ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಭರತ್ ಶೆಟ್ಟಿ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ

04:04 PM Jul 10, 2024 IST | Samyukta Karnataka

ಮಂಗಳೂರು: ಕೇಂದ್ರ ಸರಕಾರದ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ನ ವರಿಷ್ಠ ನಾಯಕ ರಾಹುಲ್ ಗಾಂಧಿಯವರ ಬಗ್ಗೆ ನೀಡಿರುವ ಮತ್ತು ಹಿಂಸೆಗೆ ಪ್ರಚೋದನೆ ಹೇಳಿಕೆ ನೀಡಿರುವ ಕಾರಣ ಶಾಸಕ ಡಾ.ಭಾರತ್ ಶೆಟ್ಟಿ ಯವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಗೃಹ ಸಚಿವರಿಗೆ ಮನವಿ ಮಾಡುವುದಾಗಿ ಕೆ ಪಿ ಸಿ ಸಿ ಕಾರ್ಯಾಧ್ಯಕ್ಷ ಡಾ.ಮಂಜುನಾಥ ಭಂಡಾರಿ ತಿಳಿಸಿದ್ದಾರೆ.
ಅವರು ಬುಧವಾರ ನಗರದ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.ದೇಶದ ಸಂಸತ್ ನಲ್ಲಿ ಸಂವಿಧಾನಿಕವಾದ ಅಗ್ರಸ್ಥಾನ ವನ್ನು ಹೊಂದಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಬಗ್ಗೆ ಹಿಂಸೆಗೆ ಪ್ರಚೋದನೆ ನೀಡುವ ಹೇಳಿಕೆ ನೀಡಿರುವ ಕಾರಣ ಭರತ್ ಶೆಟ್ಟಿಯ ವಿರುದ್ಧ ಗೃಹ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕು. ಡಾ.ಭರತ್ ಶೆಟ್ಟಿ ಕರಾವಳಿಯ ಶಾಸಕರು ಮುಜುಗರ ಪಡುವ ರೀತಿಯ ಭಾಷೆಯಲ್ಲಿ ಏಕವಚನದಲ್ಲಿ ರಾಹುಲ್ ಗಾಂಧಿಯವರ ಬಗ್ಗೆ ಮಾತನಾಡಿದ್ದಾರೆ.ಕರಾವಳಿಯ ಹೊಡಿ,ಬಡಿ,ಪೊಲೀಸರ ಕಾಲರ್ ಹಿಡಿ ಎನ್ನುವ ರೀತಿ ಮಾತನಾಡುವ ಶಾಸಕರ ಸಾಲಿಗೆ ಡಾ.ಭರತ್ ಶೆಟ್ಟಿ ಸೇರಿದ್ದಾರೆ. ರಾಹುಲ್ ಗಾಂಧಿ ಯಾರನ್ನು ಅವಮಾನಿಸುವ ರೀತಿ ಏಕವಚನದಲ್ಲಿ ಮಾತನಾಡಿಲ್ಲ,ಹಿಂದೂ ಧರ್ಮ ಹಿಂಸೆಗೆ ಬೆಂಬಲ ನೀಡಿವುದಿಲ್ಲ.ಅದು ಕೇವಲ ಬಿಜೆಪಿ, ಆರ್ ಎಸ್ ಎಸ್ ನವರಿಗೆ ಮಾತ್ರ ಸೇರಿದ ಧರ್ಮ ವಲ್ಲ ಎಂದಿರುವುದರಲ್ಲಿ ತಪ್ಪೇನಿದೆ?.ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ ನಲ್ಲಿ ಸಂವಿಧಾನದ ದತ್ತವಾದ ಅಗ್ರ 7ನೆ ಸ್ಥಾನದಲ್ಲಿರುವ ರಾಹುಲ್ ಗಾಂಧಿಯವರು ಸಂಸತ್ ನಲ್ಲಿ ನೀಡಿರುವ ಹೇಳಿಕೆಗೆ ಬಾಲಿಷ ಹೇಳಿಕೆ ಎಂದು ಲಘುವಾಗಿ ಮಾತನಾ ಡಿದ್ದಾರೆ,.ದೇಶದ ನಿರುದ್ಯೋಗ,ಭೃಷ್ಟಾಚಾರ ಸಮಸ್ಯೆಗಳ ಬಗ್ಗೆ ಪ್ರಧಾನಿ ಮಾತನಾಡದೆ ದೇಶದಲ್ಲಿ ಸಂವಿಧಾನ ನೀಡಿರುವ ಉನ್ನತ ಸ್ಥಾನದ ಲ್ಲಿರುವ ( ಶ್ಯಾಡೋ ಪಿ.ಎಂ) 5ಬಾರಿ ಸಂಸದರಾಗಿರುವ ರಾಹುಲ್ ಗಾಂಧಿಗೆ ಮಾಡಿರುವ ಅವಮಾನ.ಭರತ್ ಶೆಟ್ಟಿ ಅವರನ್ನು ಮೀರಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಭರತ್ ಶೆಟ್ಟಿ ತನ್ನ ಕ್ಷೇತ್ರದಲ್ಲಿ ಇರುವ ಒಬ್ಬ ಕಾಂಗ್ರೆಸ್ ಕಾರ್ಯ ಕರ್ತರ ಬಗ್ಗೆ ಮಾತನಾಡಿದರೆ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡುವುದಾಗಿ ಮಂಜುನಾಥ ಭಂಡಾರಿ ಹೇಳಿದರು.

ಚಡ್ಡಿ ಗ್ಯಾಂಗ್‌ ಬಂಧಿಸಿದ ಪೊಲೀಸರಿಗೆ ಅಭಿನಂದನೆ: ಮಂಗಳೂರಿನ ದರೋಡೆ ನಡೆಸಿದ ತಂಡವನ್ನು ಕ್ಷಿಪ್ರವಾಗಿ ಬಂಧಿಸಿರುವ ಪೊಲೀಸರನ್ನು ಅಭಿನಂಧಿಸುವುದಾಗಿ ಮಂಜುನಾಥ ಭಂಡಾರಿ ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ ಪ್ರತಿಭಟನೆ: ದೇಶದ ಲೋಕಸಭಾ ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಶಾಸಕ ಡಾ.ಭರತ್ ಶೆಟ್ಟಿ ನೀಡಿರುವ ಅನುಚಿತ ಹೇಳಿಕೆಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಾಂಗ್ರೆಸ್ ವತಿಯಿಂದ ಮೂರು ದಿನಗಳ ಕಾಲ ಪ್ರತಿಭಟನೆ ನಡೆಸಲಾಗುವುದು.ರಾಹುಲ್ ಹೇಳಿಕೆಗೆ ಶಂಕರಾಚಾರ್ಯರು ಬೆಂಬಲಿ ಸಿದ್ದಾರೆ. ಹಿಂದೂಧರ್ಮ ಉಳಿದಿರುವುದು ಅದರ ತತ್ವ ಆದರ್ಶಗಳಿಂದ ಹೊರತು ಆರ್ ಎಸ್ ಎಸ್ ,ಬಿಜೆಪಿಯಿಂದ ಅಲ್ಲ. ಭರತ್ ಶೆಟ್ಟಿ ತನ್ನ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬೇಕು,ವೈದ್ಯ ವೃತ್ತಿಯಲ್ಲಿಯೂ ಮುಂದಯವರಿಯಲು ಯೋಗ್ಯರಲ್ಲ. ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಸುದ್ದಿ ಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ. ಸುದ್ದಿ ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಎ.ಭಾವ, ಶಾಲೆಟ್ ಪಿಂಟೋ, ಶಾಹುಲ್ ಹಮೀದ್, ಪ್ರವೀಣ್ ಚಂದ್ರ ಆಳ್ವ,ಲಾರೆನ್ಸ್ ಡಿ ಸೋಜಾ, ಸುಹಾನ್ ಆಳ್ವ, ಅನಿಲ್ ಕುಮಾರ್ ಪೂಜಾರಿ, ನಿರಾಜ್ ಚಂದ್ರ ಪಾಲ್, ಟಿ ಕೆ ಸುಧೀರ್ ಉಪಸ್ಥಿತರಿದ್ದರು

Next Article