For the best experience, open
https://m.samyuktakarnataka.in
on your mobile browser.

ಮದರ್ ಸೋನಿಯಾ ಗಾಂಧಿ ಮಾದರಿ

01:12 AM Feb 19, 2024 IST | Samyukta Karnataka
ಮದರ್ ಸೋನಿಯಾ ಗಾಂಧಿ ಮಾದರಿ

ಗುಂಗು - ಹಂಗಿದ್ದರೆ ಮಾತ್ರ ಸಾರ್ವಜನಿಕ ಬದುಕು; ಇಲ್ಲವಾದರೆ ಅದೊಂದು ಬಾಗಿಲಿಲ್ಲದ ಮನೆ. ಆದರೆ, ಇಂತಹ ತಥಾಕಥಿತ ಪ್ರಮೇಯಗಳನ್ನು ನಿರಾಕರಿಸುವ ರೀತಿಯಲ್ಲಿ ಸೋನಿಯಾ ಗಾಂಧಿಯವರು ೨೮ ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಅದರ ಜೊತೆ ಸಂಪೂರ್ಣ ಒಡನಾಟವನ್ನು ಹೊಂದಿದ್ದರೂ ಕಮಲಪತ್ರದ ಮೇಲಿನ ನೀರಿನಂತೆ ನಿರ್ಮೋಹಿಯಾಗಿ ರಾಜಕಾರಣದ ಮುಂಚೂಣಿಯಲ್ಲಿರುವುದು ನಿಜಕ್ಕೂ ಒಂದು ವಿಸ್ಮಯದ ಸಂಗತಿ.
ಗಾಂಧಿ ಪರಿವಾರವಿಲ್ಲದೆ ಕಾಂಗ್ರೆಸ್ ಇಲ್ಲ ಎಂಬ ಮಾತಿನ ಮುಂದುವರಿದ ಭಾಗವಾಗಿ ಸೋನಿಯಾ ಗಾಂಧಿ ಇಲ್ಲದೆ ಕಾಂಗ್ರೆಸ್ ಚಟುವಟಿಕೆ ಇಲ್ಲ ಎಂಬ ಮಾತು ಚಾಲ್ತಿಗೆ ಬರುತ್ತಿದ್ದರೂ ಅದು ಚಲಾವಣೆಗೆ ಬಾರದ ರೀತಿಯಲ್ಲಿ ನೋಡಿಕೊಂಡು ಶತಮಾನಕ್ಕೂ ಹೆಚ್ಚಿನ ಇತಿಹಾಸವಿರುವ ಕಾಂಗ್ರೆಸ್ ಪಕ್ಷವನ್ನು ಸಾಮೂಹಿಕ ನಾಯಕತ್ವದ ನೆಲೆಯಲ್ಲಿ ಕಟ್ಟಿ ಬೆಳೆಸಿ ಅಧಿಕಾರಕ್ಕೆ ಬರುವಂತೆ ಮಾಡಿದ್ದು ಭಾರತದ ಸಂದರ್ಭದಲ್ಲಿ ಒಂದು ದೊಡ್ಡ ಪವಾಡವೇ. ಇಂತಹ ಪವಾಡ ಸದೃಶ ಮಹಿಳೆ ಕಳೆದ ೨೫ ವರ್ಷಗಳಿಂದ ಸತತವಾಗಿ ಆಯ್ಕೆಯಾಗಿ ಬರುತ್ತಿದ್ದ ರಾಯ್‌ಬರೇಲಿ ಕ್ಷೇತ್ರದಿಂದ ನಿರ್ಗಮಿಸಿ ರಾಜ್ಯಸಭಾ ಸದಸ್ಯರಾಗಲು ಮುಂದಾಗಿರುವ ಬೆಳವಣಿಗೆಯಲ್ಲಿ ಸಾರ್ಥಕತೆಯ ಜೊತೆಗೆ ಧನ್ಯತೆಯ ಭಾವವನ್ನೂ ಗುರುತಿಸಬಹುದು. ರಾಯ್‌ಬರೇಲಿ ಕ್ಷೇತ್ರದ ಮತದಾರರಿಗೆ ಬರೆದಿರುವ ಧನ್ಯವಾದ ಸಲ್ಲಿಸುವ ಪತ್ರದಲ್ಲಿ ಅವರು ಬಳಸಿರುವ ಶಬ್ದಗಳಲ್ಲಿ ಎದ್ದು ಕಾಣುವುದು ಜನಪರ ಹಾಗೂ ತಾಯ್ತತನದ ಕಕ್ಕುಲತೆಯ ಭಾವ.
ರಾಯ್‌ಬರೇಲಿ ಕ್ಷೇತ್ರದಲ್ಲಿ ಲಾಗಾಯ್ತಿನಿಂ­ದಲೂ ನೆಹರೂ ಕುಟುಂಬದ ಸದ­ಸ್ಯರೇ ಮೊದಲಿನಿಂದಲೂ ಸಂಸದರಾಗಿರು­ತ್ತಿದ್ದದ್ದು ಒಂದು ಇತಿಹಾಸ. ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾಗಾಂಧಿ ಹೀಗೆ ಸತತವಾಗಿ ಅವರ ಪರಿವಾರದವರೇ ಈ ಕ್ಷೇತ್ರದಲ್ಲಿ ಆರಿಸಿಬರುತ್ತಿದ್ದರು. ಒಮ್ಮೆ ಮಾತ್ರ ೧೯೭೭ರ ಚುನಾವಣೆಯಲ್ಲಿ ಜನತಾ ಪಕ್ಷದ ರಾಜ್‌ನಾರಾಯಣ್ ವಿರುದ್ಧ ಇಂದಿರಾಗಾಂಧಿಯವರು ಸೋತಿದ್ದನ್ನು ಬಿಟ್ಟರೆ ಬೇಎ ಯಾವ ಸಂದರ್ಭದಲ್ಲಿಯೂ ಈ ಪರಿವಾರದವರು ಸೋಲು ಕಂಡಿದ್ದಿಲ್ಲ. ನೆರೆಯ ಅಮೇಥಿ ಕ್ಷೇತ್ರವೂ ಕೂಡಾ ನೆಹರು ಪರಿವಾರದವರ ಕ್ಷೇತ್ರವೇ ಆಗಿತ್ತು. ಸಂಜಯ್‌ಗಾಂಧಿ ಈ ಕ್ಷೇತ್ರದಲ್ಲಿ ಆರಿಸಿಬರುತ್ತಿದ್ದರು. ರಾಹುಲ್ ಕೂಡಾ ಇದೇ ಕ್ಷೇತ್ರದಿಂದ ಮೊದಲು ಅರಿಸಿಬಂದಿದ್ದರು. ಹೀಗಾಗಿಯೇ ಸೋನಿಯಾ ಅವರಿಗೆ ಈ ಕ್ಷೇತ್ರಗಳ ಜೊತೆ ಕರುಳಬಳ್ಳಿಯ ಸಂಬಂಧ.
ಸುಮಾರು ಮೂರು ದಶಕಗಳ ಸಾರ್ವಜನಿಕ ಬದುಕಿನಲ್ಲಿ ದುಡುಕಿ ಮಾತನಾಡಿದ ಸಂದರ್ಭಗಳನ್ನು ಯಾರೂ ಕಂಡಿಲ್ಲ. ಮಾತಿಗಿಂತಲೂ ಮೌನದಲ್ಲಿ ಮಾತನಾಡುವ ಅವರ ಕಲೆಗಾರಿಕೆ ನಿಜಕ್ಕೂ ಅಪರೂಪ. ಆದರೆ, ದೇಶದ ವ್ಯಕ್ತಿ ಹಾಗೂ ವಿಷಯಗಳ ಬಗ್ಗೆ ಸಂಪೂರ್ಣ ಅರಿವು ಅವರಿಗೆ. ಅರಿಯದೇ ಮಾತನಾಡುವ ಸ್ವಭಾವ ಇವರದಲ್ಲ. ಹಿರಿಯರನ್ನು ಕಂಡರೆ ಗೌರವಿಸುವ ಸೋನಿಯಾ ಅವರ ಬಗ್ಗೆ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಅಪರಿಮಿತ ವಿಶ್ವಾಸ. ೨೦೦೪ರ ಲೋಕಸಭಾ ಚುನಾವಣೆಯ ನಂತರ ಮನಸ್ಸು ಮಾಡಿದ್ದರೆ ಸೋನಿಯಾಗಾಂಧಿಯವರು ಭಾರತದ ಪ್ರಧಾನಿಯಾಗಬಹುದಾಗಿತ್ತು. ಆದರೆ, ಅಧಿಕಾರ ಪೀಠದಿಂದ ದೂರವುಳಿಯುವ ಅವರ ಸಂಕಲ್ಪ ತ್ಯಾಗದ ನಿಜರೂಪ.

ಸೋನಿಯಾ ಅವರು ಇಟಲಿ ಮೂಲದ ವಿದೇಶಿ ಮಹಿಳೆ ಎಂಬ ಕೊಂಕು ಮಾತುಗಳು ಕೇಳಿಬಂದು ಹಾಗೆಯೇ ಗಾಳಿಯಲ್ಲಿ ತೇಲಿಹೋಗಲು ಮುಖ್ಯವಾದ ಕಾರಣ ಸೋನಿಯಾ ಅವರ ಸಜ್ಜನಿಕೆ ಜೊತೆಗೆ ಅವರ ಸಾರ್ವಜನಿಕ ವರ್ತನೆ. ನಂಜಿನ ಸ್ವಭಾವ ಕಂಡರೆ ಗಾವುದ ದೂರ ಉಳಿಯುವ ಅವರ ನಡೆ ಕಾಂಗ್ರೆಸ್ಸಿಗರಿಗಷ್ಟೆ ಅಲ್ಲ ದೇಶದ ಎಲ್ಲ ರಾಜಕಾರಣಿಗಳಿಗೂ ದೊಡ್ಡ ಆಕರ್ಷಣೆ.
ನೆಹರೂ ಕುಟುಂಬದ ಸೊಸೆಯಾಗಿ ಭಾರತಕ್ಕೆ ಬಂದ ಮೇಲೆ ಅವರು ಸುಖಕ್ಕಿಂತ ಕಷ್ಟಕಾರ್ಪಣ್ಯಗಳಿಗೆ ಎದುರಾದದ್ದು ಪರಿಸ್ಥಿತಿಯ ಇನ್ನೊಂದು ಮುಖ. ಅತ್ತೆ ಇಂದಿರಾಗಾಂಧಿ ಹಂತಕರ ಗುಂಡಿಗೆ ಬಲಿಯಾದ ನಂತರ ಒಲ್ಲದ ಮನಸ್ಸಿನಿಂದ ಪತಿ ರಾಜೀವ್ ಗಾಂಧಿ ಪ್ರಧಾನಿಯಾಗಲು ಸಮ್ಮತಿಸಿದ್ದು ಆಗಿನ ಮಟ್ಟಿಗೆ ಪ್ರಮುಖ ನಿರ್ಧಾರ. ಆದರೆ, ವರ್ಷಗಳು ಉರುಳಿದಂತೆ ಹಂತಕರ ಪಿತೂರಿಯಲ್ಲಿ ಸ್ಫೋಟಕ್ಕೆ ರಾಜೀವ್ ಬಲಿಯಾದ ಸಂದರ್ಭವನ್ನು ಜೀರ್ಣಿಸಿಕೊಂಡದ್ದು ಇನ್ನೊಂದು ದೊಡ್ಡ ಕಥಾನಕ. ಇದಾದ ನಂತರ ರಾಜಕಾರಣದ ಸಹವಾಸವೇ ಬೇಡ ಎಂದು ದೂರ ಉಳಿದಿದ್ದ ಸಂದರ್ಭದಲ್ಲಿ ೧೯೯೬ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸೀತಾರಾಮ್ ಕೇಸರಿ ಅವರ ಉತ್ತರಾಧಿಕಾರಿಯಾಗಿ ಕಾಂಗ್ರೆಸ್ ನಾಯಕತ್ವವನ್ನು ವಹಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ಒಪ್ಪಿ ರಾಜಕೀಯದಲ್ಲಿ ಹೊಸ ಆಸೆ - ಹೊಸ ಬೆಳಕನ್ನು ತಂದುಕೊಟ್ಟ ಸೋನಿಯಾ ಗಾಂಧಿಯವರು ವರ್ತಮಾನದ ರಾಜಕಾರಣದಲ್ಲಿ ಒಬ್ಬ ಮಾದರಿ ಮಹಿಳೆ. ಮನಸ್ಸು ಮಾಡಿದ್ದರೆ ಜೀವಮಾನ ಪರ್ಯಂತ ಕಾಂಗ್ರೆಸ್ ಅಧ್ಯಕ್ಷರಾಗಿಯೇ ಮುಂದುವರಿಯಬಹುದಾಗಿದ್ದ ಅವಕಾಶವನ್ನು ಸ್ವಯಂಪ್ರೇರಣೆಯಿಂದ ಕೈಬಿಟ್ಟು ವಿಶ್ವಾಸಾರ್ಹ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಕೈಗೆ ಜೋಪಾನ ಮಾಡುವಂತೆ ವಹಿಸಿರುವ ಹಿಂದಿರುವುದು ಉದಾತ್ತ ತ್ಯಾಗ ಹಾಗೂ ಔದಾರ್ಯದ ನಿಜವಾದ ಮುಖ. ಮದರ್ ತೆರೇಸಾ ರೀತಿಯಲ್ಲಿ ಔದಾರ್ಯ ಹಾಗೂ ಎಲ್ಲರನ್ನೂ ಒಳಗೊಳ್ಳುವ ಗುಣದ ಸೋನಿಯಾ ನಿಜವಾದ ಅರ್ಥದಲ್ಲಿ ಈ ಶತಮಾನದ ಮಾದರಿ ಹೆಣ್ಣು.
ಸುಮಾರು ಮೂರು ದಶಕಗಳ ಸಾರ್ವಜನಿಕ ಬದುಕಿನಲ್ಲಿ ದುಡುಕಿ ಮಾತನಾಡಿದ ಸಂದರ್ಭಗಳನ್ನು ಯಾರೂ ಕಂಡಿಲ್ಲ. ಮಾತಿಗಿಂತಲೂ ಮೌನದಲ್ಲಿ ಮಾತನಾಡುವ ಅವರ ಕಲೆಗಾರಿಕೆ ನಿಜಕ್ಕೂ ಅಪರೂಪ. ಆದರೆ, ದೇಶದ ವ್ಯಕ್ತಿ ಹಾಗೂ ವಿಷಯಗಳ ಬಗ್ಗೆ ಸಂಪೂರ್ಣ ಅರಿವು ಅವರಿಗೆ. ಅರಿಯದೇ ಮಾತನಾಡುವ ಸ್ವಭಾವ ಇವರದಲ್ಲ. ಹಿರಿಯರನ್ನು ಕಂಡರೆ ಗೌರವಿಸುವ ಸೋನಿಯಾ ಅವರ ಬಗ್ಗೆ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಅಪರಿಮಿತ ವಿಶ್ವಾಸ. ೨೦೦೪ರ ಲೋಕಸಭಾ ಚುನಾವಣೆಯ ನಂತರ ಮನಸ್ಸು ಮಾಡಿದ್ದರೆ ಸೋನಿಯಾಗಾಂಧಿಯವರು ಭಾರತದ ಪ್ರಧಾನಿಯಾಗಬಹುದಾಗಿತ್ತು. ಆದರೆ, ಅಧಿಕಾರ ಪೀಠದಿಂದ ದೂರವುಳಿಯುವ ಅವರ ಸಂಕಲ್ಪ ತ್ಯಾಗದ ನಿಜರೂಪ.
ಸೋನಿಯಾ ಅವರು ಇಟಲಿ ಮೂಲದ ವಿದೇಶಿ ಮಹಿಳೆ ಎಂಬ ಕೊಂಕು ಮಾತುಗಳು ಕೇಳಿಬಂದು ಹಾಗೆಯೇ ಗಾಳಿಯಲ್ಲಿ ತೇಲಿಹೋಗಲು ಮುಖ್ಯವಾದ ಕಾರಣ ಸೋನಿಯಾ ಅವರ ಸಜ್ಜನಿಕೆ ಜೊತೆಗೆ ಅವರ ಸಾರ್ವಜನಿಕ ವರ್ತನೆ. ನಂಜಿನ ಸ್ವಭಾವ ಕಂಡರೆ ಗಾವುದ ದೂರ ಉಳಿಯುವ ಅವರ ನಡೆ ಕಾಂಗ್ರೆಸ್ಸಿಗರಿಗಷ್ಟೆ ಅಲ್ಲ ದೇಶದ ಎಲ್ಲ ರಾಜಕಾರಣಿಗಳಿಗೂ ದೊಡ್ಡ ಆಕರ್ಷಣೆ.
ನೆಹರೂ ಕುಟುಂಬದ ಸೊಸೆಯಾಗಿ ಭಾರತಕ್ಕೆ ಬಂದ ಮೇಲೆ ಅವರು ಸುಖಕ್ಕಿಂತ ಕಷ್ಟಕಾರ್ಪಣ್ಯಗಳಿಗೆ ಎದುರಾದದ್ದು ಪರಿಸ್ಥಿತಿಯ ಇನ್ನೊಂದು ಮುಖ. ಅತ್ತೆ ಇಂದಿರಾಗಾಂಧಿ ಹಂತಕರ ಗುಂಡಿಗೆ ಬಲಿಯಾದ ನಂತರ ಒಲ್ಲದ ಮನಸ್ಸಿನಿಂದ ಪತಿ ರಾಜೀವ್ ಗಾಂಧಿ ಪ್ರಧಾನಿಯಾಗಲು ಸಮ್ಮತಿಸಿದ್ದು ಆಗಿನ ಮಟ್ಟಿಗೆ ಪ್ರಮುಖ ನಿರ್ಧಾರ. ಆದರೆ, ವರ್ಷಗಳು ಉರುಳಿದಂತೆ ಹಂತಕರ ಪಿತೂರಿಯಲ್ಲಿ ಸ್ಫೋಟಕ್ಕೆ ರಾಜೀವ್ ಬಲಿಯಾದ ಸಂದರ್ಭವನ್ನು ಜೀರ್ಣಿಸಿಕೊಂಡದ್ದು ಇನ್ನೊಂದು ದೊಡ್ಡ ಕಥಾನಕ. ಇದಾದ ನಂತರ ರಾಜಕಾರಣದ ಸಹವಾಸವೇ ಬೇಡ ಎಂದು ದೂರ ಉಳಿದಿದ್ದ ಸಂದರ್ಭದಲ್ಲಿ ೧೯೯೬ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸೀತಾರಾಮ್ ಕೇಸರಿ ಅವರ ಉತ್ತರಾಧಿಕಾರಿಯಾಗಿ ಕಾಂಗ್ರೆಸ್ ನಾಯಕತ್ವವನ್ನು ವಹಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ಒಪ್ಪಿ ರಾಜಕೀಯದಲ್ಲಿ ಹೊಸ ಆಸೆ - ಹೊಸ ಬೆಳಕನ್ನು ತಂದುಕೊಟ್ಟ ಸೋನಿಯಾ ಗಾಂಧಿಯವರು ವರ್ತಮಾನದ ರಾಜಕಾರಣದಲ್ಲಿ ಒಬ್ಬ ಮಾದರಿ ಮಹಿಳೆ.
ಮನಸ್ಸು ಮಾಡಿದ್ದರೆ ಜೀವಮಾನ ಪರ್ಯಂತ ಕಾಂಗ್ರೆಸ್ ಅಧ್ಯಕ್ಷರಾಗಿಯೇ ಮುಂದುವರಿಯಬಹುದಾಗಿದ್ದ ಅವಕಾಶವನ್ನು ಸ್ವಯಂಪ್ರೇರಣೆಯಿಂದ ಕೈಬಿಟ್ಟು ವಿಶ್ವಾಸಾರ್ಹ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಕೈಗೆ ಜೋಪಾನ ಮಾಡುವಂತೆ ವಹಿಸಿರುವ ಹಿಂದಿರುವುದು ಉದಾತ್ತ ತ್ಯಾಗ ಹಾಗೂ ಔದಾರ್ಯದ ನಿಜವಾದ ಮುಖ. ಮದರ್ ತೆರೇಸಾ ರೀತಿಯಲ್ಲಿ ಔದಾರ್ಯ ಹಾಗೂ ಎಲ್ಲರನ್ನೂ ಒಳಗೊಳ್ಳುವ ಗುಣದ ಸೋನಿಯಾ ನಿಜವಾದ ಅರ್ಥದಲ್ಲಿ ಈ ಶತಮಾನದ ಮಾದರಿ ಹೆಣ್ಣು.