For the best experience, open
https://m.samyuktakarnataka.in
on your mobile browser.

ಮೂಡಾ ವಾದಬೇಡ ಎಷ್ಟು ಚಂದ ನೋಡ…

03:00 AM Oct 01, 2024 IST | Samyukta Karnataka
ಮೂಡಾ ವಾದಬೇಡ ಎಷ್ಟು ಚಂದ ನೋಡ…

ಮಹಾತತ್ವಜ್ಞಾನಿ ಎಂದೇ ಹೆಸರು ಪಡೆದಿದ್ದ ಜ್ಞಾನಿ ಗ್ಯಾನಮ್ಮಳು, ಈ ಹಿಂದೆ ಪಠ್ಯಪುಸ್ತಕ ಸಮಿತಿಯ ರಾಷ್ಟ್ರಾಧ್ಯಕ್ಷರೂ ಆಗಿ ಕೆಲಸ ಮಾಡಿದ್ದರು. ಇದೀಗ ಮುಂದಿನ ಪೀಳಿಗೆಯ ಮಕ್ಕಳಿಗೆ ಇಂತಹ ಪಾಠ ಇಡಬಹುದು ಎಂದು ತಮ್ಮ ಅಮೂಲ್ಯವಾದ ಸಲಹೆಯನ್ನು ನೀಡಿದ್ದಾರೆ. ನಮ್ಮ ಮುಂದಿನ ಮಕ್ಕಳಿಗೆ ರಾಜ್ಯದ ಆಗು ಹೋಗುಗಳ ಬಗ್ಗೆ ತಿಳಿದಿರಬೇಕು ಹೀಗಾಗಿ ಕೆಲವೊಂದು ಅಂಶಗಳನ್ನು ಪಠ್ಯದಲ್ಲಿ ಅಳವಡಿಸಲೇಬೇಕು ಎಂದು ಸಲಹೆ ನೀಡಿದ್ದಾರೆ. ಪ್ರಮುಖ ಅಂಶಗಳು ಎಂದರೆ…
೧) ಮೂಡಾದಲ್ಲಿ ಮೊಂಡುವಾದ ಬೇಡ. ಎಷ್ಟು ಚೆಂದ ನೋಡಾ
೨) ಅಡಕೊತ್ತಿನಲ್ಲಿ ಸಿಲುಕಿಸುವುದರಲ್ಲಿ ನಮ್ಮವರದ್ದೇ ಪಾತ್ರ
೩) ಇಡಿ-ಕೋಡಿ-ಜಾಡಿ-ನೋಡಿ-ಮಾಡಿ ಇವುಗಳನ್ನು ಸಂಧಿಯಲ್ಲಿ ಅಳವಡಿಸುವಿಕೆ
೪) ನಾನ್ಯಾಕೆ ಕೊಡಲಿ? ನಾ ಕೊಡಂಗಿಲ್ಲ. ನಾ ಕೊಡಂಗಿಲ್ಲ
೫) ನಾನೂ ನೀನು ಒಂದಾಗೋಣ-ಅವರನ್ನು ಕಳಿಸಿಬಿಡೋಣ
೬) ಇರುವುದು ಹತ್ತೊಂಭತ್ತು. ಸೋದಿಮಾಮಾನ ಟೀಮಿನಲ್ಲಿ ಹೊಡಿ ಒಂಭತ್ತು.
೭) ಕಮಲದಲ್ಲಿ ಅರಳಿದ ಕರಮಾತ್ತು-ಸಾವಿರ ಕೋಟಿ ಹುಕುಮತ್ತು
೮) ನೀ ನನ್ನ ಜ್ಯೂನಿಯರ್-ಹಿಂದಿನ ಸೀಟಿನಲ್ಲಿ ಕ್ಯಾರಿಯರ್
೯) ನೀನೇ ಎಲ್ಲವನ್ನೂ ಮಾಡಿದ್ದು, ಎಲ್ಲವನ್ನೂ ಮಾಡುವುದು
೧೦) ಹಂದಿ ಹಂದಿ-ಸಿಟ್ಟಿಗೆ ಬಂದ ಮಂದಿ
ಈ ಮೇಲಿನ ಅಂಶಗಳನ್ನು ಸೇರಿಸಿಕೊಂಡು ತಜ್ಞರ ಜತೆ ಸಮಾಲೋಚನೆ ಮಾಡಿ ಮತ್ತು ನನ್ನನ್ನೂ ಒಂದು ಮಾತು ಕೇಳಿ. ನೀವು ಬೇರೆ ಬೇರೆ ವಿಷಯಗಳ ಪುಸ್ತಕಗಳಲ್ಲಿ ಈ ಪಠ್ಯಗಳನ್ನು ಅಳವಡಿಸಿದರೆ ನಮ್ಮ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ ಎಂದು ಗ್ಯಾನಮ್ಮ ತಮ್ಮ ಸಲಹೆಯಲ್ಲಿ ತಿಳಿಸಿದ್ದಾರೆ.