ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮನಸ್ಸಿಗೆ ನೋವಾದಾಗ… ನಾಲಿಗೆ ಮೌನವಾಗಿರಲಿ

04:10 AM Oct 18, 2024 IST | Samyukta Karnataka

ದಾರ್ಶನಿಕರು ಹೇಳುತ್ತಾರೆ ದೇವರು ನಮಗೆ ಹೆಚ್ಚು ನೋಡಲು ಕೇಳಲು ಎರಡು ಕಿವಿ ಮತ್ತು ಎರಡು ಕಣ್ಣುಗಳನ್ನು ಕೊಟ್ಟಿದ್ದಾನೆ. ಆದರೆ ಒಂದೇ ಒಂದು ನಾಲಿಗೆ ಕೊಟ್ಟಿದ್ದಾನೆ ಕಡಿಮೆ ಮಾತನಾಡಲು. 'ನಮ್ಮ ಸೌಂದರ್ಯ, ಪ್ರೀತಿ, ನೇವರಿಕೆ, ಅಪ್ಪುಗೆ, ನಮ್ಮ ಮೈದಡುವಿಕೆ, ಭಾವಾಂಜಲಿ ಎಲ್ಲವೂ ನಾಲಿಗೆಯಲ್ಲಿದೆ. ನಾಲಿಗೆಯಿಂದ ನಮ್ಮ ಸುತ್ತಲಿನ ಜಗತ್ತನ್ನು ಬದಲಾಯಿಸಬಹುದು. ನಾಲಿಗೆ ನಮಗಿರುವ ಅತ್ಯಂತ ಮುಖ್ಯವಾದ ಅಂಗ. ಇದು ನಮ್ಮ ಭಾವನೆಗಳ ವೇದಿಕೆ. ಇದು ಚಾಲನೆಗೊಂಡಾಗ ಮಾತು ಸ್ಫುರಿಸುತ್ತದೆ.ನಾಲಿಗೆಯನ್ನು ಉಪಯೋಗಿಸುವ ಮೊದಲು ಒಮ್ಮೆ ಅಂದರೆ ಮಾತನಾಡುವ ಮೊದಲು ನಿಮ್ಮ ಮನಸ್ಸಿನೊಡನೆ ಮಾತನಾಡಿರಿ' ಎಂದು ಇಸ್ಲಾಮಿ ವಿದ್ವಾಂಸರು ಹೇಳಿದ್ದನ್ನು ನೆನಪಿಸಬಹುದು.
ಕುರಾನಿನ ೨೦ ಅಧ್ಯಾಯಗಳ ಅನೇಕ ವಚನಗಳಲ್ಲಿ ನಾಲಿಗೆ, ಮಾತು ಕುರಿತು ಮಾರ್ಗದರ್ಶಿ, ಸಂದೇಶಗಳನ್ನು, ಆದೇಶಗಳನ್ನು ನೀಡಲಾಗಿದೆ.
(ಅಲ್ ಇಮ್ರಾನ್, ಅನ್ನಿಸಾ, ಅನ್ನಹ್ಲ, ಅನ್ನೂರ, ಫತಹ, ತ್ವಾಹಾ, ಅಶಮ್ಸ, ಅಹಜಾಬ. ಮುಂತಾದವು)..
ಸಾಮಾನ್ಯವಾಗಿ ಜನರು ಮಾತನಾಡುವುದೇ ಹೆಚ್ಚು, ವಿಚಾರ ಮಾಡುವುದು ಕಡಿಮೆ. ಕುರಾನ್ ಈ ರೀತಿಯ ನಡವಳಿಕೆಯನ್ನು ಖಂಡಿಸಿದೆ. ಅಧ್ಯಾಯ ಅಲ್ ನಿಸಾ ದ (೪:೧೧೪) ಈ ವಚನ ನೋಡಿ..`ಜನರು ಆಡುವ ಹೆಚ್ಚಿನ ಗುಪ್ತ ಮಾತು ಕಥೆಗಳಲ್ಲಿ ಯಾವ ಹಿತವೂ ಇರುವುದಿಲ್ಲ. ಅವರು ರಹಸ್ಯವಾಗಿ ದಾನ ಧರ್ಮಗಳ ಬೋಧನೆ ನೀಡಿದರೆ ಸತ್ಕಾರ್ಯಕ್ಕೆ ಪರಸ್ಪರ ವ್ಯವಹಾರಗಳನ್ನು ಸರಿಪಡಿಸಲಿಕ್ಕೆ ಮಾತು ಆಡಿದರೆ ಅಂತವರಿಗೆ ನಾವು ಪ್ರತಿಫಲ ನೀಡುವೆವು'…
ಜನರು ಸಮಯ ಹರಣ ಮಾಡಲು ಮಾತುಗಳನ್ನು ಆಡಬಾರದು. ಇದಕ್ಕಾಗಿ ನಿಮ್ಮ ನಾಲಿಗೆಯನ್ನು ಹರಿ ಬಿಡಬಾರದು. ಕುರಾನ್ ಮತ್ತೆ ತನ್ನ ಮಾರ್ಗದರ್ಶನದಲ್ಲಿ ನಾವು ನಾಲಿಗೆಯನ್ನು ಯಾವ ಯಾವ ಮಾತುಗಳಿಗಾಗಿ ಉಪಯೋಗಿಸಬೇಕೆಂಬ ಮೂರು ಸೂತ್ರಗಳನ್ನು ಹೇಳುತ್ತದೆ.
ನಿಮ್ಮ ಮಾತುಗಳಲ್ಲಿ ಅನುಕಂಪ ಮಮತೆ ದಾನ ಔದಾರ್ಯಗಳು ಇರಬೇಕು.
ಇತರರಿಗಾಗಿ ನಿಮ್ಮ ಮಾತುಗಳು ಕರುಣೆ ದಯೆಗಳಿಂದ ತುಂಬಿರಬೇಕು.
ಪರಸ್ಪರ ಬಾಂಧವ್ಯ ಸೋದರತ್ವ ಸೃಷ್ಟಿಸುವ ಮಾತುಗಳನ್ನು ಆಡಬೇಕು.

ಇವು ನಮ್ಮ ನಾಲಿಗೆಯಿಂದ ಸುಸಂಸ್ಕೃತ ಪರಿಸರವನ್ನು ನಿರ್ಮಿಸಲು ಸಾಧ್ಯ. ಇದರಿಂದ ಹೇಳುವವನು ಕೇಳುವವನು ಇಬ್ಬರೂ ನೆಮ್ಮದಿಯ ಸುಖ ಅನುಭವಿಸುವಂತಹದಾಗುತ್ತದೆ. ಹೇಳುವವನ ಆದರ್ಶ ಕಳಕಳಿ, ಕೇಳುವವನಿಗೆ ಲಾಭದಾಯಕ, ಸಂತೋಷದ ಭಾವನೆಗಳನ್ನು ನೀಡುತ್ತದೆ. ಆಗ ಆಡುವವನ ನಾಲಿಗೆಯನ್ನು ನಾವು ಆಚಾರವಂತ ನಾಲಿಗೆ ಎಂದು ಕರೆಯಬಹುದು.
ದೇವರು ಮನುಷ್ಯನಿಗೆ ನೀಡಿದ ಈ ಅಂಗವನ್ನು ಯಾವ ಜೀವಿಗೂ ನೀಡಿಲ್ಲ. ಯಾವ ಎರಡು ಆಕಾಶ ಕಾಯಗಳು, ವೃಕ್ಷಗಳು, ಪ್ರಾಣಿಗಳು, ಪರ್ವತಗಳು, ನದಿಗಳು. ಪರಸ್ಪರ ಮಾತನಾಡಲಾರವು. ಇದು ಮನುಷ್ಯನಿಗೆ ಸಾಧ್ಯ. ದುರ್ದೈವದಿಂದ ಈ ಅಂಗವನ್ನು ಒಳಿತಿಗೆ ಕಡಿಮೆ ಕೆಡುಕಿಗೆ ಹೆಚ್ಚು ಉಪಯೋಗವಾಗುತ್ತಿದೆ.
ಸಂಸ್ಕಾರಿ ನಾಲಿಗೆಯನ್ನು ಹೊಂದಿರುವ ವ್ಯಕ್ತಿ ಸಮಾಜ ಸುಧಾರಕನಾಗಬಲ್ಲ.
ಆತ ಮಾತನಾಡುವದೆಲ್ಲ ದೈವಿ ಮಾತುಗಾರಿಕೆ ಆಗುತ್ತದೆ. ಸ್ವರ್ಗದಲ್ಲಿ ಮಾತನಾಡಿದಂತೆ ಭಾಸವಾಗುತ್ತದೆ. ಆತನ ಮನಸ್ಸು ನೋವಿನಲ್ಲಿ ಇದ್ದರೂ ಅವನ ನಾಲಿಗೆ ಮೌನವಾಗಿರುತ್ತದೆ. ನೋವಿನಲ್ಲಿಯೂ ಅವನು ಮೌನವಾಗಿರುತ್ತಾನೆ.

Next Article