ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬೆಳಗಾವಿ ಎಷ್ಟರ ಮಟ್ಟಿಗೆ ಸುರಕ್ಷಿತ?

06:20 AM May 25, 2024 IST | Samyukta Karnataka

ವಿಲಾಸ ಜೋಶಿ
ಬೆಳಗಾವಿ: ಮಕ್ಕಳ ಕ್ರಿಕೆಟ್ ಆಟದ ಜಗಳದ ನಂತರ ಪೊಲೀಸರ ಸಮ್ಮುಖದಲ್ಲಿಯೇ ತಲವಾರ ಎಸೆದು ಹೋಗಿದ್ದನ್ನು ಗಮನಿಸಿದರೆ ಬೆಳಗಾವಿ ಎಷ್ಟರ ಮಟ್ಟಿಗೆ ಸುರಕ್ಷಿತ? ಎಂಬ ಪ್ರಶ್ನೆ ಈಗ ಮೂಡಿದೆ.
ನಗರದ ಶಹಾಪುರ ಅಳವಣಗಲ್ಲಿಯಲ್ಲಿ ಕಳೆದ ದಿನ ನಡೆದ ಮಕ್ಕಳ ಕ್ರಿಕೆಟ್ ಆಟದ ಪ್ರಕರಣದಲ್ಲಿ ಮನೆಗಳ ಮೇಲೆ ಕಲ್ಲು, ಇಟ್ಟಿಗೆ ತೂರಾಟ, ತಲವಾರ ಪ್ರದರ್ಶನ ಎಲ್ಲವನ್ನು ಗಮನಿಸಿದರೆ ಇದೊಂದು ಸಣ್ಣ ಪ್ರಕರಣವಲ್ಲ ಎನ್ನುವುದಂತೂ ಸ್ಪಷ್ಟ.
ಇಲ್ಲಿ ಬರೀ ಕ್ರಿಕೆಟ್ ಆಟದ ನೆಪವಿಟ್ಟುಕೊಂಡು ಬೆಳಗಾವಿ ವಾತಾವರಣವನ್ನು ತ್ವೇಷಮಯಗೊಳಿಸುವ ಹುನ್ನಾರ ಇದರ ಹಿಂದಿತ್ತು ಎನ್ನುವ ಅನುಮಾನ ಕಾಡುತ್ತಿದೆ. ಅಳವಣಗಲ್ಲಿಯಲ್ಲಿ ಮಕ್ಕಳ ಕ್ರಿಕೆಟ್ ಆಟ ಆಡುವಾಗ ಚೆಂಡು ಮತ್ತೊಬ್ಬರ ಮನೆಯ ಮುಂದೆ ಬಿದ್ದಿದೆ, ಅದನ್ನು ತೆಗೆದುಕೊಂಡು ಮಕ್ಕಳು ಹೋಗಿದ್ದಾಗ ಹಲ್ಲೆ ನಡೆದಿದೆ. ಇದು ಪ್ರಕರಣ ಬೆಳೆದು ನಂತರ ಕೋಮು ಸಂಘರ್ಷಕ್ಕೆ ಕಾರಣವಾಯಿತು ಎನ್ನುವ ಮಾತಿದೆ.
ತಲವಾರ ಎಸೆತ…!
ಮಕ್ಕಳ ಮೇಲೆ ಹಲ್ಲೆಯಾಗಿದೆ ಎನ್ನುವ ಸುದ್ದಿ ಹಬ್ಬುತ್ತಿದ್ದಂತೆಯೇ ಅಳವಣಗಲ್ಲಿಯಲ್ಲಿ ವಾತಾವರಣದ ತ್ವೇಷಮಯಗೊಂಡಿದೆ. ಅಷ್ಟರಲ್ಲಿ ಎರಡು ಗುಂಪುಗಳ ನಡುವೆ ಮನೆಗಳ ಮೇಲೆ ಕಲ್ಲು, ಇಟ್ಟಿಗೆ ತೂರಾಟ ವ್ಯಾಪಕ ಪ್ರಮಾಣದಲ್ಲಿ ನಡೆದುಹೋಗಿದೆ.
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಪೊಲೀಸ್ ಜೀಪ್ ಪ್ರವೇಶ ಮಾಡಿದ ಸಂದರ್ಭದಲ್ಲಿ ಒಬ್ಬನು ಅವರ ಸಮ್ಮುಖದಲ್ಲಿಯೇ ತಲವಾರ ಮನೆಯೊಂದ ಮುಂದೆ ಎಸೆದು ಹೋದನು ಎನ್ನಲಾಗಿದೆ.
`ನಂತರ ಅದನ್ನು ಅಲ್ಲಿನ ನಿವಾಸಿಗಳು ತಲವಾರ ಎಸೆದಿದ್ದನ್ನು ತೋರಿಸಿ ನಮಗೆ ರಕ್ಷಣೆ ಕೊಡಿ ಎಂದು ಮನವಿ ಮಾಡಿಕೊಂಡರು ಎಂದು ಗೊತ್ತಾಗಿದೆ.
ಕಲ್ಲು, ಇಟ್ಟಿಗೆ ತೂರಾಟ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಅದನ್ನು ನಿಯಂತ್ರಿಸಲು ಹರಸಾಹಸ ಮಾಡಬೇಕಾದ ಪರಿಸ್ಥಿತಿ ಬಂದೊದಗಿತು.
ನಗರ ಸೇವಕರೊಂದಿಗೆ ಖಾಕಿ ವಾಗ್ವಾದ…
ಘಟನೆ ಸುದ್ದಿ ತಿಳಿಯುತ್ತಿದ್ದಂತೆಯೇ ಬೆಳಗಾವಿ ಮಹಾನಗರ ಪಾಲಿಕೆಯ ಬಿಜೆಪಿ ನಗರಸೇವಕರು ಅಳವಣಗಲ್ಲಿ ಬಳಿ ಜಮಾಯಿಸಿದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಪೊಲೀಸ್ ಅಧಿಕಾರಿಗಳು ಅಲ್ಲಿನ ಪರಿಸ್ಥಿತಿಯನ್ನು ನಿಭಾಯಿಸುವ ಬದಲು ನಗರಸೇವಕರ ಜೊತೆ ವಾಗ್ವಾದಕ್ಕಿಳಿದರು.
ಇಲ್ಲಿಗೇ ನೀವೇಕೆ ಬಂದಿದ್ದೀರಿ ಎನ್ನುವುದು ಸೇರಿದಂತೆ ಏರಿದ ಧ್ವನಿಯಲ್ಲಿ ಪೊಲೀಸರು ವಾದ ಮಾಡಿದರು, ಅದಕ್ಕೆ ತಕ್ಕ ಉತ್ತರ ಕೊಟ್ಟ ನಗರಸೇವಕರು ಕೊನೆಗೆ ಪೊಲೀಸ್ ಠಾಣೆಯತ್ತ ತೆರಳಿದರು.
ಕೇಸ್ ಕೌಂಟರ್ ಕೇಸ್..!
ಬೆಳಗಾವಿಯ ಅಳವಣ ಗಲ್ಲಿಯಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಾಪುರ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿವೆ.
ತಲವಾರ್ ಪ್ರದರ್ಶನ ಹಾಗೂ ಕಲ್ಲು ತೂರಾಟ ಸಂಬಂಧ ಅನ್ಯಕೋಮಿನ ೧೪ ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಐಪಿಸಿ ಸೆಕ್ಷನ್ ೧೪೩, ೧೪೭, ೧೪೮, ೩೨೩, ೩೨೪, ೩೦೭, ೩೫೪, ೫೦೪, ೫೦೬, ೧೫೩ ಹಾಗೂ ೧೪೯ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಮತ್ತೊಂದು ಕಡೆಗೆ ಕ್ರಿಕೆಟ್ ಆಡುವಾಗ ಚಂಡು ಮನೆ ಮುಂದೆ ಬಂದಿದಕ್ಕೆ ಮಕ್ಕಳ ಜೊತೆಗೆ ಜಗಳ ಸೇರಿದಂತೆ ೧೩ ಜನರ ಮೇಲೂ ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ ೧೪೩, ೧೪೭, ೧೪೮, ೩೨೩, ೩೨೪, ೩೦೭, ೩೫೪, ೫೦೪, ೫೦೬, ೧೫೩ ಹಾಗೂ ೧೪೯ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಆರೋಪಿಗಳು ಯಾರು?…
ಅಳವಣಗಲ್ಲಿಯ ರೇಣುಕಾ ಮಾಸೇಕರ ಕೊಟ್ಟ ದೂರಿನಲ್ಲಿ ೧೩ ಜನರ ಹೆಸರು ಉಲ್ಲೇಖಿಸಿ ದೂರು ಕೊಡಲಾಗಿದೆ, ಅಷ್ಟೇ ಅಲ್ಲ ಕೊನೆಗೆ ಇತರರು ಎಂದು ೨೦ ರಿಂದ ೨೫ ಜನ ಎಂದು ನಮೂದಿಸಲಾಗಿದೆ, ಅಂದರೆ ಇಲ್ಲಿ ಪೊಲೀಸರು ಸಿಸಿಟಿವಿ ಆಧರಿಸಿ ಇನ್ನುಳಿದವರ ಹೆಸರನ್ನು ಸೇರಿಸಬಹುದು.
ಸಲ್ಲಾವುದ್ದೀನ ತೋರಗಲ್, ರಫೀಕ್ ತೋರಗಲ್, ಅಬ್ದುಲ್ ತೋರಗಲ್, ಆಸೀಮ್ ತೋರಗಲ್, ಫಿರೇಜ್ ತೋರಗಲ್, ಇಬ್ರಾಹಿಂ ತೋರಗಲ್, ಬಿಲಾಲ್ ತೋರಗಲ್, ಶಾಹುಲ್ ಕಡಬಿಲಾಲೆ, ತನ್ವೀರ್ ತೋರಗಲ್, ಮಜಿಬ್ ತೋರಗಲ್, ಮೆಹಬೂಬ ತೋತಗಲ್, ತೋಹಿದ್ ತೋರಗಲ್, ಆಜಾದ್ ತೋರಗಲ್ ಹೆಸರನ್ನು ನಮೂದು ಮಾಡಲಾಗಿದೆ.
ಇದರಲ್ಲಿ ನೊಂದವರು ಎಂದು ಹೇಳಿ ನಾಲ್ಕು ಜನ ಮಕ್ಕಳ ಹೆಸರನ್ನು ಬರೆಯಲಾಗಿದೆ.
ಇದರಲ್ಲಿ ಆರೋಪಿತರು ಮಕ್ಕಳು ಚೆಂಡು ತರಲು ಹೋಗಿದ್ದಾಗ ಧರ್ಮದ ಹೆಸರಿನಲ್ಲಿ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಲ್ಲದೆ ತಲವಾರದಿಂದ ಹಲ್ಲೆ ಮಾಡಿದರು ಎಂದು ಎಫ್‌ಐಆರ್‌ನಲ್ಲಿ ನಮೂದು ಮಾಡಲಾಗಿದೆ.
ಪ್ರತಿ ದೂರು..!
ಇನ್ನು ಇಬ್ರಾಹಿಂ ತೋರಗಲ್ ನೀಡಿದ ದೂರಿನಲ್ಲಿಯೂ ಕೂಡ ೧೨ ಜನರ ವಿರುದ್ಧ ದೂರು ದಾಖಲಾಗಿದೆ. ಇತರರು ಎಂದು ೨೦ ರಿಂದ ೨೫ ಜನ ಉಲ್ಲೇಖ ಮಾಡಿದ್ದಾರೆ.
ಅನಿಲ ಕುರಣಕರ, ಸಮರ್ಥ ಕುರಣಕರ, ಅಜಯ ಮೇಳಗೆ, ಹರ್ಷ ಗೋರೆ, ಅನುಜ ಗೋರೆ, ಸ್ವಪ್ನೀಲ್ ಕೊಠಾರಿ, ಶೇಖರ ಚವ್ಹಾಣ, ಸುಹಾಸ ಚೌಗಲೆ, ನಿಖಿಲ್ ಮಾಸೇಕರ, ಪ್ರತೀಕ್ ಮಾಸೇಕರ, ನಿಶಾಂತ್, ಸಂದೀಪ ಮೋಹನ ಕೋಕಿತಕರ ಹೆಸರು ನಮೂದಾಗಿವೆ.
ಇದರಲ್ಲಿ ಆರೋಪಿತರು ಕ್ರಿಕೆಟ್ ಜಗಳದಲ್ಲಿ ಕೈಯಲ್ಲಿ ಬಡಿಗೆ, ಇಟ್ಟಿಗೆ ಹಿದಿಡುಕೊಂಡ ಫಿರ್ಯಾದಿದಾರರ ಮನೆಗೆ ಕಲ್ಲು ಹೊಡೆದ ಜೀವ ಬೆದರಿಕೆ ಹಾಕಿದರು, ಅಷ್ಟೇ ಅಲ್ಲ ಧರ್ಮದ ಹೆಸರಿನಲ್ಲಿ ನಿಂದಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

Next Article