ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಭಾವನಾತ್ಮಕ ಪರಿಸರ ಮಾಲಿನ್ಯ….

04:40 AM Sep 14, 2024 IST | Samyukta Karnataka

ಮಾನವನು ತನ್ನ ಪರಿಸರದಲ್ಲಿರುವ ಒತ್ತಡದಿಂದ ಬಾಧಿತನಾಗಿದ್ದಾನೆ ಮತ್ತು ತನ್ನ ಮನಸ್ಸಿನ ನಿಯಂತ್ರಣವನ್ನೂ ಹೊಂದಿಲ್ಲ. ಜಲ, ವಾಯು, ಇತ್ಯಾದಿಗಳ ಮಾಲಿನ್ಯವಲ್ಲದೆ, ಬಹಳ ಸೂಕ್ಷ್ಮ ರೀತಿಯಲ್ಲಿ ನಮ್ಮ ನಕಾರಾತ್ಮಕ ಭಾವನೆಗಳಿಂದಲೂ ಪರಿಸರ ಮಾಲಿನ್ಯವನ್ನುಂಟು ಮಾಡುತ್ತೇವೆ. ಪರಿಸರವನ್ನು ಈ ಮಾಲಿನ್ಯದಿಂದ ಶುದ್ಧಗೊಳಿಸಲು ಬಹಳ ಸಮಯ ಹಿಡಿಯುತ್ತದೆ.
ಅನೇಕ ಸಲ ನಮ್ಮಲ್ಲಿ ನಕಾರಾತ್ಮಕ ಭಾವನೆಗಳು, ಸಂಶಯ, ಖಿನ್ನತೆ ಇತ್ಯಾದಿ ಏಳುತ್ತವೆ. ಹೀಗಾದಾಗ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು? ಜೀವನದ ಅನೇಕ ವಿಷಯಗಳ ಬಗ್ಗೆ ನಾವು ತಿಳಿದುಕೊಳ್ಳುತ್ತೇವಾದರೂ ನಮ್ಮ ಮನಸ್ಸನ್ನು ನಿಭಾಯಿಸುವುದು ಹೇಗೆ ಎಂದು ತಿಳಿದುಕೊಂಡೇ ಇಲ್ಲ. ಇದು ಅತೀ ದುರದೃಷ್ಟಕರ ವಿಷಯ. ಮನಸ್ಸನ್ನು ವರ್ತಮಾನದ ಕ್ಷಣದಲ್ಲಿರಿಸುವುದು ಹೇಗೆ? ಸಂತೋಷದಿಂದಿರುವುದು ಹೇಗೆ? ಕೃತಜ್ಞತೆಯನ್ನು ಹೇಗೆ ಹೊಂದುವುದು? ಈ ವಿಷಯಗಳ ಬಗ್ಗೆ ನಾವು ತಿಳಿದುಕೊಂಡಿಲ್ಲ.
ನಮ್ಮ ಪರಿಸರ, ನಮ್ಮ ಮನಸ್ಸು, ನಮ್ಮ ಭಾವನೆಗಳು, ನಮ್ಮ ಜೀವನವನ್ನು ಆಳುತ್ತಿರುವ ಒಂದು ತತ್ವವಿದೆ ಎಂಬ ವಿಷಯವನ್ನು ನಾವು ತಿಳಿದುಕೊಂಡಿಲ್ಲ. ನಮ್ಮ ದೇಹ ನಕಾರಾತ್ಮಕ ಭಾವನೆಗಳಿಗಿಂತಲೂ ಹೆಚ್ಚಾಗಿ ಸಕಾರಾತ್ಮಕ ಭಾವನೆ, ಆನಂದ, ಶಾಂತಿಯನ್ನು ಹೆಚ್ಚಾಗಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ನಮ್ಮ ಅಸ್ತಿತ್ವದ ಕೇಂದ್ರ ಆನಂದ, ಸಕಾರಾತ್ಮಕತೆ, ಸಂತೋಷ. ಆದರೆ ಅದು ನಕಾರಾತ್ಮಕ ಮೋಡಗಳಿಂದ ಆವರಿಸಲ್ಪಟ್ಟಿದೆ.
ಉಸಿರಿನ ಸಹಾಯದಿಂದ ಸುಲಭವಾಗಿ ಈ ನಕಾರಾತ್ಮಕ ಭಾವನೆಗಳಿಂದ ಹೊರಬರಬಹುದು. ಧ್ಯಾನದಿಂದ, ಕೆಲವು ಉಸಿರಾಟದ ಪ್ರಕ್ರಿಯೆಗಳಿಂದ ಈ ನಕಾರಾತ್ಮಕತೆಯ ಮೋಡವನ್ನು ಕರಗಿಸಿಬಿಡಬಹುದು. ಬಹುಶಃ ಭವಿಷ್ಯದಲ್ಲಿ, ಯಾರಾದರೂ ಖಿನ್ನರಾದರೆ ಅವರಿಗೆ ದಂಡ ವಿಧಿಸುವಂತಹ ಕಾನೂನು ಬರಬಹುದು! ಖಿನ್ನತೆಗೊಳಗಾದರೆ ಹತ್ತು ಸಾವಿರ ರೂಪಾಯಿ ದಂಡ! ಆಗ ಯಾವ ಗುಳಿಗೆಗಳನ್ನು ನುಂಗದೆ ನಿಮ್ಮ ಎಲ್ಲ ಖಿನ್ನತೆಯನ್ನು ಹೊರದೂಡಿಸಲು, ಹೋಗಿ ಉಸಿರಾಟದ ಪ್ರಕ್ರಿಯೆ, ಧ್ಯಾನವನ್ನು ಮಾಡಿ ಎನ್ನಬಹುದು!
ಖಿನ್ನರಾಗಲು ಏನಿದೆ? ಹೇಗಿದ್ದರೂ ನೀವು ಈ ಭೂಮಿಯ ಮೇಲಿರುವುದು ಕೆಲವೇ ವರ್ಷಗಳವರೆಗೆ. ಇಲ್ಲಿರುವಷ್ಟು ಕಾಲ ನಗುತ್ತಲೇ ಬಾಳಬಹುದಲ್ಲ ! ಈ ಜೀವನ ನಿಮಗೆಂದು ಕೊಡಲು ಬಹಳ ವಿಷಯಗಳನ್ನು ಹೊಂದಿದೆ. ಆಗಾಗ ಸ್ವಲ್ಪ ಸಮಯವನ್ನು ನಿಮಗೆಂದು ತೆಗೆದುಕೊಂಡು ಏಕಾಂತದಲ್ಲಿದ್ದು, ನಿಮ್ಮ ಆತ್ಮವನ್ನು ಪುನಶ್ಚೇತಗೊಳಿಸಿ ಕೊಂಡಾಗ ನಿಮಗಿದು ಸ್ಪಷ್ಟವಾಗಿ ಕಾಣುತ್ತದೆ. ನಿಮ್ಮ ಮುಗುಳ್ನಗೆಗಾಗಿ ನಿಮ್ಮ ಆತ್ಮವು ಬಹಳ ಹಸಿದುಕೊಂಡು ಕಾದಿದೆ. ಇದನ್ನು ನೀವು ಕೊಡಬಲ್ಲಿರಾದರೆ ಇಡೀ ವರ್ಷ ನೀವು ಶಕ್ತಿಯುತರಾಗಿರುತ್ತೀರಿ ಮತ್ತು ನಿಮ್ಮ ಮುಗುಳ್ನಗೆಯನ್ನೂ ಯಾರಿಂದಲೂ ನಿಮ್ಮಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ. ನಿಮ್ಮೊಳಗೆ ಆಳವಾಗಿ ಹೊಕ್ಕಾಗ, ಮನಸ್ಸನ್ನು ಪ್ರಶಾಂತಗೊಳಿಸಿ ನಿಮ್ಮ ಮನಸ್ಸಿನಲ್ಲಿ ನೀವು ಹೊತ್ತುಕೊಂಡಿರುವ ಸಂಸ್ಕಾರಗಳನ್ನು ಅಳಿಸಿ ಹಾಕಿದಾಗ, ನಮ್ಮ ಅಸ್ತಿತ್ವದ ಕೇಂದ್ರವಾಗಿರುವ ದಿವ್ಯತೆಯನ್ನು ಅನುಭವಿಸಬಲ್ಲಿರಿ…

Next Article