ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಭಯ: ಒಂದು ಭಯಾನಕ ಭ್ರಾಂತಿ

04:00 AM Nov 15, 2024 IST | Samyukta Karnataka

ಭಯ ಕಾವ್ಯದ ನವರಸಗಳಲ್ಲಿ ಒಂದು. ಅದು ಕೇವಲ ಮಾನಸಿಕ ಸ್ಥಿತ್ಯಂತರ. ಜೀವನದಲ್ಲಿ ಭಯಪಡುವಂತಹದ್ದು ಏನೂ ಇಲ್ಲ. ತಪ್ಪು ಮಾಡುವ ಮುಂಚೆ ಭಯಪಡಿರಿ. ಮಾಡುವ ತಪ್ಪುಗಳಿಗಾಗಿ ನಿರ್ದಿಷ್ಟ ಕಾರ್ಯಗಳಿಗಾಗಿ ಶಿಕ್ಷೆಯನ್ನು ನೆನಪಿಸಿಕೊಂಡು ಭಯಪಡಿರಿ. ಆಗ ನೀವು ತಪ್ಪುಗಳಿಂದ ದೂರಾಗುವಿರಿ ಎಂದು ಅನೇಕ ದಾರ್ಶನಿಕರು ಹೇಳಿದ್ದಾರೆ.
ಕುರಾನ್ ಭಯದ ವಿಷಯ ಕುರಿತು ವಿವಿಧ ಅಧ್ಯಾಯಗಳಲ್ಲಿ ೧೫ಕ್ಕೂ ಹೆಚ್ಚು ಸಾರಿ ಪ್ರಸ್ತಾಪಿಸಿದೆ. ಜೊತೆಗೆ ಭಯವನ್ನು ಅನೇಕ ಶಬ್ದಗಳಿಂದ ಉಲ್ಲೇಖಿಸಿದೆ. (ಖೌಫ್, ಬಾಶ್ಯ, ತಕ್ವ, ಹದ್ರ, ವಾಜಿಲ್, ರಹಬ್. ಮುಂತಾದವುಗಳು) ಭಯ ಪಡುವುದಾದರೆ ದೇವರ ಭಯವಿರಲಿ. ಅವನನ್ನು ತಿಳಿಯಿರಿ, ಪೂಜಿಸಿರಿ, ಭಯಪಡಿರಿ.' ಎಂದು ಕುರಾನಿನ ಅನೇಕ ವಚನಗಳಲ್ಲಿ ಆಜ್ಞಾಪಿಸಲಾಗಿದೆ. ಅತಿಯಾದ ಭಯವನ್ನು ಅದು ತಿರಸ್ಕರಿಸುತ್ತದೆ. ಕುರಾನಿನ ಈ ವಚನ (ಇಮ್ರಾನ್ ೩:೧೭೫)ನಿಮ್ಮನ್ನು ಆ ಸೈತಾನನು ಹೆದರಿಸುತ್ತಾನೆ ನೀವು ಸನ್ಮಾರ್ಗಿಗಳಾಗಿದ್ದರೆ ಅವನಿಗೆ ಅಂಜಬೇಡಿರಿ. ನನಗೆ ಮಾತ್ರ ಅಂಜಿರಿ'. ಎಂದು (ಪುಸ್ಸಲತ ೩೦:೩೧) ಹೇಳುತ್ತದೆ. ನೀವು ಸನ್ಮಾರ್ಗಿಗಳಾಗಿ ಅಂಜಬೇಡಿ, ದುಃಖಿಸಬೇಡಿರಿ'ಎಂದು ಅಲ್ಲಾಹನು ಸಾರಿದ್ದಾನೆ. ಭಯಪಡುವುದು ಜೀವನದಲ್ಲಿ ಇಲ್ಲವೇ ಇಲ್ಲ. ನೀವು ಅದೃಶ್ಯವಾದುದನ್ನು ಕಂಡು ಭಯಪಡುತ್ತೀರಿ. ಆಗ ನೀವು ದೇವರನ್ನು ನೆನಪಿಸಿ, ಆತನ ಆಶ್ರಯ ಕೋರಿರಿ ಎಂದು ದಾರ್ಶನಿಕರು ಉಪದೇಶಿಸುತ್ತಾರೆ. ಮನುಷ್ಯನು ಸಾಮಾನ್ಯವಾಗಿ ಭಯಪಡುವುದು ಸಾವು, ಪರಿತ್ಯಾಗ ಹಾಗೂ ವಿಫಲತೆ, ಅನ್ಮಾರ್ಗಿಗಳಿಗೆ. ಇವು ಯಾವೂ ಭಯ ಹುಟ್ಟಿಸುವುದಿಲ್ಲ. ಏಕೆಂದರೆ ದೇವರ ಭಯದಲ್ಲಿ ಅವರಿಗೆ ದೃಢ ವಿಶ್ವಾಸವಿದೆ.ಭಯಪಡಬೇಡಿ ನಾನು ನಿಮ್ಮ ಜೊತೆ ಇದ್ದೇನೆ ನಾನು ನೋಡುತ್ತಿದ್ದೇನೆ ಹಾಗೂ ಕೇಳುತ್ತಿದ್ದೇನೆ…' ಎಂದು.
ನಮ್ಮ ಸಾಮಾಜಿಕ ಜೀವನದ ಬದುಕಿನಲ್ಲಿ ಮನುಷ್ಯನಿಗೆ ಅನೇಕ ಭಯಗಳು ಕಾಡುತ್ತವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ರೋಗ ಭಯ, ಹಣಕಾಸಿನ ಭಯ, ಹಾನಿಯ ಭಯ, ಪ್ರಕೃತಿಯ ವಿಕೋಪದ ಭಯ. ಮುಂತಾದ ಹಲವು ಭಯಗಳಲ್ಲಿ ಜೀವಿಸುವವರು, ವಿದ್ವಾಂಸರ ಈ ಮಾತುಗಳನ್ನು ಗಮನಿಸಬೇಕು.
ಭಯದ ಕಾರಣ, ಮೂಢನಂಬಿಕೆ ಹಾಗೂ ಹಿಂಸಾತ್ಮಕ ಭಾವನೆಗಳು. ಕಳೆದ ಆನಂದದ ದಿನಗಳನ್ನು ನೆನಪಿಸುವಾಗಲು ಭಯ ಉಂಟಾಗುತ್ತದೆ. ಬೇರೆಯವರ ಕಠಿಣ ಮಾತು ಹಿಂಸಾತ್ಮಕ ಪದಗಳಿಂದಲೂ ಭಯ ಉಂಟಾಗುತ್ತದೆ.
ಬಹಳಷ್ಟು ಸಹಕಾರಗಳ ಮೂಲ ಭಯದ ವಾತಾವರಣ. ಭಯಪಡುವಾಗ ಈ ಕೆಳಗಿನ ಸಲಹೆಗಳನ್ನು ಮನೋವೈಜ್ಞಾನಿಕರು ಕೊಡುತ್ತಾರೆ.
ನಿಮ್ಮ ಭಯವನ್ನು ಚೆನ್ನಾಗಿ ತಿಳಿದುಕೊಳ್ಳಿರಿ.
ನಿಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಿರಿ.
ಭಯದ ಬಗ್ಗೆ ಭಯಪಡಬೇಡಿ.
ಬರಲಿ ಭಯ.. ನೋಡೋಣ ಎನ್ನಿ.
ನಿಮ್ಮ ಉತ್ಸಾಹದ ವಿಜಯದ ಸ್ವರೂಪವನ್ನು ಸ್ಮರಿಸಿಕೊಳ್ಳಿರಿ.
ಭಯಧ ಕುರಿತು ಇತರರೊಡನೆ ಚರ್ಚಿಸಿ.
ಯೋಗ ಅಥವಾ ಯಾವುದಾದರೂ ಒಂದು ಧ್ಯಾನ ಆಲೋಚನೆಯಲ್ಲಿ ತೊಡಗಿರಿ.
ವ್ಯಾಯಾಮ ಅಥವಾ ಯಾವುದಾದರೂ ಒಂದು ದೈಹಿಕ ಚಟುವಟಿಕೆಗಳಲ್ಲಿ ತೊಡಗಿರಿ.
ಯಾವುದಾದರೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಿರಿ.
ನಿಮಗೆ ಸಹಾಯ ಮಾಡಿದವರನ್ನು ನೆನಪಿಸಿಕೊಂಡು ಕೃತಜ್ಞತೆಗಳನ್ನು ಸಲ್ಲಿಸಿ.
ನಿಮ್ಮ ಕಲ್ಪನೆಗಳನ್ನು ನಿಯಂತ್ರಿಸಿಕೊಳ್ಳಿ
ಕೊನೆಗೆ ದೇವರ ಅಭಯ ಪದೇ ಪದೇ ನೆನಪಿಸಿಕೊಳ್ಳಿ `ಭಯಪಡಬೇಡಿ ನಾನು ನಿಮ್ಮೊಂದಿಗೆ ಇದ್ದೇನೆ ನಾನು ಕೇಳುತ್ತಿದ್ದೇನೆ ನೋಡುತ್ತಿದ್ದೇನೆ'

Next Article