ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬಿಜೆಪಿಯಲ್ಲಿ ಮೂರು ಬಣ ಆಗಿವೆ

05:36 PM Aug 12, 2024 IST | Samyukta Karnataka

ಧಾರವಾಡ: ರಾಜ್ಯ ಬಿಜೆಪಿಯಲ್ಲಿ ಈಗ ಮೂರು ಬಣಗಳಾಗಿವೆ. ಒಂದು ಮೂಲ ಬಿಜೆಪಿಗರದು, ಇನ್ನೊಂದು ಪಕ್ಷಕ್ಕೆ ಸೇರ್ಪಡೆಯಾದವರ ಬಿಜೆಪಿ ಮತ್ತೊಂದು ಎರಡೂ ಗುಂಪುಗಳು ಬೇಡ ಎನ್ನುವವರ ಬಿಜೆಪಿ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಲೇವಡಿ ಮಾಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಎಸ್‌ವೈ ಬಣ, ಕೇಂದ್ರದಲ್ಲಿ ಸಚಿವರಾಗದವರ ಬಣ, ಯತ್ನಾಳ ಅವರ ಬಣ ಹೀಗೆ ಬಿಜೆಪಿ ಮೂರು ಭಾಗವಾಗಿದೆ. ಬಿಜೆಪಿಯ ಉತ್ತರ ಕರ್ನಾಟಕದ ಮುಖಂಡರನ್ನು ಯಾರೂ ಕೇಳುತ್ತಿಲ್ಲ ಎಂಬುದು ಯತ್ನಾಳ ಅವರ ಆರೋಪವಾಗಿದೆ. ನಮ್ಮಲ್ಲೇ ಹೆಗ್ಗಣ ಸತ್ತು ಬಿದ್ದಿದೆ, ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಮಾಡಿದರೆ ಹೇಗೆ ಎಂದು ಸ್ವಪಕ್ಷದ ಯತ್ನಾಳ ಅವರೇ ಹೇಳುತ್ತಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯ ೧೫ ಬಾರಿ ಬಜೆಟ್ ಕೊಟ್ಟವರು. ಈವರೆಗೆ ಅವರ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕಿಯೂ ಇಲ್ಲ. ಎಸ್.ಆರ್.ಬೊಮ್ಮಾಯಿ ಸಿಎಂ ಆಗಿದ್ದಾಗ ಆಗಿನ ರಾಜ್ಯಪಾಲರು ನೋಟಿಸ್ ಕೊಟ್ಟಿದ್ದರು. ಆಗ ಅವರು ನ್ಯಾಯಾಲಯಕ್ಕೆ ಹೋಗಿದ್ದರು. ಆನಂತರ ರಾಜ್ಯದಲ್ಲಿ ಯಾವುದೇ ರಾಜ್ಯಪಾಲರು ಸಿಎಂಗಳಿಗೂ ನೋಟಿಸ್ ಕೊಡುವ ಕೆಲಸ ಮಾಡಲಿಲ್ಲ. ಬಹುಮತ ಇದ್ದರೆ ಒಬ್ಬ ಗ್ರಾಪಂ ಅಧ್ಯಕ್ಷನನ್ನೂ ಕೆಳಗೆ ಇಳಿಸಲು ಆಗುವುದಿಲ್ಲ. ನಾವು ವಿಧಾನಸಭೆ ಚುನಾವಣೆಯಲ್ಲಿ ೧೩೬ ಸ್ಥಾನ ಗೆದ್ದಿದ್ದೇವೆ. ಬಿಜೆಪಿಯವರಿಗೆ ಆಪರೇಶನ್ ಕಮಲ ಮಾಡಲು ಆಗುತ್ತಿಲ್ಲ, ಹೀಗಾಗಿ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕೆಲಸ ಮಾಡುತ್ತಿದ್ದಾರೆ. ನಮ್ಮದು ಸುಭದ್ರ ಸರ್ಕಾರ ಎಂದು ಸಮರ್ಥಿಸಿಕೊಂಡರು.

Tags :
congresshublinavalagundಕೋನರಡ್ಡಿ
Next Article