ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಭವಿಷ್ಯದ ಬಗ್ಗೆ ಯೋಚನೆ

07:05 AM Dec 15, 2024 IST | Samyukta Karnataka

ಭವಿಷ್ಯದ ಬಗ್ಗೆ ಯೋಚನೆ ಮಾಡು..ಚಿಂತನೆ ಮಾಡು ಎಂದು ತಿಗಡೇಸಿಯ ಅಪ್ಪ ಮೊದಲಿನಿಂದಲೂ ಹೇಳುತ್ತಿದ್ದ. ಚಿಕ್ಕವನಿದ್ದಾಗಿನಿಂದಲೂ ಈ ಮಾತು ಕೇಳಿ ಕೇಳಿ ತಿಗಡೇಸಿ ಆವಾಗಿನಿಂದಲೂ ಬರೀ ಭವಿಷ್ಯದ ಬಗ್ಗೆ ಯೋಚನೆ ಮಾಡುತ್ತಿದ್ದಾನೆ. ಎಲ್ಲಿ ಕುಳಿತರೆ ಸಾಕು ಆಕಾಶದ ಕಡೆ ಮುಖ ಮಾಡುತ್ತಾನೆ. ಯಾರಾದರೂ ಅಲ್ಲೇನು ನೋಡುತ್ತಿದ್ದೀಯ ಎಂದು ಕೇಳಿದರೆ…ನೋ…ನಾನು ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಿದ್ದೇನೆ. ಡಿಸ್ಟರ್ಬ್ ಮಾಡಬೇಡಿ ಎಂದು ಅನ್ನುತ್ತಾನೆ. ಮನೆಯಲ್ಲಿ ಸುಮ್ಮನೇ ಕುಳಿತ ತಿಗಡೇಸಿಗೆ ಕೆಲಸ ಹೇಳಿದರೆ ಸಾಕು..ಚಾನ್ಸೇ ಇಲ್ಲ ನಾನೀಗ ಭವಿಷ್ಯದ ಬಗ್ಗೆ ಯೋಚನೆ ಮಾಡುತ್ತಿದ್ದೇನೆ ಅನ್ನುತ್ತಿದ್ದ. ಗೆಳೆಯರೆಲ್ಲ…ಹೌದೂ ಯಾವ ಭವಿಷ್ಯ? ಯಾರ ಭವಿಷ್ಯ? ಎಂದು ಕೇಳಿದರೆ ನಾನು ದೇಶದ ಭವಿಷ್ಯ, ರಾಜ್ಯದ ಭವಿಷ್ಯ, ತಾಲೂಕಿನ ಭವಿಷ್ಯ, ನನ್ನೂರಿನ ಭವಿಷ್ಯದ ಬಗ್ಗೆ ಚಿಂತನೆ ನಡೆಸಿದ್ದೇನೆ ಅನ್ನುತ್ತಿದ್ದ. ದೇಶದ ಬಗ್ಗೆ ಏನು ಯೋಚನೆ ಅಂದಾಗ..ಆ ಕಡೆ ಸೋದಿಮಾಮಾ…ಈ ಕಡೆ ಇಂಡಿ ಮಂದಿ…ಈಗ ಆಕೆ ಆರಿಸಿಹೋದಳು…ತರತರಹದ ಕೋಟುಗಳು….ವಿಮಾನ, ಅವರು ಬಯ್ಯುವುದು..ಇವರು ಅನ್ನುವುದು ಇವೆಲ್ಲದರ ಬಗ್ಗೆ ಎಷ್ಟು ಚಿಂತೆ ಮಾಡುತ್ತೇನೆ ಗೊತ್ತ? ಎಂದು ಹೇಳಿದ. ಅವರ ಬಗ್ಗೆ ನೀನು ಯಾಕೆ ಚಿಂತೆ ಮಾಡುತ್ತಿಯ? ಎಂದು ಕೇಳಿದರೆ ಅವರ ಭವಿಷ್ಯ ಕಟ್ಟಿಕೊಂಡು ನಿನಗೇನು ಆಗಬೇಕು ಅಂದರೆ…ಅದೆಲ್ಲ ಗೊತ್ತಿಲ್ಲ..ನಮ್ಮಪ್ಪಾರು ಭವಿಷ್ಯದ ಬಗ್ಗೆ ಯೋಚನೆ ಮಾಡು…ಚಿಂತನೆ ಮಾಡು ಅಂದಿದ್ದಾರೆ ಆ ಕಾರಣದಿಂದ ಮಾಡುತ್ತಿದ್ದೇನೆ ಅಷ್ಟೆ ಅಂದ. ಹೋಗಲಿ ಇಲ್ಲಿಯ ಬಗ್ಗೆ ಏನಾದರೂ ಚಿಂತೆ ಮಾಡಿದ್ದೀಯ ಅಂದರೆ…ಯಾಕಿಲ್ಲ? ಮಾಡಿಯೇ ಮಾಡುತ್ತೇನೆ. ಮದ್ರಾಮಣ್ಣೋರಿಗೆ ಬಿಗಿ ಅಮರಿದೆ, ಪಂ. ಲೇವೇಗೌಡರು ಈ ವಯಸ್ಸಿನಲ್ಲಿ ಸುಮ್ಮನೇ ಯಾಕೆ ಇರುವುದಿಲ್ಲ. ಸುಮಾರಣ್ಣೋರು ಎಲ್ಲಿಂದ ಎಲ್ಲಿಗೆ ಹಾರಿಬಿಟ್ಟರು ನೋಡಿ…ಗುತ್ನಾಳಣ್ಣ ವಿಜಣ್ಣರ ಜಗಳ ಎಲ್ಲಿಗೆ ಬಂದು ಹತ್ತುತ್ತದೆಯೋ? ಇವೆಲ್ಲದರ ಬಗ್ಗೆ ಚಿಂತನೆ ಮಾಡಿದ್ದೇನೆ ಎಂದು ಹೇಳಿದ…ಸಿಟ್ಟಿಗೆದ್ದ ಗೆಳೆಯರು..ಮೊದಲು ಎಲ್ಲಿಯಾದರೂ ಕೆಲಸಕ್ಕೆ ಹೋಗು..ನಿನ್ನ ಭವಿಷ್ಯದ ಬಗ್ಗೆ ಚಿಂತೆ ಮಾಡು ಅಂದಾಗ..ನಾನು ಪಿತೃಪರಿಪಾಲಕ ಹಾಗಾಗಿ ಅಂದ…ಹಾಳಾಗಿ ಹೋಗು ಎಂದು ಹೋದರು ಗೆಳೆಯರು.

Tags :
#ತಾರಾತಿಗಡಿ
Next Article