For the best experience, open
https://m.samyuktakarnataka.in
on your mobile browser.

ಮಾರ್ಕ್ಸ್ ಮತ್ತು ಬಸವಣ್ಣ

08:30 AM Oct 06, 2024 IST | Samyukta Karnataka
ಮಾರ್ಕ್ಸ್ ಮತ್ತು ಬಸವಣ್ಣ

ಕಾಯಕವೇ ಪೂಜೆಯಂದು ಸಾರಿದ ಮಾರ್ಕ್ಸ್
ಸಮಾಜವಾದಿಯೆನಿಸಿದನಯ್ಯ
ಕಾಯಕದಿ ಕೈಲಾಸ ಕಂಡವನು ಅಣ್ಣ ಬಸವಣ್ಣನು
ವಿಶ್ವಕುಟುಂಬಿಯೆನಿಸಿದನಯ್ಯಾ
ಕಾಯಕವೇ ಪೂಜೆಯೆಂಬಲ್ಲಿ ಸಾಧನವೆನಿಸಿಹುದು
ಕಾಯಕವೇ ಕೈಲಾಸವಾದಲ್ಲಿ ಸಾಧನೆವೆನಿಸಿಹುದು
ಮಾಕ್ಸ್ನಿಗಿಂತ ಅಣ್ಣನ ಕಾಯಕ ತತ್ವ
ಅತ್ಯಂತ ಸಿದ್ಧಿ ನೋಡಯ್ಯ ಮೃಡಗಿರಿ ಅನ್ನದಾನೀಶ…
ಮಾಕ್ಸ್ ಎಂಬವನು ಜರ್ಮನಿಯಲ್ಲಿ ೧೮೧೮ ಮೇ ೫ ರಂದು ಜನಿಸಿ ಉನ್ನತ ಶಿಕ್ಷಣದಲ್ಲಿ ಅರ್ಥಶಾಸ್ತç, ಇತಿಹಾಸ, ಮತ್ತು ಸಮಾಜ ಶಾಸ್ತçದ ಅಧ್ಯಯನ ಮಾಡಿದನು. ಸಮಾಜದಲ್ಲಿಯ ಕುಂದು ಕೊರತೆಯನ್ನು ಚನ್ನಾಗಿ ಬಲ್ಲವನಾಗಿದ್ದನು. ಸಮಾಜದಲ್ಲಿನ ಮೇಲು-ಕೀಳುನ್ನು ಹೋಗಲಾಡಿಸಲು ಶ್ರಮಿಸಿದ. ಕರ್ತವ್ಯ ನಿರ್ವಹಿಸುವಲ್ಲಿ ಜನಜಾಗೃತಿಯನ್ನು ಮಾಡಿದನು.
ಬಸವಣ್ಣನವರು ೧೨ ನೇ ಶತಮಾನದಲ್ಲಿ ಜನಿಸಿ ಬಡತನ ಅಜ್ಞಾನವನ್ನು ಹೋಗಲಾಡಿಸಲು ಲಿಂಗಧಾರಣ ಮಾಧ್ಯಮವಾಗಿ ಸರ್ವರನ್ನು ಸಮನಾಗಿ ಕಂಡವರು.
ಬಡತನ ನಿವಾರಣೆಗೆ ಕಾಯಕ ಸಿದ್ಧಾಂತವನ್ನು ಬಿಂಬಿಸಿದರು. ದುಡಿದುಣ್ಣುವ ಪ್ರವೃತ್ತಿಯನ್ನು ಕಲಿಸಿದರು. ಮಾಡುವ ಕೆಲಸಕ್ಕೆ ಕಾಯಕವೆಂದು ತಿಳಿಸಿದರು.
ಕಾಯಕವನ್ನು ಮಾಡುವಲ್ಲಿ ದೇವತ್ವವನ್ನು ಕಂಡರು. ಅದಕ್ಕಾಗಿ ಕಾಯಕವೇ ಕೈಲಾಸವೆಂದು ಸಾರಿದರು.
ಮಾಕ್ಸ್ನ ದೃಷ್ಟಿಯಲ್ಲಿ ಕೆಲಸವಾಗಿದ್ದು, ಅದನ್ನು ಏಕನಿಷ್ಠೆಯಿಂದ ಮಾಡಿ ಪ್ರತಿಫಲವನ್ನು ಪಡೆಯಬೇಕು. ಅದು ಹಕ್ಕು ಎಂದು ಸಾರಿದನು. ಕೆಲವೊಬ್ಬ ಜ್ಞಾನಿಗಳು ಮಾಕ್ಸ್ನ ಸಿದ್ಧಾಂತವನ್ನು ಪೂಜೆ ಎಂದರು.
ಆದರೆ ಅಣ್ಣ ಬಸವಣ್ಣನವರು, ಕಾಯಕವನ್ನು ಕೈಲಾಸವಾಗಿ ಕಂಡಿದ್ದಲ್ಲದೇ ಕಾಯಕದಲ್ಲಿ ಆತ್ಯಂತಿಕ ಸಿದ್ಧಿಯಿದೆ. ಪೂಜೆಗೊಂದು ಕೆಲಸವೆಂಬುದು ಸಾಧನವಾದರೆ, ಕಾಯಕವೆಂಬುದು
ಪೂಜಾಫಲದ ಸಾಧನೆ ಎನಿಸಿದರು. ಆದರಿಂದ ಮಾಕ್ಸ್ನ ಸಮಾಜವಾದಕ್ಕಿಂತ ಬಸವಣ್ಣನವರ ಕಾಯಕ ತತ್ವ ಪರಿಪೂರ್ಣ ಸಿದ್ಧಾಂತವೆನಿಸಿದೆ. ದುಡಿದುಣ್ಣುವ ರೀತಿ ಬೆಳೆಯಿತಲ್ಲದೇ ಆತ್ಯಂತಿಕ ಸುಖ ಶಾಂತಿಯು ಕಾಯಕದಲ್ಲಿದೆ ಹೊರತು ಯಾಂತ್ರಿಕವಾಗಿ ಮಾಡುವ ಕೆಲಸದಲ್ಲಿ ಅಲ್ಲವೆಂಬುದನ್ನು ಅರಿಯಬೇಕು.