ಬ್ಯಾಂಕ್ ದರೋಡೆ ಪ್ರಕರಣ: ಮೂವರ ಬಂಧನ
07:21 PM Jan 20, 2025 IST | Samyukta Karnataka
ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ
ಮಂಗಳೂರು: ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಮಂಗಳೂರು ಪೊಲೀಸರು ಬಂದಿಸಿದ್ದಾರೆ.
ದರೋಡೆ ಕೃತ್ಯಕ್ಕೆ ಬಳಸಿದ್ದ ಕಾರನ್ನು ಬೆನ್ನಟ್ಟಿ ಹೋಗಿದ್ದರು ಪೊಲೀಸರು. ದರೋಡೆ ನಡೆಸಿದ ಬಳಿಕ ದರೋಡೆ ಕೋರರು ತಲಪಾಡಿ ಟೋಲ್ ಮೂಲಕ ಕೇರಳಕ್ಕೆ ಪರಾರಿಯಾಗಿದ್ದರು.ಕೇರಳದ ಟೋಲ್ನಲ್ಲಿ ಕಾರು ಪಾಸ್ ಆಗಿರೋದು ಕೂಡ ಪತ್ತೆಯಾಗಿತ್ತು. ಇದೀಗ ಮೂವರು ಖದೀಮರನ್ನು ಮಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮುರುಗನ್ಡಿ , ಮಣಿವಣ್ಣನ್ ಹಾಗೂ ಪ್ರಕಾಶ್ ಅಲಿಯಾಸ್ ಜೋಷ್ವಾ ಬಂಧಿತ ಆರೋಪಿಗಳು.