For the best experience, open
https://m.samyuktakarnataka.in
on your mobile browser.

ಬ್ಯಾಂಕ್ ದರೋಡೆಗೆ ಯತ್ನ: ಓರ್ವನ ಬಂಧನ

10:52 AM Sep 06, 2024 IST | Samyukta Karnataka
ಬ್ಯಾಂಕ್ ದರೋಡೆಗೆ ಯತ್ನ  ಓರ್ವನ ಬಂಧನ

ಹುಬ್ಬಳ್ಳಿ: ಬ್ಯಾಂಕ್ ಧರೋಡೆಗೆ ಯತ್ನಿಸಿದ್ದ ಆರೋಪಿಯನ್ನು ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬ್ಯಾಂಕ್ ದರೋಡೆಗೆ ಯತ್ನಿಸಿದ ಆರೋಪಿ ಗೋಪನಕೊಪ್ಪ ನಿವಾಸಿಯಾದ ಮಂಜುನಾಥ್ ಹಬೀಬ್ (28 ವರ್ಷ ) ಎಂಬಾತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದು, ದರೋಡೆಗೆ ಬಳಸಿದ್ದ ಎರಡು ಚಾಕು, ಬ್ಯಾಗ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಕಳೆದ ದಿನ‌ ಸಂಜೆ 4.30 ಸುಮಾರಿಗೆ ಅಮರಗೋಳ ಎಪಿಎಂಸಿಯಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬ್ಯಾಂಕ್ ಗೆ ಮಾಸ್ಕ್ ಹಾಕಿಕೊಂಡು ಕೈಯಲ್ಲಿ ಚಾಕು ಹಿಡಿದುಕೊಂಡು ಬ್ಯಾಂಕ್ ನೌಕರರೊಬ್ಬರ ಕುತ್ತಿಗೆಗೆ ಚಾಕು ಹಿಡಿದು, ಪ್ರಾಣ ಬೆದರಿಕೆ ಒಡ್ಡಿ '10 ಲಕ್ಷ ರೂ ಹಣ ಕೊಡಿ' ಎಂದು ಹೇಳುತ್ತಾ ಕ್ಯಾಶ್ ಕೌಂಟರ್ ಹತ್ರ ಬಂದಿದ್ದು, ನೌಕರನ ರಕ್ಷಣೆಗೆ ಬಂದವರನ್ನು ತಳ್ಳಿ ಆರೋಪಿಯು ಬ್ಯಾಂಕ್ ನಿಂದ ಓಡಿಹೋಗಿರುವ ಕುರಿತು ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಎಪಿಎಂಸಿ ಪೊಲೀಸ್ ಠಾಣೆಯ ಪಿಐ ಸಮಿವುಲ್ಲಾ ಕೆ ನೇತೃತ್ವದ ಸಿಬ್ಬಂದಿ ಬ್ಯಾಂಕ್ ಸಿಬ್ಬಂದಿಗಳ ಸಹಾಯದಿಂದ ತಕ್ಷಣ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಘಟನೆ ನಡೆದ 5 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯು ಷೇರು ಮಾರುಕಟ್ಟೆಯಲ್ಲಿ ಹಣವನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರಿಂದ ಈ ದರೋಡೆ ಕೃತ್ಯಕ್ಕೆ ಮುಂದಾಗಿದ್ದರ ಬಗ್ಗೆ ತಿಳಿದು ಬಂದಿದ್ದು, ಆರೋಪಿಯ ವಿರುದ್ಧ ಸೂಕ್ತ ಕಾನೂನು ಜರುಗಿಸಲಾಗಿದೆ.