For the best experience, open
https://m.samyuktakarnataka.in
on your mobile browser.

ಮಕ್ಕಳಿಗೆ ಹೊಯ್ಸಳ, ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಪ್ರದಾನ

09:58 AM Nov 30, 2024 IST | Samyukta Karnataka
ಮಕ್ಕಳಿಗೆ ಹೊಯ್ಸಳ  ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಪ್ರದಾನ

ಬೆಂಗಳೂರು: 2023-24ನೇ ಸಾಲಿನ ಹೊಯ್ಸಳ, ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ನಗರದ ಕಬ್ಬನ್ ಉದ್ಯಾನದಲ್ಲಿರುವ ಜವಾಹರ ಬಾಲಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜವಾಹರ ಬಾಲಭವನ ಸೊಸೈಟಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು.
ಸಂಕಷ್ಟದ ಸಂದರ್ಭದಲ್ಲಿ ಸಮಯಪ್ರಜ್ಞೆ ಮೆರೆದು ಧೈರ್ಯ ಸಾಹಸ ಪ್ರದರ್ಶಿಸಿ ಇತರರ ಪ್ರಾಣ ಅಪಾಯದಿಂದ ರಕ್ಷಿಸಿದಂತಹ ಮಕ್ಕಳಿಗೆ 2023-24ನೇ ಸಾಲಿನ ಹೊಯ್ಸಳ, ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗಳನ್ನು ಶುಕ್ರವಾರ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಶೌರ್ಯ ಪ್ರಶಸ್ತಿಗಳನ್ನು ಮಕ್ಕಳಿಗೆ ನೀಡಿ ಗೌರವಿಸಲಾಯಿತು. 10 ಸಾವಿರ ರೂ. ನಗದು, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ಕೊಡಮಾಡಲಾಯಿತು. ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ರಾಜ್ಯ ಪ್ರಶಸ್ತಿ ಹಾಗೂ ಜವಾಹರ ಬಾಲಭವನ ಕಲಾಶ್ರೀ ಪ್ರಶಸ್ತಿಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೀಡಿದರು.

ಶೌರ್ಯ ಪ್ರಶಸ್ತಿ ಪಡೆದ ಮಕ್ಕಳು: ಧಾರವಾಡದ ಕಲಘಟಗಿ ತಾಲೂಕಿನ ಬೆಡತಿಹಳ್ಳದ ಮಹಮ್ಮದ ಸಮೀರ ಬುಕ್ಕಿಟಗಾರ, ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿಯ ಆರ್.ವೈಭವಿ, ಉಡುಪಿ ಜಿಲ್ಲೆಯ ಸಾಲಿಗ್ರಾಮದ ಧೀರಜ್ ಐತಾಳ್, ಬೆಳಗಾವಿ ಜಿಲ್ಲೆಯ ಸ್ಫೂರ್ತಿ ವಿಶ್ವನಾಥ ಸವಾಶೇರಿ, ಶಿವಮೊಗ್ಗದ ಸಾಗರ ತಾಲೂಕಿನ ಅರಳಗೋಡಿನ ಎಲ್.ನಿಶಾಂತ್​​ ಮತ್ತು ಎ.ಎನ್.ಅಶ್ವಿನ್, ಶಿವಮೊಗ್ಗದ ಹೊಸನಗರ ತಾಲೂಕಿನ ಆನೆಕರ ಬಾಳೂರಿನ ಆರ್.ಮಣಿಕಂಠ

Tags :