For the best experience, open
https://m.samyuktakarnataka.in
on your mobile browser.

ಬಸವರಾಜ ಹೊರಟ್ಟಿ ಅವರ 'ಸೋಲಿಲ್ಲದ ಸರದಾರ' ಸಾಕ್ಷ್ಯಚಿತ್ರ ಲೋಕಾರ್ಪಣೆ

01:24 PM Dec 18, 2024 IST | Samyukta Karnataka
ಬಸವರಾಜ ಹೊರಟ್ಟಿ ಅವರ  ಸೋಲಿಲ್ಲದ ಸರದಾರ  ಸಾಕ್ಷ್ಯಚಿತ್ರ ಲೋಕಾರ್ಪಣೆ

1980ರಿಂದ ಸತತ 8 ಬಾರಿ ವಿಧಾನಪರಿಷತ್ತಿಗೆ ಆಯ್ಕೆಯಾಗುವ ಮೂಲಕ ಸೋಲನ್ನೇ ಮೆಟ್ಟಿ ನಿಂತ ಸೋಲಿಲ್ಲದ ಸರದಾರ ಎಂಬ ಕೀರ್ತಿಗೆ ಪಾತ್ರರಾದ ಸಭಾಪತಿ ಬಸವರಾಜ ಹೊರಟ್ಟಿಯವರ 45 ವರ್ಷಗಳ ಸಾರ್ವಜನಿಕ ಬದುಕಿನ ಕುರಿತು ಬಳ್ಳಾರಿ ಜಿಲ್ಲೆಯ ಶಿರಗುಪ್ಪ ತಾಲೂಕಿನ ಸಿರಗೇರಿಯ ಶ್ರೀ ಅನ್ನಪೂರ್ಣ ಕ್ರಿಯೇಶನ್ನವರು ಹೊರತಂದ ಸಾಕ್ಷ್ಯಚಿತ್ರ

ಬೆಳಗಾವಿ: ಸುವರ್ಣ ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಬಸವರಾಜ ಹೊರಟ್ಟಿ ಅವರ 'ಸೋಲಿಲ್ಲದ ಸರದಾರ' ಎನ್ನುವ ಸಾಕ್ಷ್ಯಚಿತ್ರ ಕುರಿತ ಭಾಗ-1 ರ ಲೋಕಾರ್ಪಣೆ ಮಾಡಲಾಯಿತು.
ಈ ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ವಿಧಾನ ಪರಿಷತ್ ಸಭಾಪತಿಗಳಾದ ಮಾನ್ಯ ಬಸವರಾಜ ಹೊರಟ್ಟಿ ಅವರ 'ಸೋಲಿಲ್ಲದ ಸರದಾರ' ಎನ್ನುವ ಸಾಕ್ಷ್ಯಚಿತ್ರ ಕುರಿತ ಭಾಗ-1 ರ ಲೋಕಾರ್ಪಣೆ ಆಗಿದ್ದು ಸುದೀರ್ಘ 50 ವರ್ಷಗಳ ಕಾಲ ವಿಧಾನಪರಿಷತ್ ಸದಸ್ಯರಾಗಿರುವ ಬಸವರಾಜ ಹೊರಟ್ಟಿ ಅವರ ಬಗ್ಗೆ ಎಷ್ಟು ಹೇಳಿದರೂ ಸಾಲದು. ಇಡೀ ಕರ್ನಾಟಕಕ್ಕೆ ಅವರೊಬ್ಬ ಮಾದರಿ ರಾಜಕಾರಣಿ ಹಾಗೂ ಉತ್ತರ ಕರ್ನಾಟಕದ ಅಪ್ಪಟ ಅಪರಂಜಿ. ಇಂತಹ ಮಹಾನ್ ನಾಯಕನ ಸಾಕ್ಷ್ಯಚಿತ್ರ ನಿರ್ಮಿಸಿರುವುದು ಖುಷಿಯ ವಿಚಾರ. ಉಳಿದ ಭಾಗಗಳು ಆದಷ್ಟು ಬೇಗ ಮೂಡಿ ಬರಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.

Tags :