ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪ್ರಧಾನಿ ಮೋದಿ ಪ್ರಚಾರ ನಿಗದಿಗೆ ಹಗ್ಗಜಗ್ಗಾಟ

12:24 PM Apr 13, 2024 IST | Samyukta Karnataka

ಬೆಂಗಳೂರು: ಲೋಕಸಭಾ ಚುನಾವಣೆ ಪ್ರಚಾರಾರ್ಥವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ನಿಗದಿಪಡಿಸಲು ರಾಜ್ಯ ಬಿಜೆಪಿಯಲ್ಲಿ ಹಗ್ಗಜಗ್ಗಾಟ ನಡಯುತ್ತಿದ್ದು, ಮೊದಲ ಪ್ರಚಾರ ಸಭೆಯ ತಾತ್ಕಾಲಿಕ ಪ್ರವಾಸ ಪಟ್ಟಿಯೇ ಮೂರು ಬಾರಿ ಬದಲಾವಣೆ ಆಗಿದೆ.
ಈ ಮೊದಲು ಪ್ರಧಾನಿ ಮೋದಿ ಅವರು ಏ. ೧೪ರಂದು ಮಧ್ಯಾಹ್ನ ೩ ಗಂಟೆಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಸಭೆ ನಡೆಸಿ, ನಂತರ ಸಂಜೆ ೫.೩೦ಕ್ಕೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಹೆಬ್ಬಾಳ ಮತ್ತು ದಾಸರಹಳ್ಳಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರೋಡ್ ನಡೆಸುವ ಕಾರ್ಯಕ್ರಮ ನಿಗದಿಯಾಗಿತ್ತು.
ಚಿಕ್ಕಬಳ್ಳಾಪುರ ಅಭ್ಯರ್ಥಿ ಡಾ.ಕೆ.ಸುಧಾಕರ್ ನೇರವಾಗಿ ಅಮಿತ್ ಶಾ ಮೂಲಕ ಪ್ರಧಾನಿ ಕಾರ್ಯಕ್ರಮ ನಿಗದಿಪಡಿಸಿಕೊಂಡಿದ್ದರು ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ವರಿಷ್ಠರ ಮೂಲಕವೇ ತಮ್ಮ ಕ್ಷೇತ್ರದಲ್ಲಿ ರೋಡ್ ಶೋ ನಿಗದಿಪಡಿಸಿಕೊಂಡಿದ್ದರು ಎನ್ನಲಾಗಿದೆ. ಆದರೆ ರಾಜ್ಯ ಘಟಕ ಈ ಬಗ್ಗೆ ಅಸಮಾಧಾನ ಹೊಂದಿತ್ತು ಎನ್ನಲಾಗಿದೆ. ಅಷ್ಟೇ ಅಲ್ಲದೇ ಬೆಂಗಳೂರು ಕೇಂದ್ರದ ಅಭ್ಯರ್ಥಿ ಪಿ.ಸಿ. ಮೋಹನ್ ಮತ್ತು ಬೆಂಗಳೂರು ದಕ್ಷಿಣ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ಕೇವಲ ಉತ್ತರ ಕ್ಷೇತ್ರದಲ್ಲಿ ರೋಡ್ ಶೋ ನಡೆಸುವ ಬಗೆಗೆ ಅಸಮಾಧಾನ ವ್ಯಕ್ತಪಡಿಸಿದರು ಎಂದೂ ಹೇಳಲಾಗಿದೆ.
ಅದಾದ ಬಳಿಕ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಉತ್ತರ ಕ್ಷೇತ್ರದ ಜೊತೆಗೆ ಮಂಗಳೂರು ಕ್ಷೇತ್ರವನ್ನೂ ಸೇರ್ಪಡೆ ಮಾಡಲಾಗಿತ್ತು. ಆದರೆ ಅಂತಿಮವಾಗಿ ಹಿಂದಿನ ಎಲ್ಲ ಪ್ರಸ್ತಾವಗಳನ್ನು ಕೈಬಿಟ್ಟು ಬಿಜೆಪಿ ಗೆಲ್ಲುವ ಎ ಪ್ಲಸ್’ ಪಟ್ಟಿಯಲ್ಲಿರುವ ಮೈಸೂರು ಮತ್ತು ಮಂಗಳೂರು ಕ್ಷೇತ್ರದಲ್ಲಿ ಪ್ರಧಾನಿ ಕಾರ್ಯಕ್ರಮ ನಿಗದಿಯಾಗಿದೆ. ಈ ಬಗ್ಗೆ ಪ್ರಧಾನಿ ಕಾರ್ಯಾಲಯದಿಂದ ಕರ್ನಾಟಕ ಪ್ರವಾಸ ತಾತ್ಕಾಲಿಕ ಕಾರ್ಯಕ್ರಮದ ಮೂರನೇ ಪರಿಷ್ಕೃತ ಪಟ್ಟಿಯನ್ನು ಗೃಹ ಇಲಾಖೆಗೆ ರವಾನಿಸಿದೆ. ಹೀಗಾಗಿ ಏ.೧೪ರಂದು ಮಧ್ಯಾಹ್ನ ೪.೩೦ಕ್ಕೆ ಮೈಸೂರಿನಲ್ಲಿ ಪ್ರಚಾರ ಸಭೆ ಮತ್ತು ಮಂಗಳೂರಿನಲ್ಲಿ ರಾತ್ರಿ ೭ಕ್ಕೆ ರೋಡ್ ಶೋ ನಡೆಸುವರು. ಖಚಿತವಾಗಿ ಗೆಲ್ಲುವ ವಿಶ್ವಾಸವಿರುವ ಕ್ಷೇತ್ರಗಳನ್ನುಎ ಪ್ಲಸ್’ ಎಂದೂ, ಗೆಲ್ಲುವ ವಿಶ್ವಾಸವಿರುವ ಕ್ಷೇತ್ರಗಳನ್ನು ಎ’ ಎಂದೂ ಹಾಗೂ ಗೆಲ್ಲುವ ಅವಕಾಶ ಶೇ.೫೦ರಷ್ಟು ಇರುವ ಕ್ಷೇತ್ರಗಳನ್ನುಬಿ ಪ್ಲಸ್’ ಎಂದೂ ಮತ್ತು ಗೆಲ್ಲುವ ಅವಕಾಶ ಕಡಿಮೆ ಇರುವ ಕ್ಷೇತ್ರಗಳನ್ನು ಬಿ ಎಂದು ಬಿಜೆಪಿ ಗುರುತಿಸಿದೆ ಎನ್ನಲಾಗಿದೆ.

Next Article