ಮನೆ ಸ್ವಚ್ಛವಾಗಿದ್ದರೆ ಮನಸ್ಸೂ ಸ್ವಚ್ಛ
ಅಡುಗೆ ಮನೆಯಲ್ಲಿ ಇರುವ ಪಾತ್ರೆಗಳನ್ನು ಚೆನ್ನಾಗಿ ತೊಳೆದಿರಬೇಕು. ಒಂದೇ ಕ್ರಮದಲ್ಲಿ ಜೋಡಿಸಿಟ್ಟಿರಬೇಕು. ಮನೆಯಲ್ಲಿ ಎಲ್ಲಿ ನೋಡಿದರೂ ಧೂಳು ಇರಬಾರದು. ಚೆನ್ನಾಗಿ ಸಾರಿಸಿರಬೇಕು. ಮನೆಯಲ್ಲಿ ಯಾವಾಗಲೂ ಮಾತನಾಡುತ್ತಲೇ ಇರಬಾರದು. ಮೌನವಾಗಿರಬೇಕು. ಧಾನ್ಯಗಳು ಕಾಣುವಂತೆ ಇರಬಾರದು. ಪ್ರತಿಯೊಂದು ಆಹಾರ ಪದಾರ್ಥಗಳನ್ನು ಮುಚ್ಚಿಟ್ಟಿರಬೇಕು. ಹಸಿವು ಆಗುವ ಸಮಯಕ್ಕೆ ಸರಿಯಾಗಿ ತಿಂಡಿ-ತಿನಿಸನ್ನು, ಭೋಜನವನ್ನು ಸಿದ್ಧಪಡಿಸಬೇಕು. ಹೀಗೆ ಮಾಡಿದ ಮೇಲೆ ಆಲಸ್ಯದಿಂದ ಪಾತ್ರೆಗಳನ್ನು ಅಶುದ್ಧವಾಗಿಯೇ ಇಡುವುದು, ಗೋಮಯ ಮಾಡದೇ ಇರುವುದು, ತಿಂಗಳಾದರೂ ಧೂಳನ್ನು ತೆಗೆಯದೇ ಇರುವುದು, ಜೇಡರ ಬಲೆಗಳನ್ನು ಹಾಗೆಯೇ ಬಿಡುವುದು, ಹುಳು-ಹುಪ್ಪಟಗಳಿಗೆ ಅವಕಾಶ ಮಾಡಿಕೊಡುವುದು, ಹಸಿವಾದರೂ ಕೂಡ ಆಹಾರವನ್ನು ಸಿದ್ಧಪಡಿಸದೇ ಇರುವುದು ಆಹಾರಧಾನ್ಯಗಳನ್ನು ಹೇಗೆ ಬೇಕೋ ಹಾಗೆ ಅಲ್ಲಲ್ಲೇ ಇಡುವುದು. ಎಲ್ಲಿ ನೋಡಿದರಲ್ಲಿ ಬಟ್ಟೆ ಬರೆಗಳನ್ನು ಹಾಕುವುದು ಇವೆಲ್ಲವೂ ಉತ್ತಮ ಗೃಹಿಣಿ ಅಥವಾ ಸ್ತ್ರೀ ಲಕ್ಷಣಗಳಲ್ಲ. ಇದು ದಾರಿದ್ರ್ಯದ ಸಂಕೇತವಾಗಿದೆ. ಇಂತಹವರ ಮನೆಯಲ್ಲಿ ಲಕ್ಷ್ಮೀದೇವಿಯು ನಿಲ್ಲುವುದಿಲ್ಲ. ಮನಸ್ಸು ಸ್ವಚ್ಛವಾಗಿರಬೇಕಾದರೆ ಮನೆಯೂ ಸ್ವಚ್ಛವಾಗಿರಬೇಕು.