For the best experience, open
https://m.samyuktakarnataka.in
on your mobile browser.

ಮಹಾನಗರ ಪಾಲಿಕೆಗೆ ಮೂರು ಪ್ರಶಸ್ತಿ

06:30 AM Aug 23, 2024 IST | Samyukta Karnataka
ಮಹಾನಗರ ಪಾಲಿಕೆಗೆ ಮೂರು ಪ್ರಶಸ್ತಿ

   ಹುಬ್ಬಳ್ಳಿ: ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ರಾಷ್ಟ್ರೀಯ ಜೀವನೋಪಾಯ ಅಭಿಯಾನ ಕರ್ನಾಟಕ ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ ಯೋಜನೆಯಡಿ ಉತ್ತಮ ಸಾಧನೆಗಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಮೂರು ಪ್ರಶಸ್ತಿಗಳು ಲಭಿಸಿದ್ದು, ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಪ್ರದಾನಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರನಿಧಿ ಯೋಜನೆಯಡಿ ಉತ್ತಮ ಸಾಧನೆಗಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಒಟ್ಟು-03 ಪ್ರಶಸ್ತಿಗಳು ಲಭಿಸಿವೆ.
ಬೀದಿಬದಿ ವ್ಯಾಪಾರಸ್ಥರು, ಚಿಂದಿ ಆಯುವವರು, ಹಾಲು ವಿತರಕರು, ಪತ್ರಿಕೆ ಹಂಚಿಕೆದಾರರು ಒಳಗೊಂಡಂತೆ ಅತಿ ಹೆಚ್ಚು ಜನರಿಗೆ ಸಾಲ ವಿತರಣೆಯಲ್ಲಿ ರಾಷ್ಟ್ರಮಟ್ಟದಲ್ಲಿ 2ನೇ ಸ್ಥಾನ ಮತ್ತು ರಾಜ್ಯ ಮಟ್ಟದಲ್ಲಿ 1ನೇ ಸ್ಥಾನವನ್ನು ಮಹಾನಗರ ಪಾಲಿಕೆ ಪಡೆದಿರುತ್ತದೆ.
ಸ್ವ-ನಿಧಿ ಸೇ ಸಮೃದ್ಧಿ ಯೋಜನೆಯಡಿ ಕೂಡ ಉತ್ತಮ ಸಾಧನೆಗೈದಿದ್ದಕ್ಕಾಗಿ ಮಹಾನಗರ ಪಾಲಿಕೆಗೆ ರಾಜ್ಯ ಮಟ್ಟದ ಮೊದಲನೇ ಪ್ರಶಸ್ತಿ ದೊರೆತಿರುತ್ತದೆ.
ಮಹಾನಗರ ಪಾಲಿಕೆಯ ಆಯುಕ್ತ ಡಾ.ಈಶ್ವರ ಉಳಾಗಡ್ಡಿ, ಸಮುದಾಯ ವ್ಯವಹಾರಗಳ ಅಧಿಕಾರಿ ರಮೇಶ ನೂಲ್ವಿ, ಅರವಿಂದ ಜಮಖಂಡಿ, ಸರೋಜಾ ಪೂಜಾರ, ಅಭಿಯಾನ ವ್ಯವಸ್ಥಾಪಕ ಅಬ್ದುಲ್ ರಜಾಕ್ ಗಡವಾಲೆ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಅಭಿಯಾನ ವ್ಯವಸ್ಥಾಪಕ ಡಾ. ರವಿ ಮುನವಳ್ಳಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ, ಫಲಾನುಭವಿ ಇಸ್ಮಾಯಿಲ್ ಬಿಳೆಪಸಾರ, ಪಟ್ಟಣ ಮಾರಟ ಸಮಿತಿ ಸಭೆಯ ಸದಸ್ಯ ಆದಮಸಾಬ (ಜಾಫರ) ಮುಲ್ಲಾನವರ ಅವರು ಬೆಂಗಳೂರಿನಲ್ಲಿ ಜರುಗಿದ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡರು.
ಯೋಜನೆಯ ಯಶಸ್ವಿ ಅನುಷ್ಟಾನಕ್ಕೆ ಸೂಕ್ತ ಸಲಹೆ ಹಾಗೂ ಸಹಕಾರ ನೀಡಿದ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್, ರಾಷ್ಟ್ರೀಯ ಜೀವನೋಪಾಯ ಅಭಿಯಾನ ನಿರ್ದೇಶಕ ಪಿ.ಐ. ಶ್ರೀವಿದ್ಯಾ, ಡಿಸಿ ದಿವ್ಯಾ ಪ್ರಭು ಜಿ.ಆರ್.ಜೆ, ಸೇರಿದಂತೆ ಅಧಿಕಾರಿಗಳಿಗೆ ಆಯುಕ್ತ ಡಾ.ಈಶ್ವರ ಉಳಾಗಡ್ಡಿ ಅಭಿನಂದನೆ ಸಲ್ಲಿಸಿದ್ದಾರೆ.

Tags :