ಬೆಳಗಾವಿ ಹಿಡಕಲ್ ಜಲಾಶಯ ಪ್ರದೇಶದಲ್ಲಿ ಪದ್ಮಶ್ರೀ ತುಳಸಿಗೌಡ ಉದ್ಯಾನವನ
ಶಾಲಾ ಪಠ್ಯ ಪುಸ್ತಕದಲ್ಲಿ ಪಶ್ಚಿಮ ಘಟ್ಟಗಳ ಸಂರಕ್ಷಣೆ, ವೃಕ್ಷ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಯ ಬಗ್ಗೆ ಪಠ್ಯಗಳನ್ನು ಸೇರಿಸಬೇಕು.
ಬೆಳಗಾವಿ: ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ದುಷ್ಪರಿಣಾಮಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಮಕ್ಕಳಿಗೆ ವೃಕ್ಷ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ. ಜಿಲ್ಲೆಯ ಹಿಂಡಲಗ ಜಲಾಶಯದ ಬಳಿ ದಿ.ಉಮೇಶ್ ವಿಶ್ವನಾಥ ಕತ್ತಿ ಚಿಟ್ಟೆ ಉದ್ಯಾನ ಮತ್ತು ಪರಿಸರ ಪ್ರೇಮಿ ಪದ್ಮಶ್ರೀ ತುಳಸಿಗೌಡ ಉದ್ಯಾನವನವನ್ನು ಉದ್ಘಾಟಿಸಿ ಮಾತನಾಡಿ ಹಿಡಕಲ್ ಜಲಾಶಯದ ಬಳಿ ಸುಮಾರು 500 ಎಕರೆ ಪ್ರದೇಶದಲ್ಲಿ ವಿವಿಧ ಉದ್ಯಾನವನಗಳ ನಿರ್ಮಾಣವಾಗುತ್ತಿದ್ದು, ಇಲ್ಲಿ ಮೊಸಳೆ ಪಾರ್ಕ್, ಬಿದಿರು ಉದ್ಯಾನ ಮತ್ತು ಪಕ್ಷಿಧಾಮ ನಿರ್ಮಿಸುವ ಯೋಜನೆಯಿದ್ದು, ಈ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು, ಹಿಡಕಲ್ ಜಲಾಶಯದ ಬಳಿಯ ಈ ಉದ್ಯಾನವನ ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಜಲಾಶಯದ ಸಮೀಪ ಇರುವ ಬೃಂದಾವನ ಉದ್ಯಾನದ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಪಿಪಿಪಿ ಮಾದರಿಯಲ್ಲಿ ಯೋಜನೆ ರೂಪಿಸಬೇಕು. ಇದರಿಂದ ಇಲ್ಲಿನ ಭಾಗವನ್ನು ಹೆಚ್ಚಿನ ಮಂದಿ ನೋಡಲು ಸಹಕಾರಿಯಾಗಲಿದೆ ಎಂದರು.