ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬಿಜೆಪಿಯ ಹಿರಿಯ ಕಟ್ಟಾಳು ಬಿ ಎನ್ ಮೂರ್ತಿ ನಿಧನ

12:30 PM Oct 30, 2024 IST | Samyukta Karnataka

ಬೆಂಗಳೂರು: ಸಂಘ ಪರಿವಾರದ ಹಿರಿಯ, ಬಿಜೆಪಿಯ ಕಟ್ಟಾಳು ಬಿ ಎನ್ ಮೂರ್ತಿ ನಿಧನ ಹೊಂದಿದ್ದಾರೆ.
ಅನಾರೋಗ್ಯದ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದ ಅವರು ನಿನ್ನೆ ಮಂಗಳವಾರ ಮಧ್ಯಾಹ್ನ ವಿಧಿವಶರಾಗಿದ್ದಾರೆ. 81 ವರ್ಷದ ಶ್ರೀಯುತರ ಜೀವನದಲ್ಲಿ, ಕಳೆದ 5 ದಶಕಗಳನ್ನು ವಿಶ್ವ ಹಿಂದೂ ಪರಿಷತ್ ಸೇರಿದಂತೆ ಸಂಘ ಪರಿವಾರದ ಇತರ ಕಡೆಗಳಲ್ಲಿ ಸಾರ್ವಜನಿಕ ಸೇವೆಗೆಂದೇ ಮೀಸಲಿಟ್ಟಿದ್ದು ಅವರ ಸೇವಾ ತತ್ಪರತೆ, ಜನಪರ ಕಾಳಜಿಗೆ ಹಿಡಿದ ಕನ್ನಡಿ. ಸೇವಾಭಾರತಿ ಶಿಕ್ಷಣ ಸಂಸ್ಥೆ ಚಾಮರಾಜನಗರ ಇದರ ಪ್ರಾರಂಭಿಕ ವಿಶ್ವಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಶ್ರೀ ರಾಮ ಜನ್ಮಭೂಮಿ ಆಂದೋಲನ, ಗಂಗಾಜಲ ವಿತರಣಾ ಅಭಿಯಾನ, ಗೋ ಹತ್ಯಾ ನಿಷೇಧ ಚಳುವಳಿಗಳಲ್ಲಿ ಸಕ್ರಿಯರಾಗಿದ್ದರು. ಅವರ ಹಲವು ಕ್ರಿಯಾಶೀಲ ಪ್ರಯೋಗದಲ್ಲಿ, ಕಾಗಿನೆಲೆಯಲ್ಲಿ ಕನಕದಾಸ ಜಯಂತಿ ಆಚರಣೆ, ಕರ್ನಾಟಕದ ವಿವಿಧ ಭಾಗಗಳಲ್ಲಿ ರಾಮಾಯಣ ಮತ್ತು ಮಹಾಭಾರತದ ಪ್ರವಚನಕಾರರಿಗೆ ಪ್ರಶಿಕ್ಷಣ ಪ್ರಮುಖವಾದದ್ದು. ಇವರ ಸಾಮರಸ್ಯದ ಕಾರ್ಯವನ್ನು ಗುರುತಿಸಿ, ರಾಜ್ಯ ಸರ್ಕಾರ ಪ್ರತಿಷ್ಠಿತ ‘ಕನಕ ಶ್ರೀ’ ಪ್ರಶಸ್ತಿಯನ್ನು ನೀಡಿತ್ತು. ಶ್ರೀ ಮೂರ್ತಿಯವರು ಜಯನಗರದ ಮಾಜಿ ಶಾಸಕ ದಿವಂಗತ ಬಿ.ಎನ್ ವಿಜಯಕುಮಾರ್ ಅವರ ಹಿರಿಯ ಸೋದರರು. ಶ್ರೀ ಮೂರ್ತಿಯವರು ಸೋದರಿ, ರಾಷ್ಟ್ರ ಸೇವಿಕಾ ಸಮಿತಿಯ ಪ್ರಾಂತ ಕಾರ್ಯವಾಹಿಕಾ ವಸಂತ ಸ್ವಾಮಿ, ಸೋದರರಾದ ಹರಿಪ್ರಕಾಶ್, ಮುರಳಿ, ಪ್ರಹ್ಲಾದ್ ಬಾಬು ಬಂಧುಮಿತ್ರರನ್ನು ಅಗಲಿದ್ದಾರೆ.

ಹಿರಿಯರು, ವಿಶ್ವ ಹಿಂದೂ ಪರಿಷತ್‌ನ ಕ್ಷೇತ್ರೀಯ ಕಾರ್ಯದರ್ಶಿಗಳು ಹಾಗೂ ಕೇಂದ್ರ ಕಾರ್ಯಕಾರಿ ಸದಸ್ಯರಾಗಿದ್ದ ಶ್ರೀ ಬಿ.ಎನ್.ಮೂರ್ತಿ ರವರು ದೈವಾಧೀನರಾದ ವಿಷಯ ತಿಳಿದು ಅತೀವ ದುಃಖವಾಗಿದೆ. ಅಗಲಿದ ಹಿರಿಯರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ಅವರ ಕುಟುಂಬ ಸದಸ್ಯರಲ್ಲಿ ಸಂತಾಪ ವ್ಯಕ್ತಪಡಿಸುತ್ತೇನೆ. ಎಂದು ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಕಂಬನಿ ಮಿಡಿದಿದ್ದಾರೆ.

Next Article