For the best experience, open
https://m.samyuktakarnataka.in
on your mobile browser.

ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ಸೇವೆಗೆ ಮೋದಿ ಚಾಲನೆ

11:42 AM Mar 06, 2024 IST | Samyukta Karnataka
ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ಸೇವೆಗೆ ಮೋದಿ ಚಾಲನೆ

ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ ಇಂದು ಕೋಲ್ಕತ್ತಾದಲ್ಲಿ ದೇಶದ ಮೊದಲ ನೀರೊಳಗಿನ ಮೆಟ್ರೋಗೆ ಚಾಲನೆ ನೀಡಿದ್ದಾರೆ.

ಇನ್ನು ಈ ಮೆಟ್ರೋವನ್ನು ಶಾಲಾ ವಿದ್ಯಾರ್ಥಿಗಳೊಂದಿಗೆ ಪ್ರಯಾಣಿಸುವ ಮೂಲಕ ಪ್ರಧಾನಿ ಮೋದಿ ಅವರು ಉದ್ಘಾಟನೆ ಮಾಡಿದರು.

ಭಾರತದ ನದಿಯ ಅಡಿಯಲ್ಲಿರುವ ಮೊದಲ ಸುರಂಗ ಸಂಚಾರಕ್ಕೆ ಮುಕ್ತವಾಗಲಿದೆ. ಕೋಲ್ಕತ್ತಾದ ಹೂಗ್ಲಿ ನದಿಯ ಅಡಿಯಲ್ಲಿ ನಿರ್ಮಿಸಲಾದ ಈ ಸುರಂಗವು ಹೌರಾ ಮೈದಾನ್ ಮತ್ತು ಎಸ್ಪ್ಲಾನೇಡ್ ನಡುವಿನ ಎರಡು ನಿಲ್ದಾಣಗಳನ್ನು ಸಂಪರ್ಕಿಸುತ್ತದೆ. ಇದು ಹೂಗ್ಲಿ ನದಿ ಕೆಳಗೆ 16.6 ಕಿ.ಮೀನಷ್ಟು ವ್ಯಾಪಿಸಿದೆ. ಈ ಮೆಟ್ರೋ ಹೂಗ್ಲಿಯ ಪಶ್ಚಿಮ ದಂಡೆಯಲ್ಲಿರುವ ಪೂರ್ವ ಕರಾವಳಿಯ ಸಾಲ್ಟ್​ ಲೇಕ್ ನಗರಕ್ಕೆ ಸಂಪರ್ಕಿಸುತ್ತದೆ. ಇದು 6 ನಿಲ್ದಾಣಗಳನ್ನು ಹೊಂದಿರುತ್ತದೆ. ಈ ವಿಭಾಗವು 4.8 ಕಿ.ಮೀಗಳಷ್ಟು ಉದ್ದವಾಗಿವೆ.