For the best experience, open
https://m.samyuktakarnataka.in
on your mobile browser.

ಫೈನಲ್ ಪ್ರವೇಶಕ್ಕೆ ಆರ್‌ಸಿಬಿ-ಮುಂಬೈ ಫೈಟ್

12:15 AM Mar 15, 2024 IST | Samyukta Karnataka
ಫೈನಲ್ ಪ್ರವೇಶಕ್ಕೆ ಆರ್‌ಸಿಬಿ ಮುಂಬೈ ಫೈಟ್

ನವದೆಹಲಿ: ೨ನೇ ಮಹಿಳಾ ಪ್ರೀಮಿಯರ್ ಲೀಗ್‌ನ ಇಂದಿನ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ಅಭಿಮಾನಿಗಳ ಆಸೆ ಈಡೇರುತ್ತಾ? ಕಳೆದ ಆವೃತ್ತಿಯಲ್ಲಿ ಪ್ಲೇಆಫ್‌ಗೂ ಸೇರಿಕೊಳ್ಳದ ಆರ್‌ಸಿಬಿಗೆ ಈ ಬಾರಿ ಫೈನಲ್‌ಗೇರಲು ಅಂತಿಮ ಅವಕಾಶ ಸಿಕ್ಕಿದೆ. ಅದಕ್ಕೆ ಆರ್‌ಸಿಬಿ ಮಾಡಬೇಕಾಗಿರುವುದು ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸುವುದಷ್ಟೇ.
ಡಬ್ಲೂಪಿಎಲ್ ಫೈನಲ್‌ನಲ್ಲಿ ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೆಜ್ಜೆಯಿಟ್ಟಿದೆ. ಈಗ ಈ ಇಬ್ಬರ ಕಾಳಗದಲ್ಲಿ ಗೆದ್ದ ತಂಡ ಫೈನಲ್‌ನಲ್ಲಿ ಡೆಲ್ಲಿ ಎದುರು ಪ್ರಶಸ್ತಿಗಾಗಿ ಕಾದಾಡಲಿದೆ. ಆದರೆ, ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಲು ಆರ್‌ಸಿಬಿಗೆ ಹಾಲಿ ಚಾಂಪಿಯನ್ ಮುಂಬೈ ದೊಡ್ಡ ಸವಾಲಾಗಿದೆ.
ಈ ಆವೃತ್ತಿಯ ಮೊದಲ ಮುಖಾಮುಖಿಯಲ್ಲಿ ಬೆಂಗಳೂರು ತಂಡವನ್ನು ಎಂಐ ಪಡೆ ಮಣಿಸಿತ್ತು. ಇದಕ್ಕೆ ಪ್ರತಿಯಾಗಿ ಕಳೆದ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಆಟವಾಡಿ ಮುಂಬೈಗೆ ತಿರುಗೇಟು ನೀಡಿದೆ. ಹೀಗಾಗಿ ಇಂದಿನ ಕಾಳಗ ರಣರೋಚಕ ಎನ್ನಿಸಿಕೊಂಡಿದೆ.
ಆರ್‌ಸಿಬಿ ಪರ ಕಳೆದ ಮುಂಬೈ ವಿರುದ್ಧವೇ ಎಲೈಸಿ ಪೆರಿ ೬ ವಿಕೆಟ್ ಪಡೆಯುವುದರೊಂದಿಗೆ ದಾಖಲೆ ನಿರ್ಮಿಸಿದ್ದು ಆರ್‌ಸಿಬಿ ಆತ್ಮವಿಶ್ವಸ ಹೆಚ್ಚಿಸಿದೆ. ನಾಯಕಿ ಸ್ಮೃತಿ ಮಂಧಾನ, ರಿಚಾ ಘೋಷ್ ತಂಡದ ಗೆಲುವಿನ ಜವಾಬ್ದಾರಿ ಹೊರಬೇಕಿದೆ. ಎಸ್. ಮೇಘನಾ ಕೂಡ ಎಲಿಮಿನೇಟರ್ ಪಂದ್ಯದಲ್ಲಿ ಆಡುವ ಸಾಧ್ಯತೆಗಳಿವೆ. ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ನಾಯಕಿ ಹರ್ಮನ್‌ಪ್ರೀತ್ ಕೌರ್ ಪಡೆ, ಆರಂಭಿಕ ಆಟಗಾರ್ತಿ ಯಸ್ತಿಕಾ ಭಟಿಯಾ ಕಮ್ ಬ್ಯಾಕ್ ಬಗ್ಗೆ ಚಿಂತನೆ ನಡೆಸಿದೆ.
ಸಂಭಾವ್ಯ ಆರ್‌ಸಿಬಿ ಪಡೆ: ಸ್ಮೃತಿ ಮಂಧಾನ (ನಾಯಕಿ), ಎಸ್. ಮೇಘನಾ, ಸೋಫೀ ಮಾಲಿನಿಕ್ಸ್, ಎಲೈಸಿ ಪೆರಿ, ಸೋಫೀ ಡಿವೈನ್, ರಿಚಾ ಘೋಷ್, ಜಾರ್ಜಿನಾ ವಾರ್ಹೆಮ್, ದಿಶಾ ಕಸಟ್, ಶ್ರೇಯಾಂಕ ಪಾಟೀಲ್, ಆಶಾ ಶೋಭನಾ, ರೇಣುಕಾ ಸಿಂಗ್
ಸಂಭಾವ್ಯ ಮುಂಬೈ ಪಡೆ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಹೇಲಿ ಮ್ಯಾಥ್ಯೂಸ್, ಯಸ್ತಿಕಾ ಭಟಿಯಾ, ನ್ಯಾಟ್ ಸೇವಿಯರ್ ಭ್ರಂಟ್, ಅಮೇಲಿಯಾ ಕೆರ್, ಅಮೊನ್‌ಜೋತ್ ಕೌರ್, ಸಜೀವನ್ ಸಜನಾ, ಪೂಜಾ ವಸ್ತಾçಕರ್, ಹುಮೈರಾ ಕಾಜ್ಹಿ, ಶಭ್ನಿಮ್ ಇಸ್ಮಾಯಿಲ್, ಸೈಕಾ ಇಶಿಕ್ಕಿ.
ಸ್ಥಳ: ಅರುಣ್ ಜೇಟ್ಲಿ ಸ್ಟೇಡಿಯಂ
ಸಮಯ: ರಾತ್ರಿ ೭.೩೦ಕ್ಕೆ