ಮಗಳ ಹತ್ಯೆ ಪ್ರಕರಣ, ನ್ಯಾಯ ಸಿಗುವ ಲಕ್ಷಣ ಕಾಣುತ್ತಿಲ್ಲ; ನಿರಂಜನ
ಹುಬ್ಬಳ್ಳಿ: `ನಾನೊಬ್ಬ ಕಾಂಗ್ರೆಸ್ ಮುಖಂಡ, ಪಾಲಿಕೆ ಸದಸ್ಯ. ರಾಜ್ಯದಲ್ಲಿ ನಮ್ಮದೇ ಪಕ್ಷದ ಸರ್ಕಾರ ಆಡಳಿತ ನಡೆಸುತ್ತಿದೆ. ಆದರೆ, ನಮ್ಮ ಮಗಳ ಸಾವಿಗೆ ನ್ಯಾಯ ಸಿಗುವ
ಲಕ್ಷಣ ಕಾಣುತ್ತಿಲ್ಲ. ಮುಖ್ಯಮಂತ್ರಿಗಳು, ಕಾನೂನು ಸಚಿವರು, ಕಾಂಗ್ರೆಸ್ ಪಕ್ಷದ ಕರ್ನಾಟಕ ಉಸ್ತುವಾರಿ ಸುರ್ಜೆವಾಲಾ ಅವರು ಫಾಸ್ಟ್ ಟ್ರಾö್ಯಕ್‌ಗೆ ಪ್ರಕರಣ
ವಹಿಸುವುದು, ೯೦ರಿಂದ ೧೨೦ ದಿನಗಳಲ್ಲಿ ಪ್ರಕರಣ ವಿಚಾರಣೆ ಪೂರ್ಣಗೊಳಿಸಿ ನ್ಯಾಯ
ದೊರಕಿಸಿಕೊಡುವ ಭರವಸೆ ನೀಡಿದ್ದರು. ಆದರೆ, ಈಗ . ಗೃಹ ಸಚಿವರು ಉಲ್ಟಾ
ಹೊಡೆದಿದ್ದಾರೆ. ಅವರ ಹೇಳಿಕೆ ಬೇಸರ ಮೂಡಿಸಿದೆ'
ಇದು ಎಪ್ರಿಲ್ ೧೮ ರಂದು ಬಿವಿಬಿ ಕ್ಯಾಂಪಸ್‌ನಲ್ಲಿ ಹತ್ಯೆಯಾದ ನೇಹಾ ಹಿರೇಮಠ ಅವರ
ತಂದೆ ಹಾಗೂ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರು ಬುಧವಾರ ಮಾಧ್ಯಮಗಳಿಗೆ
ನೀಡಿದ ಪ್ರತಿಕ್ರಿಯೆ ಇದೆ.
ನೇಹಾ ಹತ್ಯೆಯಾದ ಕೆಲ ದಿನಗಳ ನಂತರ ನೇಹಾ ಅವರ ಮನೆಗೆ ಭೇಟಿ ನೀಡಿದ್ದ ಗೃಹ ಸಚಿವ ಡಾ.
ಪರಮೇಶ್ವರ ಅವರು ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ವಿಭಿನ್ನ
ಪ್ರಕರಣವಾಗಿದ್ದು, ತ್ವರಿತ ವಿಚಾರಣೆಗೆ ಫಾಸ್ಟ್ ಟ್ರಾö್ಯಕ್ ಕೋರ್ಟ್ಗೆ ವಹಿಸುವ
ಭರವಸೆ ನೀಡಿದ್ದರು. ಅಂಜುಮನ್ ಇಸ್ಲಾಂ ಸಂಸ್ಥೆಯೂ ಫಾಸ್ಟ್ ಟ್ರಾö್ಯಕ್ ಕೋರ್ಟ್ಗೆ
ಪ್ರಕರಣ ವಹಿಸಲು ಮನವಿ ಮಾಡಿತ್ತು. ಮುಖ್ಯಮಂತ್ರಿಯವರೂ ಭೇಟಿ ನೀಡಿದ ವೇಳೆ ಭರವಸೆ
ನೀಡಿದ್ದರಂತೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮೇಲೆ ನೇಹಾ ಪೋಷಕರು ಭರವಸೆ
ಹೊಂದಿದ್ದರು.
ಆದರೆ, ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಗೃಹ ಸಚಿವ ಡಾ.ಜಿ
ಪರಮೇಶ್ವರ ಅವರು ನೇಹಾ ಹತ್ಯೆ ಪ್ರಕರಣವನ್ನು ತನಿಖಾ ತಂಡ ತನಿಖೆ ನಡೆಸಿ ಚಾರ್ಜ್ ಶೀಟ್
ಹಾಕಿದೆ. ಫಾಸ್ಟ್ ಟ್ರಾö್ಯಕ್ ಕೋರ್ಟ್ ಗೆ ಪ್ರಕರಣ ವಹಿಸುವುದು ನಮ್ಮ ಕೈಯಲ್ಲಿ ಅಂದರೆ
ಸರ್ಕಾರದ ಬಳಿ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯದಲ್ಲಿ ತೀರ್ಮಾನ
ಕೈಗೊಳ್ಳುತ್ತಾರೆ. ಅವರು ಪ್ರಸ್ತಾವನೆ ನಂತರ ಸರ್ಕಾರ ಮುಂದಿನ ತೀರ್ಮಾನ ಮಾಡುತ್ತದೆ
ಎಂದು ನೀಡಿದ ಹೇಳಿಕೆ ನೇಹಾ ತಂದೆ ನಿರಂಜನ ಹಿರೇಮಠ ಅವರಿಗೆ ಬೇಸರ ಮೂಡಿಸಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಮಗಳ ಹತ್ಯೆ ಪ್ರಕರಣದಲ್ಲಿ
ನ್ಯಾಯ ಸಿಗುವುದು ಅನುಮಾನ ಕಾಡುತ್ತಿದೆ. ಗೃಹ ಸಚಿವರು ನೀಡಿರುವ ಹೇಳಿಕೆಯು
ಬೇಸರವನ್ನುಂಟು ಮಾಡಿದೆ ಎಂದಿದ್ದಾರೆ.