ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಭಗವಂತ ಭಕ್ತವತ್ಸಲ

03:39 AM May 22, 2024 IST | Samyukta Karnataka
PRATHAPPHOTOS.COM

ಭೀಷ್ಮಾಚಾರ್ಯರು ೫೨೫ ವರ್ಷಗಳವರೆಗೆ ಶಾಸ್ತ್ರ ಅಧ್ಯಯನಗಳನ್ನು ಒಟ್ಟಿಗೆ ಅಧ್ಯಯನ ಮಾಡಿದ ಮಹಾನುಭಾವರು. ವಿರಳಾತಿವಿರಳ ಸಾಧಕರು. ಇಂತಹವರು.
ಬೃಹಸ್ಪತಿ ಆಚರಣೆ ಮತ್ತು ಪರಶುರಾಮರು ಇವರಿಬ್ಬರಿಂದಲೂ ಆಧ್ಯಯನವನ್ನು ಮಾಡಿದವರು. ಎರಡು ಕಾರಣಗಳಿಂದ ಭೀಷ್ಮಾಚಾರ್ಯರು ಎದುರಿಗೆ ಇದ್ದಾಗ ಯುದ್ಧ ಮಾಡುವುದು ಯಾರಿಗೇ ಆಗಲಿ ಅದು ಬಹಳ ಕಷ್ಟ. ಏಕೆಂದರೆ ಅವರು ಗುರುಕುಲ ಪಿತಾಮಹರು. ಅವರು ಅಧ್ಯಯನ ಮಾಡಿದ್ದು ಆ ವಿದ್ಯಾಬಲ ಧನುರ್ವಿದ್ಯಾ ಬಲ, ಶಾಸ್ತ್ರ ವಿದ್ಯಾಬಲ, ಮಂತ್ರ ವಿದ್ಯಾಬಲವನ್ನು ಅದರಲ್ಲಿ ಪಾರಂಗತರು.
ಅದಲ್ಲದೆ ಅವರು ಮಹಾಜ್ಞಾನಿಗಳು ಮಂತ್ರಜ್ಞರೂ ಹೌದು. ಇದಲ್ಲದೆ ಅಖಂಡ ಬ್ರಹ್ಮಚರ್ಯ ವೃತ ಪಾಲಿಸಿದವರು. ೮೦೦ ವರ್ಷದ ಭಾರಿ ಅಖಂಡ ಬ್ರಹ್ಮಚರ್ಯದ ನೈಷ್ಠಿಕ ತಪಸ್ಸಿನ ಬೆಂಬಲ ಅವರಿಗಿದೆ. ಇದಲ್ಲದೆ ತಂದೆಗಾಗಿ ತಾನು ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಮಾತು ಕೊಟ್ಟಾಗ ತಂದೆ ವರವಾಗಿ ಕೊಟ್ಟಿದ್ದು ಸ್ವಚ್ಛಂದ ಮೃತ್ಯುತ್ವ.. ಅಂತಹ ಮಹತ್ತರ ವರ ಇಟ್ಟುಕೊಂಡಂತಹ ವ್ಯಕ್ತಿ ನಮ್ಮ ಎದುರುಗಡೆ ನಿಂತುಕೊಂಡಾಗ ಏನು ಅಂತ ಯುದ್ದ ಮಾಡುವುದು? ಅದು ನಿಜಕ್ಕೂ ಕಷ್ಟಕರ. ಅಂತಹ ಮಹಾನ ಸಾಧಕನ ಎದುರು ನಿಂತು ಬಲಾಬಲ ಪರೀಕ್ಷಿಸುವುದು ನಿಜಕ್ಕೂ ಸಾಧಕರಿಗೆ ಮಾತ್ರ ದೊರಕಬಹುದಾದ ಆತ್ಮಶಕ್ತಿ.
ಕುರುಕ್ಷೇತ್ರದಂತಹ ಧರ್ಮ ಯುದ್ಧದಲ್ಲಿ ಕೌರವರು ಮತ್ತು ಪಾಂಡವರು ಕಾದಾಡುವಾಗ ಅಂತಹ ನಿರ್ಣಾಯಕ ಯುದ್ಧದಲ್ಲಿ ತಾನು ಶಸ್ತ್ರ ಹಿಡಿಯುವುದಿಲ್ಲ ಎಂದು ಶಪಥ ಮಾಡಿದ ಕೃಷ್ಣನ ಕೈಯಲ್ಲಿ ಶಸ್ತ್ರವನ್ನು ಹಿಡಿಸುತ್ತೇನೆ ಎಂದು ತಮ್ಮ ಮನೋಬಲವನ್ನು ಪಣಕ್ಕೆ ಒಡ್ಡಿದವರು. ಸ್ವತಃ ಕೃಷ್ಣನ ಅಂತರಂಗದ ಭಕ್ತರಾದ ಇಚ್ಛಾ ಮರಣಿಯಾದ ಭೀಷ್ಮಾಚಾರ್ಯರು ಯುದ್ಧ ಮಾಡುವಾಗ ತಮ್ಮ ಪ್ರಾಬಲ್ಯ ಹೆಚ್ಚಿರುವುದಕ್ಕೆ ಬೀಗುತ್ತಾರೆ. ತಮ್ಮದೇ ವಿಜಯವೆಂದು ಠೇಂಕರಿಸುತ್ತಾರೆ. ಇದೆಲ್ಲವು ಕೃಷ್ಣ ಪರಮಾತ್ಮನನ್ನು ವಿಚಲಿತಗೊಳಿಸುತ್ತದೆ. ಕೊನೆಗೆ ಅನಿವಾರ್ಯವಾಗಿ ಕೃಷ್ಣನು ತನ್ನ ಭಕ್ತನ ಶಪಥವನ್ನು ಈಡೇರಿಸಲು ತನ್ನ ಸುದರ್ಶನ ಚಕ್ರವನ್ನು ಎತ್ತುತ್ತಾನೆ. ಕೃಷ್ಣನ ಮೇಲೆ ಪ್ರಹಾರ ಮಾಡಲು ಬಂದ ಭೀಷ್ಮಾಚಾರ್ಯರೂ ಸಹ ಕೃಷ್ಣ ತನ್ನ ಆಯುಧವಾದ ಚಕ್ರವನ್ನು ಎತ್ತಿರುವುದನ್ನು ನೋಡಿ ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗೆ ಇಟ್ಟು ಕೃಷ್ಣನಿಗೆ ಶರಣಾಗುತ್ತಾರೆ.. ಇದರ ತಾತ್ಪರ್ಯವಿಷ್ಟೇ…ಕೃಷ್ಣ ಶರಣಾಗತವಾಗುವವರನ್ನು ಪೋಷಿಸುವ ಭಕ್ತ ವತ್ಸಲ. ತನ್ನ ಭಕ್ತರ ಇಚ್ಛೆ ಈಡೇರಿಸುವುದಕ್ಕಾಗಿ ತನ್ನ ಶಪಥವನ್ನು ಮರೆಯುತ್ತಾನೆ. ಹೀಗಾಗಿ ಭಗವಂತ ಯಾವಾಗಲೂ ಭಕ್ತವತ್ಸಲನಾಗಿ ಭಕ್ತರ ಹಿತ ಕಾಪಾಡುತ್ತಾನೆ. ಅವರ ಆಂತರ್ಯದ ದೀಪ್ತಿಯಾಗಿ ಸದಾ ಹಿತವನ್ನು ಕಾಪಾಡುತ್ತಾನೆ. ಹಾಗೂ ಸತ್ಯ ಧರ್ಮದ ಕಾರುಣ್ಯ ಮೂರ್ತಿಯಾಗಿ ಕಂಗೊಳಿಸುತ್ತಾನೆ. ಧರ್ಮವೂ ಮಾನವನನ್ನು ಮಾನವಂತನನ್ನಾಗಿ ಮಾಡುತ್ತದೆ. ಮನುಷ್ಯತ್ವವನ್ನು ತುಂಬುತ್ತದೆ.
ಪಾಪಕೂಪದಿಂದ, ದುಖಃ ಸಾಗರದಿಂದ ಉದ್ಧರಿಸಿ ಪುಣ್ಯಮಯ ಜೀವನ ಮಾರ್ಗವನ್ನು ತೋರಿಸುವಲ್ಲಿ ಕೈದೀಪವಾಗುತ್ತದೆ. ದೀಪದಲ್ಲಿ ಕತ್ತಲೆಯನ್ನು ಕಳೆಯುವ ಶಕ್ತಿ ಇದ್ದರೆ ಧರ್ಮದೀಪದಲ್ಲಿ ಅಜ್ಞಾನಾಂಧಕಾರವನ್ನು ಕಳೆಯುವ ಶಕ್ತಿ ಇದೆ. ಕಾರಣ ಧರ್ಮವನ್ನು ಎಷ್ಟು ಎಚ್ಚರದಿಂದ ಅರಿಯಬೇಕು. ಅಳವಡಿಸಿಕೊಳ್ಳಬೇಕೆಂಬುದು ವಿಚಾರಣೀಯವಾಗಿದೆ.

Next Article