿದ್ದಲ್ಲ. ಮಾಡಿದ ಕರ್ಮವನ್ನು ಭಗವಂತನಿಗೆ ಸಮರ್ಪಿಸಬೇಕು. ಹೀಗಾದಾಗ ಮಾತ್ರ. ಅನಾರೋಗ್ಯ, ಕೌಟುಂಬಿಕ ಸಮಸ್ಯೆ, ಆರ್ಥಿಕ ಸಮಸ್ಯೆ ಹೀಗೆ ಐಹಿಕವಾದ ಎಲ್ಲ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದಾಗಿದೆ.
ಇನ್ನು ಅಧ್ಯಾತ್ಮಿಕವಾಗಿಯೂಮಾಡುವ ಅನೇಕ ಕರ್ಮಗಳಿವೆ. ಭಗ ವಂತ ಸಂಪ್ರೀತಾರ್ಥವಾಗಿ ಹೋಮಹವನಾದಿಗಳನ್ನು ಮಾಡಬೇಕು. ಕೆಲವರಿಗೆ ಇದಾಗದೇ ಹೋದಲ್ಲಿ ಭಗವಂತನ ಸ್ತ್ರೋತ್ರಗಳನ್ನು ಮಾಡಬೇಕಾಗುತ್ತದೆ.
ಐಹಿಕದುಃಖದಿಂದ ಎಲ್ಲ ಸಮಸ್ಯೆಗಳು ಪರಿಹಾರವಾಗಬೇಕಾದರೆ ಇಂದಿನ ದಿನಗಳಲ್ಲಿ ವಿಷ್ಣು ಸಹಸ್ರನಾಮ ಪಠಣೆ ಅತ್ಯಂತ ಪರಿಹಾರವಾದ ಮಾರ್ಗವಾಗಿದೆ.
ಇಷ್ಟು ಮಾಡದಷ್ಟರ ಮಟ್ಟಿಗೆ ನಾವು ಇಂದು ಆಲಸಿಗಳಾಗಿದ್ದೇವೆ. ಅದಕ್ಕೆ ರಾಘವೇಂದ್ರ ಸ್ವಾಮಿಗಳು ಸುಖ ಬೇಕು ಎಂದರೆ ಅದಕ್ಕೆ ಪ್ರಯತ್ನ ಮಾಡಬೇಕು. ಅಂದಾಗ ಮಾತ್ರ ಸತ್ಕರ್ಮಗಳ ಫಲಗಳನ್ನು ಅನುಭವಿಸಲು ಹಕ್ಕಿದೆ ಎಂದು ಹೇಳಿದ್ದಾರೆ.
ನಿನಗೆ ಯಾವುದೇ ರೀತಿಯ ತಡೆಯಿಲ್ಲ. ಕರ್ಮ ಮಾಡದೆ ಫಲ ಬಯಸಿದರೆ ದೇವರು ಕೊಡುವುದಿಲ್ಲ. ಹೊಟ್ಟೆ ತುಂಬ ಊಟ ಮಾಡಲು ಬೇಕು ಅಂದರೆ ಅನ್ನದಾನ ಮಾಡಬೇಕು. ಈ ಜನ್ಮದಲ್ಲಿ ಊಟ ಮಾಡಿದಂತೆ ಮರುಜನ್ಮದಲ್ಲೂ ಊಟ ಸಿಗಬೇಕು ಎಂದರೆ ಈ ಜನ್ಮದಲ್ಲಿ ಅನ್ನದಾನ ಮಾಡಿರಬೇಕು. ಈ ಜನ್ಮದಲ್ಲಿ ಮನೆಗೆ ಬಂದ ಅತಿಥಿಗಳಿಗೆ ಚೆನ್ನಾಗಿ ಆಥಿತ್ಯ ಮಾಡಿ ಅನ್ನದಾನ ಮಾಡಿದ್ದರೆ ಇತರ ಒಳ್ಳೆಯ ಮನೆಯಲ್ಲಿ ಜನ್ಮ ಸಿಗುತ್ತದೆ ಇಲ್ಲದಿದ್ದರೆ ದಾರಿಯಲ್ಲಿ ಬಿದ್ದು ಇರಬೇಕಾಗುತ್ತದೆ. ಕರ್ಮ ಮಾಡದೆ ಸುಖ ಅನುಭವಿಸುತ್ತೇನೆ ಎನ್ನುವುದು ಸರಿಯಲ್ಲ.
ಈ ಒಂದು ಸಂದೇಶವನ್ನು ಶ್ರೀಮದಾಚಾರ್ಯರು, ಕೃಷ್ಣ ಭಗವದ್ಗೀತೆಯಲ್ಲಿ ಮಾಡಿದ ಉಪದೇಶವನ್ನು ಟೀಕಾಕ್ಕೃತ್ವಾದರು ನೀಡಿದಂತಹ ಒಂದು ಜ್ಞಾನ ಸಂದೇಶವನ್ನು ಶ್ರೀ ರಾಘವೇಂದ್ರ ಸ್ವಾಮಿಗಳು ತಮ್ಮ ಗೀತಾ ವಿವೃತಿಯಲ್ಲಿ ಚೆನ್ನಾಗಿ ಕರ್ಮ ಸಿದ್ಧಾಂತ ವಿವರಿಸಿ ಹೇಳಿದ್ದಾರೆ.
ಗಿಡ ಬೆಳೆಸುವುದಿಲ್ಲ.. ನೀರು ಕೊಡುವುದಿಲ್ಲ ಫಲಮಾತ್ರ ನಮಗೆ ಬೇಕು. ತೋಟದಲ್ಲಿ ಮಾಡಬೇಕಾದ ಏನೆಲ್ಲ ಕೆಲಸವನ್ನು ಮಾಡಲು ತಯಾರಿರುವುದಿಲ್ಲ. ಫಲವ ಬಂದ ಹಣ್ಣನ್ನು ರಸ ತಗೆದು ಹಿಂಡುವುದು ಇಲ್ಲ. ಆದರೆ ಬೇರೆಯವರು ಮಾಡಿಟ್ಟ ರಸಾಯನವನ್ನು ತಿನ್ನೋದಕ್ಕೆ ಮಾತ್ರ ತಯಾರಾಗಿ ಬರುವುದಲ್ಲ, ಕರ್ಮವೇನು ಬೇಡ, ಕರ್ಮ ಮಾಡದೇ ಫಲ ಹೇಗೆ ಸಿಗುತ್ತದೆ? ಕರ್ಮಣ್ಯೆ ವಾಧಿಕಾರಸ್ತೆ ಮಾಫಲೇಶು ಕದಾಚನ…. ಕರ್ಮಗಳನ್ನು ಮಾಡಿ, ದುಃಖ ಬೇಕು ಎಂದು ಯಾರಾದ್ರೂ ಕೇಳುತ್ತಾರೆಯೇ? ಮಾಡಬಾರದ ಕರ್ಮ ಮಾಡಿದರೆ ಬೇಡ ಎಂದರು ಕರ್ಮ ಬಂದು ಬಿಡುತ್ತದೆ. ಹಾಗೆ ನಾವು ಒಳ್ಳೆ ಮಾರ್ಗದಲ್ಲಿ ಒಳ್ಳೆಯ ಕರ್ಮಗಳನ್ನು ಮಾಡಿದರೆ ಸುಖವು ತಾನಾಗಿಯೇ ಬರುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

Next Article