ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪ್ರೀತಿ-ಸುರಕ್ಷತೆಯೇ ಆರೋಗ್ಯಕರ

03:33 AM Dec 03, 2024 IST | Samyukta Karnataka

ನಮ್ಮ ದೇಹವು ಬ್ರಹ್ಮಾಂಡದ ಅಣುರೂಪವಾಗಿದ್ದು, ಶುದ್ಧ ಶಕ್ತಿಪುಂಜವಾಗಿದೆ. ಯಾವುದೇ ವಸ್ತುವನ್ನು ಅಂದರೆ; ಮರದ ತುಂಡು, ಬೆಂಕಿಕಡ್ಡಿ, ಟಂಗ್‌ಸ್ಟನ್ ತಂತಿಯನ್ನು ಭೌತಿಕ ಪ್ರಪಂಚದಿಂದ ಕಣ್ಮರೆಯಾಗುವಂತೆ ಮಾಡಬಹುದು. ಎಲೆಕ್ಟ್ರಾನ್ ಸೂಕ್ಷ್ಮದರ್ಶಕದ ಅಡಿಯಲ್ಲಿ ಅದನ್ನು ಪರೀಕ್ಷಿಸಿದಾಗ ಯಾವುದೇ ಭೌತಿಕವಸ್ತುವು ಮಂಜಿಗಿಂತ ಹೆಚ್ಚು ಘನವಲ್ಲದ ಮಬ್ಬು ಮೋಡವಾಗಿ ಬದಲಾಗಿರುತ್ತದೆ. ಇದು ಪರಿಶುದ್ಧ, ಅದೃಶ್ಯತರಂಗಗಳ ಮೌಲ್ಯವರ್ಧಿತ ಹಂತದ ಮತ್ತೊಂದು ರೂಪ. ಆ ಕಂಪನಗಳಲ್ಲಿನ ಶಕ್ತಿಯ ಬಿಡುಗಡೆ ಅಗಾಧ ಉಪಯುಕ್ತತೆಯನ್ನು ಹೊಂದಿರುವ ಕಾರಣಕ್ಕಾಗಿಯೇ ಕಟ್ಟಿಗೆಯನ್ನು ಸುಡುವ, ಬೆಂಕಿಯನ್ನು ಬೆಂಕಿಕಡ್ಡಿ ಮೂಲಕ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವ, ಬಲ್ಬಿನಲ್ಲಿ ಟಂಗ್‌ಸ್ಟನ್ ತಂತಿಯ ಮೂಲಕ ಬೆಳಕು ಮತ್ತು ಶಾಖವನ್ನು ಹರಿಸಬಹುದಾದ ಸಾಧ್ಯತೆಗಳು ಕಂಡುಹಿಡಿಯಲ್ಪಟ್ಟು ಮಾನವ ಮತ್ತು ಜಗತ್ತಿನ ವಿಕಾಸದ ಆಯಾಮವೇ ಬದಲಾಯಿತು.
ದೇಹವೆಂಬುದು ಪ್ರತಿಯೊಂದು ಸಂದರ್ಭದಲ್ಲೂ ಗೋಚರ ಮತ್ತು ಅಗೋಚರ ಪ್ರಪಂಚದ ನಡುವಿನ ಸಂಧಿಯಲ್ಲಿ ಬಳಕೆಯಾಗದ ಶಕ್ತಿಯಾಗಿ ನಿಂತಿರುತ್ತದೆ. ಮರದ ತುಂಡು ಈ ಸಂಧಿಯಲ್ಲಿ ಏನೂ ಮಾಡದೆ ನಿರ್ಲಿಪ್ತವಾಗಿರಬಹುದು; ಆದರೆ ದೇಹ ಹಾಗಿರಲು ಸಾಧ್ಯವಿಲ್ಲ. ಜೀವಕೋಶಗಳು ನಿರಂತರವಾಗಿ ದೇಹದ ಗಡಿಯುದ್ದಕ್ಕೂ ಹಿಂದೆ ಮುಂದೆ ಚಲಿಸುತ್ತಲೇ ಇರುತ್ತವೆ; ದೇಹದೊಳಗಿನ ಬೆಳಕನ್ನು (ಪ್ರಾಣಶಕ್ತಿ) ಬೆಳಗಿಸುತ್ತಲೇ ಇರುತ್ತವೆ. ಡಿಎನ್‌ಎ (ಡಿಯೋಕ್ಸಿರೈಬೋನ್ಯೂಕ್ಲಿಯಿಕ್ ಆಮ್ಲ-ಒಂದು ಜೀವಿಯ ಅಭಿವೃದ್ಧಿ ಮತ್ತು ಕಾರ್ಯನಿರ್ವಹಣೆಗೆ ಅನುವಂಶಿಕ ಮಾಹಿತಿಯನ್ನು ಸಾಗಿಸುವ ಅಣು) ಇದನ್ನೆಲ್ಲಾ ಹೇಗೆ ಮಾಡಲು ಕಲಿತಿದೆ ಎಂಬುದು ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಇದು ಟಂಗ್‌ಸ್ಟನ್ ತಂತಿ ಬಾಹ್ಯ ನೆರವಿಲ್ಲದೆ ಸ್ವತಃ ಉರಿಯಲು ಕಲಿತಂತೆಯೇ! ಆದರೆ ಪವಾಡವು ಅದಕ್ಕಿಂತ ಆಳದಲ್ಲಿದೆ. ಮರ ಸುಟ್ಟಾಗ ಬೂದಿಯಾಗಿ ಅದರ ಅಸ್ತಿತ್ವವೇ ಕಣ್ಮರೆಯಾಗುತ್ತದೆ; ಟಂಗ್‌ಸ್ಟನ್ ತಂತಿಯೂ ಒಂದುದಿನ ಸುಟ್ಟುಹೋಗುತ್ತದೆ; ಆದರೆ ಡಿಎನ್‌ಎ ಹಾಗಲ್ಲ; ಶಕ್ತಿಯನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ ಮತ್ತು ನಿರಂತರವಾಗಿ ಬೆಳೆಯುತ್ತಲೇ ಇರುತ್ತದೆ! ವಾಸ್ತವವಾಗಿ, ಡಿಎನ್‌ಎ ಮಾಡುವ ಏಕೈಕ ಕಾರ್ಯವೆಂದರೆ; ಕಚ್ಛಾಶಕ್ತಿಯನ್ನು (ಶಾಖ ಮತ್ತು ಮಿದುಳಿನಲ್ಲಿನ ವಿದ್ಯುತ್ ಪ್ರಚೋದನೆಗಳು) ಅಗಣಿತ ಸಂಕೀರ್ಣ ಪ್ರಕ್ರಿಯೆಗಳಾಗಿ ಪರಿವರ್ತಿಸುವುದು. ಹೀಗಾಗಿಯೇ ಮಾನವದೇಹವು ಶಕ್ತಿಭರಿತ ಮೋಡವಾಗಿದ್ದು ತನ್ನನ್ನು ತಾನು ಜೀವಂತವಿರಿಸಿಕೊಳ್ಳುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ; ದೇಹದಲ್ಲಿ ರಹಸ್ಯಗಳೊಳಗೆ ಅಸಂಖ್ಯ ಮತ್ತು ಅಖಂಡ ರಹಸ್ಯಗಳು ಅಡಗಿರುವುದನ್ನು ಕಾಣಬಹುದು.
ನೀವು ಇನ್ನೊಬ್ಬ ವ್ಯಕ್ತಿಯ ಬಗ್ಗೆ ನಿಮ್ಮ ಅಂತಃಸ್ಫುರಣೆಯಿಂದ ಎತ್ತಿಕೊಳ್ಳುವ ಎಲ್ಲಾ ಗುಣಗಳನ್ನು ಯೋಚಿಸಿ. ಆತನಿರುವ ಸ್ಥಿತಿಯ ಆಧಾರದಿಂದ ಆತ/ಆಕೆ ಸಂತೋಷವಾಗಿದ್ದಾರೆಯೇ ಅಥವಾ ದುಃಖಿತರಾಗಿದ್ದಾರೆಯೇ; ಶಾಂತವಾಗಿದ್ದಾರೆಯೇ ಅಥವಾ ಗೊಂದಲದಲ್ಲಿದ್ದಾರೆಯೇ ಎಂಬುದನ್ನು ಗ್ರಹಿಸಬಹುದು. ಆತನ/ಆಕೆಯ ಕಣ್ಣುಗಳಲ್ಲಿ ಕಣ್ಣಿಟ್ಟು ಗಮನಿಸಿದಾಗ ಜಾಗೃತ ಅಥವಾ ನಿಷ್ಕಿೃಯತೆ; ಮೃದುತ್ವ ಅಥವಾ ಕಠಿಣತೆಯನ್ನು ಗುರುತಿಸಬಹುದು. ಅಂದರೆ; ಶಕ್ತಿಯ ಸಹಿ' ಹೊಂದಿರದ ಒಬ್ಬನೇ ಒಬ್ಬ ಮಾನವನನ್ನು ಹುಡುಕುವುದು ಅಸಾಧ್ಯ! ಈಶಕ್ತಿಯ ಸಹಿ'ಯ ಉಪಯುಕ್ತತೆಯೆಂದರೆ; ಈ ಸಹಿಯನ್ನು ಬದಲಾಯಿಸುವ ಮೂಲಕ ನೀವು ಬಯಸುವ ಯಾವುದೇ ಪರಿವರ್ತನೆಯನ್ನು ಪ್ರಕಾಶಕ್ಕೆ ತರಬಹುದು. ಇಂತಹ ಪರಿವರ್ತನೆಯ ಮೂಲಕ ಗೊಂದಲವನ್ನು ಶಾಂತಿಯನ್ನಾಗಿ; ದುಃಖವನ್ನು ಸಂತೋಷವನ್ನಾಗಿಸಬಹುದು. ಇದು ಏನನ್ನು ಸೂಚಿಸುತ್ತದೆಯೆಂದರೆ; ಮಾನವದೇಹವು ಅತ್ಯಂತ ಸೂಕ್ಷö್ಮಮಟ್ಟದಲ್ಲಿ ಒಂದು ರೀತಿಯ ಶಕ್ತಿಪರಿವರ್ತಕ'ವಾಗಿದ್ದು, ಜೀವಂತಿಕೆಯ ಸಕಲಮೂಲಗಳನ್ನು ಸ್ಪರ್ಶಿಸಬಹುದು. ಸಂತರುಗಳು ಗೋಚರ ಮತ್ತು ಅಗೋಚರ ಪ್ರಪಂಚದ ನಡುವಿನ ಸಂಧಿಯಲ್ಲಿ ನಿಂತು ದೇವರ ಉಪಸ್ಥಿತಿಯನ್ನು ಅನುಭವಿಸುತ್ತಿದ್ದರು. ಆ ಕಾರಣವಾಗಿಯೇ ಸಂತರು ಪ್ರಸರಿಸುವ ಶಕ್ತಿಯು ಶಾಖ ಅಥವಾ ಬೆಳಕಿಗಿಂತಲೂ ಹೆಚ್ಚು ಸೂಕ್ಷö್ಮವಾಗಿರುತ್ತದೆ. ವಿಜ್ಞಾನಕ್ಕೆ ಇನ್ನೂ ಪೂರ್ಣವಾಗಿ ಅರ್ಥವಾಗದ ರೀತಿಯಲ್ಲಿ ನಮ್ಮ ದೇಹವೂ ಸಹ ಇದೇ ಚೈತನ್ಯಶಕ್ತಿಯನ್ನು ಬಳಸುತ್ತಿದೆ. ಚೈತನ್ಯಶಕ್ತಿಯ ಮೂಲಭೂತಕಾರ್ಯದೇಹವನ್ನು ಜೀವಂತವಾಗಿರಿಸುವುದು'. ಚೈತನ್ಯಶಕ್ತಿಯ ಹರಿವು ಸಮರ್ಪಕವಾಗಿದ್ದಾಗ ದೇಹ ಆರೋಗ್ಯಪೂರ್ಣವಾಗಿರುತ್ತದೆ. ಈ ವಾಸ್ತವಗ್ರಹಿಕೆ ಪ್ರಸ್ತುತ ಅಸ್ತಿತ್ವದಲ್ಲಿರುವ ಔಷಧವಿಜ್ಞಾನದ ದೃಷ್ಟಿಕೋನವನ್ನು ಮೀರಿದೆ. ನೂರು ವರ್ಷಗಳ ಹಿಂದೆ ರೋಗಾಣುಗಳು ಔಷಧ ವಿಜ್ಞಾನದ `ನಕ್ಷತ್ರ'ಗಳಾಗಿದ್ದವು! ಎಲ್ಲಾ ರೀತಿಯ ಸಂಶೋಧನಾ ಉತ್ಸಾಹವು ಹೊಸ ಹೊಸ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ಕಂಡುಹಿಡಿಯುವ; ಅವುಗಳನ್ನು ಬಳಸಿಕೊಂಡು ರೋಗವನ್ನು ಸೃಷ್ಟಿಸಿ ನಂತರದಲ್ಲಿ ಅವುಗಳನ್ನೇ ಬಳಸಿಕೊಂಡು ಆ ರೋಗಕ್ಕೆ ಕಾರಣವಾದ ಸೂಕ್ಷ್ಮಜೀವಿಗಳನ್ನು ಕೊಲ್ಲುವ ವಿಧಾನದ ಮೇಲೆಯೇ ಕೇಂದ್ರೀಕೃತವಾಗಿತ್ತು. ಇಂದು ವಂಶವಾಹಿಗಳು (ಜೀನ್) ಆ ರೋಗಾಣುಗಳ ಸ್ಥಾನ ಪಡೆದಿದ್ದು ಹೊಸ ವಂಶವಾಹಿಗಳನ್ನು ಕಂಡುಹಿಡಿಯುವುದು; ನಿರ್ದಿಷ್ಟ ರೋಗಗಳೊಂದಿಗೆ ಅವುಗಳನ್ನು ಹೊಂದಿಸುವುದು; ನಂತರ ದೇಹಕ್ಕೆ ಹಾನಿಯಾಗುವ ಮೊದಲು ಅವುಗಳನ್ನು ಕುಶಲತೆಯಿಂದ ಸಂಹರಿಸುವ ಸಂಶೋಧನೆಯ ಅದೇ ಮಾದರಿ ಪುನರಾವರ್ತನೆಯಾಗುತ್ತಿದೆ. ಯಾವುದೇ ವಸ್ತುವಿನಂತೆ ಸೂಕ್ಷ್ಮಜೀವಿಗಳನ್ನು ಮತ್ತು ವಂಶವಾಹಿಗಳನ್ನು ಕೂಡಾ ಶಕ್ತಿಯ ಮಟ್ಟಕ್ಕೆ ಪರಿವರ್ತಿಸಬಹುದಾಗಿದ್ದು ಅಂತಿಮವಾಗಿ ಮೂಲಶಕ್ತಿಯ ಭಾಗವೇ ಆಗುತ್ತದೆ.
ದೇಹದ ಶಕ್ತಿಯಲ್ಲಿನ ಒಂದು ಅತಿಚಿಕ್ಕ ಬದಲಾವಣೆ ಮಾರಕ ಪರಿಣಾಮಗಳಿಗೆ ಕಾರಣವಾಗಬಹುದು. ಸಂತೋಷದಿಂದ ಬಾಳುತ್ತಿರುವ ವ್ಯಕ್ತಿಯನ್ನು ವಿವಾಹ ವಿಚ್ಛೇದನ ಅಥವಾ ಹಣಕಾಸು ನಷ್ಟದಂತಹ ಒಂದು ವಿಚಾರ ಆತನ ನೆಮ್ಮದಿಯನ್ನು ಇನ್ನಿಲ್ಲದಂತೆ ನಾಶ ಮಾಡಬಹುದು. ಇಂತಹ ಆಘಾತಕಾರಿ ವಿಚಾರ ವ್ಯಕ್ತಿಗೆ ಭೌತಿಕವಾಗಿ ಚುಚ್ಚುಮದ್ದು ನೀಡುವಾಗ ಉಂಟಾಗುವ ಅನುಭವವನ್ನೇ ನೀಡುತ್ತದೆ. ಅಂದರೆ; ದೇಹದಲ್ಲಿ ರಾಸಾಯನಿಕ ಬದಲಾವಣೆಗಳು ತಕ್ಷಣವೇ ಸಂಭವಿಸುತ್ತವೆ. ಒತ್ತಡ, ನಿಃಶ್ಯಕ್ತಿ, ಅಸಮರ್ಪಕ ಕಾರ್ಯನಿರ್ವಹಣೆ ಅಂಗದಿಂದ ಅಂಗಕ್ಕೆ ಬಹುಬೇಗ ಹರಡಿ ವ್ಯಕ್ತಿ ಖಿನ್ನತೆಗೆ ಒಳಗಾಗುತ್ತಾನೆ. ಸುದ್ದಿ ಸಾಕಷ್ಟು ವಿನಾಶಕಾರಿಯಾಗಿದ್ದರೆ ದೇಹದ ಶಕ್ತಿಯ ವಿನ್ಯಾಸಗಳು ವರ್ಷಗಳ ಕಾಲ ಸಹಜಸ್ಥಿತಿಗೆ ಮರಳಿಬಾರದಷ್ಟು ಗಂಭೀರವಾಗಿರುತ್ತದೆ. ಬಾಳಸಂಗಾತಿಯ ನಷ್ಟವು ರೋಗಕ್ಕೆ ಒಳಗಾಗಿಸಿ ಜೀವನಾವಧಿಯನ್ನು ಕುಂಠಿತಗೊಳಿಸುತ್ತದೆ. (ಅಂಕಿ-ಅಂಶಗಳ ಪ್ರಕಾರ; ವಿಧವೆಯರಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚು ಎಂಬುದು ಸಾಬೀತಾಗಿದೆ)
ಮೇಲ್ನೋಟಕ್ಕೆ ಹೃದಯಾಘಾತ, ಅಕಾಲಿಕ ಸಾವು, ಖಿನ್ನತೆ ಮತ್ತು ಪೆನ್ಸಿಲಿನ್‌ನಂತಹ ಔಷಧಗಳ ಅಡ್ಡಪರಿಣಾಮಗಳು ಒಂದಕ್ಕೊಂದು ಭಿನ್ನವಾಗಿ ಗೋಚರಿಸಬಹುದು ಆದರೆ; ಇವೆಲ್ಲವುಗಳ ಕಾರಣಗಳ ಮೂಲ ಒಂದೇ. ಅದು; ದೇಹದ ಶಕ್ತಿಯ ವಿನ್ಯಾಸಗಳ ವಿರೂಪಗೊಳ್ಳುವಿಕೆ. ಇದಕ್ಕೆ ಒಂದೇ ಒಂದು ಜೀವಕೋಶ ಕಾರಣವಾಗಬಹುದು. ಕ್ಯಾನ್ಸರಿನ ಮೂಲ ಕಾರಣ ಇದೇ ಆಗಿದೆ. ಈ ಸಮಸ್ಯೆಯನ್ನು ನಿವಾರಿಸುವ ದಾರಿ ದೇಹದ ಶಕ್ತಿವಿನ್ಯಾಸವನ್ನು ಮರಳಿ ಸ್ಥಾಪಿಸುವುದೇ ಆಗಿದೆ. ವ್ಯಕ್ತಿಗೆ ಪ್ರೀತಿ ಮತ್ತು ಸುರಕ್ಷತೆಯ ಭಾವನೆಗಳನ್ನು ಪ್ರಕಟಪಡಿಸುವುದು ವೈದ್ಯಕೀಯ ಚಿಕಿತ್ಸೆಗಿಂತ ಶ್ರೇಷ್ಠವಾದುದು.
ಶಕ್ತಿಯು ಯಾವಾಗಲೂ ದೇಹದಲ್ಲಿ, ದೇಹದ ಸುತ್ತಲೂ ಮತ್ತು ದೇಹದ ಮೂಲಕ ಸದಾ ಶಕ್ತಿಯ ವಿವಿಧ ವಿನ್ಯಾಸಗಳನ್ನು ರಚಿಸುತ್ತಲೇ ಇದ್ದು, ತಮ್ಮದೇ ಆದ ಶಕ್ತಿಯೊಂದಿಗೆ ಶ್ರುತಿಗೊಳಿಸುವವರಿಗೆ ನಂಬಲಸಾಧ್ಯ ವಾದಷ್ಟು ಉಪಯುಕ್ತವಾಗಿದೆ. ಯಾವುದೇ ಅಸ್ವಸ್ಥತೆಯು ಶಕ್ತಿಯ ಸರಪಳಿ ಎಲ್ಲಿ ಕಡಿತಗೊಂಡಿದೆ ಎಂಬುದನ್ನು ಶೋಧಿಸುವ ಮತ್ತು ನಂತರದಲ್ಲಿ ಆ ಕೊಂಡಿಯನ್ನು ಮರುಸ್ಥಾಪಿಸುವ ಪ್ರಕ್ರಿಯೆಯಾಗಿರುತ್ತದೆ. ಸ್ಪಷ್ಟವಾದ ದೈಹಿಕ ಬದಲಾವಣೆಗಳನ್ನು ನಿರೀಕ್ಷಿಸುವ ಮೂಲಕ ಕ್ಯಾನ್ಸರ್‌ನ್ನು ಗುರುತಿಸಲು ಪ್ರಯತ್ನಿಸುವ ಪಾಶ್ಚಿಮಾತ್ಯ ಔಷಧ ವಿಜ್ಞಾನಕ್ಕಿಂತ ಶಕ್ತಿಯ ಮಟ್ಟದಲ್ಲಿನ
ಹಠಾತ್ ಕುಸಿತ; ಖಿನ್ನತೆ ಅಥವಾ ವಿವರಿಸಲಾಗದ
ಮಾನಸಿಕ ಅಸ್ವಸ್ಥತೆಯಂತಹ ಲಕ್ಷಣಗಳನ್ನು ಅನುಭವಿಸುವುದರ ಮೂಲಕ ಕ್ಯಾನ್ಸರ್‌ನ್ನು ಸರ್ವಪ್ರಥಮವಾಗಿ ರೋಗಿಯೇ ಕಂಡುಹಿಡಿಯುತ್ತಾನೆಂಬುದು ಅರ್ಥಪೂರ್ಣ ಸಂಗತಿ.

Next Article