ಮುಖ್ಯಮಂತ್ರಿ ನಿವಾಸ ಖಾಲಿ ಮಾಡಿದ ಕೇಜ್ರಿವಾಲ್
12:33 PM Oct 04, 2024 IST
|
Samyukta Karnataka
ನವದೆಹಲಿ: ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಧಿಕೃತ ಮುಖ್ಯಮಂತ್ರಿ ನಿವಾಸವನ್ನು ಖಾಲಿ ಮಾಡಿದ್ದಾರೆ.
ಪಿತೃಪಕ್ಷ ಕೊನೆಗೊಂಡು, ನವರಾತ್ರಿ ಪ್ರಾರಂಭವಾದ ತಕ್ಷಣ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿ ಹೊಸ ಮನೆಗೆ ಸ್ಥಳಾಂತರಗೊಳ್ಳುವುದಾಗಿ ಅವರು ಈ ಹಿಂದೆ ಹೇಳಿದ್ದರು. ಫ್ಲಾಗ್‌ಸ್ಟಾಫ್ ರಸ್ತೆಯ ನಿವಾಸವನ್ನು ತೆರವು ಮಾಡಿ ಲುಟ್ಯೆನ್ಸ್ ವಲಯದಲ್ಲಿರುವ ತಮ್ಮ ಹೊಸ ಮನೆಗೆ ಸ್ಥಳಾಂತರಿಸಿದರು. ಕೇಜ್ರಿವಾಲ್ ಕುಟುಂಬವು ಪಕ್ಷದ ಸದಸ್ಯ ಅಶೋಕ್ ಮಿತ್ತಲ್ ಅವರ ಅಧಿಕೃತ ನಿವಾಸಕ್ಕೆ ಮಂಡಿ ಹೌಸ್ ಬಳಿಯ 5 ಫಿರೋಜ್‌ಶಾ ರಸ್ತೆಗೆ ತೆರಳಿತು. ಮಿತ್ತಲ್ ಅವರು ಪಂಜಾಬ್‌ನ ರಾಜ್ಯಸಭಾ ಸಂಸದರಾಗಿದ್ದು, ಕೇಂದ್ರ ದೆಹಲಿ ವಿಳಾಸದಲ್ಲಿ ಬಂಗಲೆಯನ್ನು ಹಂಚಲಾಗಿದೆ. ಫೆಬ್ರವರಿಯಲ್ಲಿ ನಡೆಯಲಿರುವ ಅಸೆಂಬ್ಲಿ ಚುನಾವಣೆಯಲ್ಲಿ ದೆಹಲಿಯ ಜನರಿಂದ "ಪ್ರಾಮಾಣಿಕತೆಯ ಪ್ರಮಾಣಪತ್ರ" ಪಡೆದ ನಂತರವೇ ಮತ್ತೆ ಹುದ್ದೆಯನ್ನು ಅಲಂಕರಿಸುವುದಾಗಿ ಕೇಜ್ರಿವಾಲ್ ಕಳೆದ ತಿಂಗಳು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
Next Article