ಬಿಯರ್ ಬಾಟಲಿಯಿಂದ ಇರಿದು ಕಾರ್ಮಿಕನ ಕೊಲೆ
11:03 AM Dec 06, 2024 IST | Samyukta Karnataka
ಉಡುಪಿ: ಮಣಿಪಾಲ ಮುಖ್ಯರಸ್ತೆಯ ಅನಂತ ಕಲ್ಯಾಣ ಮಾರ್ಗದಲ್ಲಿ ಹೊಟೇಲ್ ಕಾರ್ಮಿಕನನ್ನು ಬಿಯರ್ ಬಾಟಲಿಯಿಂದ ಹೊಡೆದು ಹತ್ಯೆಗೈದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನಿಲು ಹೊನ್ನಾವರದ ಕಾಸಕೋಡು ನಿವಾಸಿ ಶ್ರೀಧರ ನಾಯಕ ಎಂದು ಗುರುತಿಸಲಾಗಿದೆ. ಆತ ಮಣಿಪಾಲ ಈಶ್ವರನಗರದ ಹೊಟೇಲ್ ಒಂದರಲ್ಲಿ ಕುಕ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮೂರರಿಂದ ನಾಲ್ಕು ಜನರಿದ್ದ ತಂಡ ಬೆಳಿಗ್ಗೆ 6 ಗಂಟೆ ಸುಮಾರಿಗೆ ಹೊಡೆದಾಟ ನಡೆಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದು, ಯಾವುದೋ ವಿಚಾರಕ್ಕೆ ನಡೆದ ಗಲಾಟೆ ಶ್ರೀಧರ್ ಕೊಲೆಯಲ್ಲಿ ಪರ್ಯಯವಸಾನಗೊಂಡಿದೆ. ಬಾಟಲಿಯಲ್ಲಿ ಹೊಡೆದು ಹತ್ಯೆಗೈದಿದ್ದಾರೆ ಎಂದು ಉಡುಪಿ ಎಸ್ಪಿ ಡಾ. ಅರುಣ್ ಕೆ. ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಎಸ್ಪಿ ಡಾ.ಅರುಣ್ ಕುಮಾರ್ , ಮಣಿಪಾಲ ಇನ್ಸ್ ಪೆಕ್ಟರ್ ದೇವರಾಜ್, ಮಂಜುನಾಥ್ ತನಿಖೆ ನಡೆಸುತ್ತಿದ್ದಾರೆ.