ಭ್ರಷ್ಟ ಅಧಿಕಾರಿಗಳಿಗೆ ರಕ್ಷಣೆ ಭಾಗ್ಯ
ಬೆಂಗಳೂರು: ವರ್ತುಲ ರಸ್ತೆ ಯೋಜನೆಗಾಗಿ ಜಮೀನು ಕಳೆದುಕೊಂಡ ರೈತರು ಭ್ರಷ್ಟ ಬಿಡಿಎ ಅಧಿಕಾರಿ ಅಶೋಕ್ ಬಾಗಿ ಅವರ ವಿರುದ್ಧ ದೂರು ನೀಡಿ, ಅವರ ವಿರುದ್ಧ ತನಿಖೆಗೆ ಆದೇಶವಾಗಿ, ಮಾತೃ ಇಲಾಖೆಗೆ ಹಿಂತಿರುಗುವಂತೆ ವರ್ಗಾವಣೆಯ ಆಗಿದ್ದರೂ ಸೇವಾ ನಿಯಮ ಉಲ್ಲಂಘಿಸಿ, ಡಿಸಿಎಂ ಕಚೇರಿ ಆದೇಶಕ್ಕೂ ಕ್ಯಾರೆ ಎನ್ನದೆ ಬಿಡಿಎ ಅಲ್ಲೇ ಠಿಕಾಣಿ ಹೂಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ರಕ್ಷಣೆ ಭಾಗ್ಯ; ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳ, ಆತ್ಮಹತ್ಯೆ ಭಾಗ್ಯ, ಒಂದು ಕಡೆ ವಾಲ್ಮೀಕಿ ನಿಗಮದ ಚಂದ್ರಶೇಖರನ್ ಸೇರಿದಂತೆ ಮೂರ್ನಾಲ್ಕು ಪ್ರಾಮಾಣಿಕ ಅಧಿಕಾರಿಗಳು, ಸಿಬ್ಬಂದಿಗಳು ಕಾಂಗ್ರೆಸ್ ಸಚಿವರು, ಶಾಸಕರ ಭ್ರಷ್ಟಚಾರ, ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮತ್ತೊಂದು ಕಡೆ ಭ್ರಷ್ಟ ಅಧಿಕಾರಿಗಳು ಸರ್ಕಾರದ ಆದೇಶವನ್ನೂ ಲೆಕ್ಕಿಸದೆ ಲೂಟಿ ಹೊಡೆಯುತ್ತಿದ್ದಾರೆ. ಡಿಸಿಎಂ ಡಿ ಕೆ ಶಿವಕುಮಾರ ಅವರೇ, ನಿಮ್ಮ ಕಚೇರಿಯ ಆದೇಶದ ನಂತರವೂ ಭ್ರಷ್ಟ ಅಧಿಕಾರಿ ಬಿಡಿಎ ಅಲ್ಲೇ ಮುಂದುವರೆದಿದ್ದಾರಲ್ಲ, ತಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲವೆ? ಅಥವಾ ತಾವೇ ಭ್ರಷ್ಟ ಅಧಿಕಾರಿಗಳ ರಕ್ಷಣೆ ಮಾಡುತ್ತಿದ್ದೀರೋ? ಎಂದು ಪ್ರಶ್ನಿಸಿದ್ದಾರೆ.