ಬದನೆಕಾಯಿ ದೋಸೆ
ಬೇಕಾಗುವ ಸಾಮಗ್ರಿಗಳು: ೨ ಕಪ್ ಅಕ್ಕಿ, ೪ ಚಮಚ ಉದ್ದಿನಬೇಳೆ, ೧ ಚಮಚ ಮೆಂತ್ಯ, ೧೨ ರಿಂದ ೧೫ ಒಣಮೆಣಸಿನಕಾಯಿ, ತುಪ್ಪ, ೧ ಬಟ್ಟಲು ಕಾಯಿತುರಿ, ೩ ಚಮಚ ಕೊತ್ತಂಬರಿ ಬೀಜ, ೨ ಚಮಚ ಜೀರಿಗೆ, ೧/೪ ಅಚ್ಚು ಬೆಲ್ಲ, ೨ ಚಮಚ ಉಪ್ಪು, ೫೦ ಗ್ರಾಂ ಹುಣಸೆ ಹಣ್ಣು, ೧/೨ ಚಮಚ ಅರಿಶಿನ, ೪ ದಪ್ಪನೆಯ ಎಳೆ ಬದನೆಕಾಯಿ.
ಮಾಡುವ ವಿಧಾನ: ಮೊದಲು ಅಕ್ಕಿ, ಉದ್ದಿನಬೇಳೆ, ಮೆಂತೆಯನ್ನು ೪ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಈಗ ಉಪ್ಪು, ಅರಿಶಿನ ಹೊರತಾಗಿ ಎಲ್ಲವನ್ನೂ ಅದಕ್ಕೆ ಬೆರೆಸಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿರಿ. ರುಬ್ಬಿದ ಹಿಟ್ಟಿಗೆ ಉಪ್ಪು, ಅರಿಷಿಣ ಸೇರಿಸಿ ಕಲಸಿಡಿ. ಈಗ ಬದನೆಕಾಯಿಗಳ ಸಿಪ್ಪೆ ತೆಗೆದು ದುಂಡಗೆ ಗಾಲಿಯ ಆಕೃತಿಯಲ್ಲಿ ಕತ್ತರಿಸಿಕೊಳ್ಳಿ.
ಒಲೆಯ ಮೇಲೆ ಕಾದ ಕಾವಲಿಯಲ್ಲಿ ತುಪ್ಪ ಹಾಕಿ. ಒಂದೊಂದಾಗಿ ಬದನೆ ತುಂಡುಗಳನ್ನು ಹಿಟ್ಟಿನಲ್ಲಿ ಮುಳುಗುವಂತೆ ಅದ್ದಿ ವೃತ್ತಾಕಾರವಾಗಿ ಇಟ್ಟು ತಟ್ಟೆ ಮುಚ್ಚಿ. ೨ ನಿಮಿಷದ ನಂತರ ತಿರುವಿ ಹಾಕಿ. ಎರಡೂ ಬದಿ ಚೆನ್ನಾಗಿ ಬೆಂದ ನಂತರ ಬೆಣ್ಣೆ ಹಾಗೂ ಚಟ್ನಿಯೊಂದಿಗೆ ಸವಿಯಿರಿ.
ಕೆ.ಲೀಲಾ ಶ್ರೀನಿವಾಸ್, ಹರಪನಹಳ್ಳಿ