For the best experience, open
https://m.samyuktakarnataka.in
on your mobile browser.

ಪ್ರೇಮಿಗಳ ದಿನಕ್ಕೆ ಯುಐ ಮೊದಲ ಝಲಕ್

03:17 PM Feb 12, 2024 IST | Samyukta Karnataka
ಪ್ರೇಮಿಗಳ ದಿನಕ್ಕೆ ಯುಐ ಮೊದಲ ಝಲಕ್

ಬೆಂಗಳೂರು: ಪ್ರೇಮಿಗಳ ದಿನಕ್ಕೆ ಯುಐ ಚಿತ್ರದ ಮೊದಲ ಝಲಕ್‌ ಬಿಡುಗಡೆ ಆಗಲಿದೆ ಎಂದು ನಟ ಚಿತ್ರತಂಡ ತಿಳಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು "ಈ ಪ್ರೇಮಿಗಳ ದಿನದಂದು ಪ್ರೀತಿ ಮತ್ತು ಲಯವನ್ನು ಅನುಭವಿಸಿ! ❤️, #UITheMovie1stSingle ಪ್ರೋಮೋ ಫೆಬ್ರವರಿ 14 ರಂದು ಬೆಳಗ್ಗೆ 10 ಗಂಟೆಗೆ ಡ್ರಾಪ್ ಆಗುತ್ತಿದೆ. ಬೀಟ್ಸ್ ಆಚರಿಸಲು ಸಿದ್ಧರಾಗಿ! #UITheMovie #Upendra #UppiDirects🎶 ಎಂದಿದ್ದಾರೆ.

ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ಇದಾಗಿದ್ದು, ಪ್ಯಾನ ಇಂಡಿಯಾ ಮಟ್ಟದಲ್ಲಿ ತಯಾರಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜತೆ ನಟನೆಯನ್ನು ಮಾಡಿದ್ದಾರೆ ಉಪ್ಪಿ. ಸುಮಾರು ಏಳೆಂಟು ವರ್ಷಗಳ ನಂತರ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದ್ದು, ಬರೋಬ್ಬರಿ ಎಂಟು ಭಾಷೆಗಳಲ್ಲಿ ಮೂಡಿ ಬರುತ್ತಿದೆ.

ಲಹರಿ ಸಂಸ್ಥೆ ನಿರ್ಮಾಣದ ಈ ಸಿನಿಮಾದಲ್ಲಿ ಬಹುದೊಡ್ಡ ತಾರಾಗಣವಿದೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.