ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬಿಜೆಪಿ ನಾಯಕರಿಗೆ ವಿಜಯಪುರ ಎಂದರೆ ಸುಣ್ಣವೇ ಹೊರತು...

01:01 PM Oct 30, 2024 IST | Samyukta Karnataka

ಇವರ ಸಮಸ್ಯೆಗಳನ್ನೇ ಬಗೆಹರಿಸಿಕೊಳ್ಳಲಾಗದ ಇವರು ಜನರಿಗೆ ಏನು ತಾನೆ ಒಳಿತು ಮಾಡುವರು!

ಬೆಂಗಳೂರು: ಬಿಜೆಪಿ ಪಕ್ಷದಲ್ಲಿ ವಿಜಯಪುರದ ನಾಯಕರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಬಿಜೆಪಿ ನಾಯಕರಿಗೆ ವಿಜಯಪುರ ಎಂದರೆ ಸುಣ್ಣವೇ ಹೊರತು ಬೆಣ್ಣೆ ಸಿಗುವುದಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು 7 ಬಾರಿ ಸಂಸದರಾದ ಹಿರಿಯ ದಲಿತ ನಾಯಕರಿಗೆ, ಕೇಂದ್ರ ಸಚಿವ ಸ್ಥಾನವಿಲ್ಲ, ಸೂಕ್ತ ಗೌರವವಿಲ್ಲ. ಮತ್ತೆ ಹಿಂದೂ ಫೈರ್ ಬ್ರಾಂಡ್ ಎಂದು ಹೇಳಿಕೊಳ್ಳುವ ಬಸನಗೌಡ ಪಾಟೀಲ ಯತ್ನಾಳ ಅವರನ್ನು ರಾಜ್ಯದಲ್ಲಿ ಎಂದೂ ಸಚಿವರನ್ನಾಗಿ ಮಾಡಲಿಲ್ಲ ಅಥವಾ ಒಂದು ಗೌರವ ಸ್ಥಾನ ನೀಡಿಲ್ಲ. ವಿಜಯೇಂದ್ರ ಅವರ ಸತ್ಯ ಶೋಧನಾ ಸಮಿತಿಯಲ್ಲಿ ಅತ್ತು, ಗೋಗರೆದ ನಂತರ ಇವರನ್ನು ಸಮಿತಿಗೆ ಸೇರಿಸಿಕೊಂಡರು, ಮತ್ತದೇ ಭಿನ್ನಮತ! ಅದೇ ರಾಗ! ಅದೇ ಹಾಡು! ಇವರ ಸಮಸ್ಯೆಗಳನ್ನೇ ಬಗೆಹರಿಸಿಕೊಳ್ಳಲಾಗದ ಇವರು ಜನರಿಗೆ ಏನು ತಾನೆ ಒಳಿತು ಮಾಡುವರು! ಸುಳ್ಳಿನ ಅಡಿಪಾಯದ ಮೇಲೆ ಕಟ್ಟಿರುವ ಸತ್ಯ ಶೋಧನಾ ಸಮಿತಿಯ ಕೆಲಸ, "ಸತ್ಯ ಹೊಸ್ತಿಲು ದಾಟುವ ಮುನ್ನವೆ ಸುಳ್ಳು ಊರು ಸುತ್ತಿ ಬಂದಿತ್ತು" ಎಂಬಂತಾಗಲಿದೆ ಎಂದಿದ್ದಾರೆ.

Tags :
#ಎಂಬಿಪಾಟೀಲ್‌#ಬಸನಗೌಡಪಾಟೀಲಯತ್ನಾಳ#ಬಿಜೆಪಿ#ವಕ್ಫ್‌#ವಿಜಯಪುರ
Next Article