ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬಯಕೆಯ ಬೆಟ್ಟ ಹತ್ತಿದಷ್ಟು ಇಳಿಜಾರು

04:56 AM May 17, 2024 IST | Samyukta Karnataka

ಬಯಕೆ ಮಾನವನ ಸಹಜ ಸ್ವಭಾವ. ನಾವೆಲ್ಲರೂ ನಮ್ಮ ನಮ್ಮ ಬಯಕೆಗಳಿಗೆ ಅಂಟಿಕೊಂಡವರೆ. ಇದು ನಮ್ಮ ದೌರ್ಬಲ್ಯ ಎಂದು ನಮಗೆ ಅನಿಸುವುದೇ ಇಲ್ಲ. ಬಯಕೆ ಹೆಚ್ಚಾದಾಗ ಏನಾಗುತ್ತದೆ ಕುರಾನಿನ ಜಾತಿಯ ಅಧ್ಯಾಯ(೪೫ : ೨೩) ಏನು ಹೇಳುತ್ತದೆ.. ಇಚ್ಛೆಗಳನ್ನೇ ತನ್ನ ದೇವರನ್ನಾಗಿ ಮಾಡಿಕೊಂಡವನ ಕುರಿತು ಯೋಚಿಸಿ ನೋಡಿ ಎಂದು ಹೇಳುತ ಮಾನವನು ತನ್ನ ಇಚ್ಛೆಗಳ ದಾಸನಾಗಿಬಿಡುವುದು ಮತ್ತು ತಾನು ನಿಷೇಧಿಸಿದ್ದನ್ನೆಲ್ಲ ಮಾಡುವುದರಿಂದ ಅವನು ಸ್ವೇಚ್ಛಾ ದಾಸನಾಗಿ ತನ್ನ ಚಾರಿತ್ರದ ವಿನಾಶಕ್ಕೆ ತಾನೇ ಕಾರಣಿಭೂತನಾಗುತ್ತಾನೆ. ಮಾನವನು ತನ್ನ ಬಯಕೆಗಳಿಗೆ ದಾಸನಾಗಿರುತ್ತಾನೆ. ಅಷ್ಟೇ ಅಲ್ಲ ಅವನ ಮನಸ್ಸು ಬಯಕೆಗಳಿಂದ ತುಂಬಿ ಹೋಗಿರುತ್ತದೆ. ನಮ್ಮ ಮನಸ್ಸು ಬಯಕೆಗಳಿಂದ ತುಂಬಿ ತುಳುಕುತ್ತಿರುವಾಗ ನಾವು ಸ್ವಲ್ಪ ಯೋಚಿಸಿದರೆ ಈ ಬಯಕೆಗಳನ್ನು ನಾವು ಪಡೆಯಬಲ್ಲವೇ ? ಇದರಿಂದ ನಮಗಾಗುವ ಪ್ರಯೋಜನ ಎಷ್ಟು ಎಂಬ ಅನೇಕ ಯೋಜನೆಗಳಿಗೆ ಮಾರ್ಗವಾಗುತ್ತದೆ. ಸಾಧು ಸಂತರು, ಶರಣರು ಆಗಾಗ ನಮಗೆ ಉಪದೇಶಿಸುತ್ತಲೆ ಇರುತ್ತಾರೆನಿಮ್ಮ ಬಯಕೆಗಳಿಗೆ ಗುಲಾಮರಾಗಬೇಡಿ' ಎಂದು. ನಾವು ಬಯಸಿದ್ದು ನಮಗೆ ಸಿಗಲಿಲ್ಲವೆಂದರೆ ನಮ್ಮ ನಿರಾಸೆ ಎಲ್ಲಿಗೆ ಹೋಗುವುದು ತಿಳಿಯದು. ನಮಗೆ ನಾವು ಬಯಸಿದ್ದು ಸಿಗಲಿಲ್ಲವೆಂದು ಅಸಮಾಧಾನಿಗಳಾಗಿ ನಿರಾಸೆಯಿಂದ ಇಹಲೋಕ ತ್ಯಜಿಸಿದವರು ಅನೇಕರುಂಟು. ಇಂತಹ ಸ್ಥಿತಿಯಲ್ಲಿರುವರನ್ನು ಪಾರು ಮಾಡುವುದು ಹೇಗೆ? ಕುರಾನಿನ ಈ ಎರಡು ಅಧ್ಯಾಯಗಳಲ್ಲಿ ನಮಗೆ ಸಾಧ್ಯವಾಗುವ ಬಯಕೆಗಳನ್ನು ಪಡೆಯುವುದು ಹೇಗೆ ಎಂಬುವುದರ ಮಾರ್ಗ ತೋರಿಸಿರುತ್ತದೆ. ಈ ಅಧ್ಯಾಯ ನೋಡಿ ಇಬ್ರಾಹಿಂ(೧೪: ೩೪). ನೀವು ಕೇಳಿದ ಎಲ್ಲವನ್ನು ನಿಮಗೆ ನೀಡಲಾಗಿದೆ. ಅಲ್ಲಾಹನು ಮಾಡಿರುವ ಅನುಗ್ರಹಗಳನ್ನು ಎಣಿಸಲಾರಿರಿ, ಮಾನವ ಉಪಕಾರಗೇಡಿಯಾಗಿದ್ದಾನೆ.
ಈಗಿರುವ ಜಗತ್ತನ್ನು ಎಲ್ಲ ಬಯಕೆಗಳನ್ನು ಪೂರೈಸಲು ನಿರ್ಮಿಸಲಿಲ್ಲ. ನಿಮ್ಮ ಜೀವನಕ್ಕೆ ಬೇಕಾಗಿರುವದೆಲ್ಲವನ್ನು ಪೂರೈಸಲಾಗಿದೆ. ಇದು ದೈವಿಚ್ಛೆಯ ಯೋಜನೆ. ಆದ್ದರಿಂದ ಮಾನವನ ತನಗೆ ಸಿಕ್ಕಿದುದರಲ್ಲಿಯೇ ತೃಪ್ತಿ ಪಡೆಯಬೇಕು.
ಸೃಷ್ಟಿ ಮನುಷ್ಯನಿಗೆ ಬೇಕಾಗಿರುವುದೆಲ್ಲವನ್ನು ನೀಡಿದೆ. ಆದರೆ ಆತನ ಲೋಭಕ್ಕಾಗಿ ಅಲ್ಲ. ಮನುಷ್ಯನ ಈಗಿನ ಜಗತ್ತು ನಶ್ವರ. ಒಂದು ದಿನ ಇದು ಇಲ್ಲದಂತಾಗುತ್ತದೆ. ಆತನ ನಂತರದ ಜೀವನ ಶಾಶ್ವತವಾದದ್ದು. ಅದು ಹೇಗೆ ಇರುತ್ತದೆ ಎಂಬುದನ್ನು ಕುರಾನಿನ ಹಾಮೀಮ್ ಅಸ್ಸಜ್ದ(೪೧ : ೩೧) ಅಧ್ಯಾಯದಲ್ಲಿ ಹೇಳಲಾಗಿದೆ. ನಿಮಗೆ ವಾಗ್ದಾನ ಮಾಡಿರುವ ಸ್ವರ್ಗ ಸಿಗುವುದು. ಅಲ್ಲಿ ನೀವು ಬಯಸಿದ್ದೆಲ್ಲವನು ನಿಮಗೆ ಸಿಗುವುದು.. ನೀವು ಆಸೆ ಮಾಡಿದ ಪ್ರತಿಯೊಂದು ವಸ್ತು ನಿಮ್ಮದಾಗುವುದು. ಮನುಷ್ಯನಲ್ಲಿ ಎಣೆಯಿಲ್ಲದ ಬಯಕೆಗಳಿವೆ ಆದರೆ ಈಗಿರುವ ಜಗತ್ತಿಗೆ ನಿರ್ದಿಷ್ಟವಾದ ಎಣೆ ಇದೆ. ಮನುಷ್ಯನ ಎಣೆಯಿಲ್ಲದ ಬಯಕೆಗಳಿಗೆ ಈ ಜಗತ್ತು ಸಾಲದು. ಈಗಿರುವ ಜಗತ್ತು ಪರೀಕ್ಷಾ ಸ್ಥಳ. ನಮ್ಮ ಒಳತು ಕೆಡಕುಗಳನ್ನು ಗಮನಿಸಿ ನಮ್ಮ ಸ್ಥಾನವನ್ನು ಪರಲೋಕದಲ್ಲಿ ನಿಶ್ಚಯಿಸಲಾಗುತ್ತದೆ.
ನಿಜ, ಬಯಕೆಗಳನ್ನು ಬಿಡಲಾಗುವುದಿಲ್ಲ. ಆದರೆ ಅವುಗಳನ್ನು ನಿಯಂತ್ರಿಸಲು ಸಾಧ್ಯ. ನಿಮ್ಮ ಬಯಕೆಗಳಿಗೆ ನೀವು ದಾಸರಾಗಬೇಡಿ. ಬಯಕೆಯ ಬೆಟ್ಟ ಹತ್ತಿದಷ್ಟು ಇಳಿಜಾರಾಗುತ್ತದೆ.

Next Article