For the best experience, open
https://m.samyuktakarnataka.in
on your mobile browser.

ಮೃತ್ಯು ಮುಟ್ಟದವರಾರು..?

04:41 AM Sep 01, 2024 IST | Samyukta Karnataka
ಮೃತ್ಯು ಮುಟ್ಟದವರಾರು

ನೊಣ ಹಾರುತಿರೆ ಕಪ್ಪಿದೆನ್ನುಟ್ಟುವದು
ಕಪ್ಪೆ ಜಿಗಿಯುತಿರೆ ಹಾವು ಹಾತೊರೆಯುವದು
ಹಾವು ಹರಿಯುತಿರೆ ನವಿಲು ಎರಗುವದು
ನವಿಲು ಕುಣಿಯುತಿರೆ ಹುಲಿ ಆಕ್ರಮಿಸುವದು
ಹುಲಿಯು ಘರ್ಜಿಸುತಿರೆ ಬೇಡ ಬೆನ್ನಟ್ಟುವನು
ಬೇಡನೇನು ಅಮರನೇ ಬೇಡನ ಜುಟ್ಟು ಮೃತ್ಯುವಿನ ಕೈಯ್ಯಲ್ಲಿ
ಮೃತ್ಯು ಮುಟ್ಟದವರಾರು? ಮೃಡಗಿರಿ ಅನ್ನದಾನೀಶನ ದಯದಿಂದ
ಮೃತ್ಯು ಪಾಶವ ನಿವಾರಿಸಬಹುದಯ್ಯಾ||
`ಜಾತಸ್ಯ ಮರಣಂ ಧ್ರುವಂ' ಹುಟ್ಟಿದ ಪ್ರತಿಯೊಂದು ಜೀವಿಗೆ ಮರಣ ನಿಶ್ಚಿತ. ಬಸವಣ್ಣನವರು ನಾಳೆ ಬಪ್ಪದು ಇಂದೇ ಬರಲಿ ಇದಕಾರಂಜುವರು. ಇದಕಾರು ಅಳಕುವರು ಎಂದು ಧೈರ್ಯವಾಗಿ ಮರಣ ಸ್ವೀಕಾರತೆಯನ್ನು ಚಿಂತಿಸಿದ್ದಾರೆ. ಪರಮಾತ್ಮನ ಸೃಷ್ಟಿ ವೈಚಿತ್ರ್ಯಮಯವಾಗಿದೆ.
ಒಂದು ಪ್ರಾಣಿ ಮತ್ತೊಂದನ್ನು ತಿಂದು ಬದುಕುತ್ತದೆ. ಒಂದಕ್ಕೆ ಮತ್ತೊಂದು ಆಹಾರವಾಗಿದೆ. ನೊಣ ಹಾರುತ್ತಿದ್ದರೆ ಕಪ್ಪೆ ಅದನ್ನು ಹಿಡಿದು ತಿನ್ನುತ್ತದೆ. ಕಪ್ಪೆಯನ್ನು ಹಾವು ನುಂಗುತ್ತದೆ. ಹಾವನ್ನು ಕಂಡರೆ ನವಿಲಿಗೆ ಪ್ರೀತಿ ಅದನ್ನು ಹಿಡಿದು ತಿನ್ನುತ್ತದೆ. ಕಪ್ಪೆಯನ್ನು ಹಾವು ನುಂಗುತ್ತದೆ. ಹಾವನ್ನು ಕಂಡರೇ ನವಿಲಿಗೆ ಪ್ರೀತಿ ನವಿಲು ಕುಣಿಯುತ್ತಿದ್ದರೆ, ಹುಲಿರಾಯ ತನ್ನ ಬಯಸುತ್ತಿದೆ. ಹುಲಿಯ ಹೊಡೆಯಲು ಬೇಟೆಗಾರರು ಹರ ಸಾಹಸ ಮಾಡುತ್ತಾರೆ. ಹೀಗೆ ಒಂದೊಂದು ಪ್ರಾಣಿ ಮತ್ತೊಂದನ್ನು ಸಾಯಿಸಲು ಪ್ರಯತ್ನಿಸುತ್ತವೆ.
ಪ್ರಾಣಿಗಳನ್ನು ಕೊಲ್ಲುವ ಮಾನವರೂ ಅವರಲ್ಲ. ಎಲ್ಲರೂ ಒಂದು ದಿನ ಮರಣಾಧೀನರಾ ಗುವವರೇ..! ಆದರೆ ಪರಮಾತ್ಮನಲ್ಲಿ ಅಪಾರಭಕ್ತಿ ವಿಶ್ವಾಸಗಳನ್ನು ಇಟ್ಟ ಭಕ್ತರು ಯಮರಾಯನ ಪಾಶದಿಂದ ಪಾರಾಗಬಹುದು. ಅದಕ್ಕೆ ಭಕ್ತ ಮಾರ್ಕಂಡೇಯನು ೧೬ ವರುಷಕ್ಕೆ ಮರಣ ನಿಶ್ಚಿಯವಾಗಿದ್ದರೂ ಯಮರಾಯನಿಗೆ ಸಿಗಲಿಲ್ಲ. ಸತಿ ಸಾವಿತ್ರಿಯೂ ತನ್ನ ಪಾತಿವ್ರತ್ಯ ಧರ್ಮದಿಂದ ತನ್ನ ಸತ್ತ ಪತಿ ಸತ್ಯವಾನನನ್ನು ಮರಳಿ ಪಡೆದಳು.
ಸತ್ಯ ಪರಿಪಾಲನೆ ಮಾಡಿದ ಹರಿಶ್ಚಂದ್ರರಾಜನು ತನ್ನ ಹಾವು ಕಡಿದು ಪ್ರಾಣ ಹೋದ ಮಗ ಲೋಹಿತಾಶ್ವನನ್ನು ಬದುಕಿಸಿಕೊಂಡನು. ಅದರಂತೆ ಶಿವಶರಣರೂ ಅಮರ ಶರಣರು ಅಂಥವರು ಸದಾಕಾಲ ಸ್ಮರಣೀಯರಾಗಿದ್ದಾರೆ. ಹುಟ್ಟಿದ ಜೀವಿಗೆ ಒಂದು ದಿನ ಲಯವೆಂಬುದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಮಾರ್ಕಂಡೇಯ, ಸತ್ಯವಾನ ಮತ್ತು ಲೋಹಿತಾಶ್ವರು ಮರಳಿ ಬದುಕಿದರೂ ಎಂದರೆ ಅಮರರಾದರು ಎಂದರ್ಥ. ಸಾವು ಶರೀರಕ್ಕೆ ಹೊರತು ತಾತ್ವಿಕ ಆತ್ಮಕ್ಕಲ್ಲ. ಅದಕ್ಕೆಂದೇ ಪ್ರಾಕೃತಿಕ ಶರೀರಕ್ಕೆ ಅಳಿವಿದೆ. ಶಿವಭಕ್ತರಿಗೆ ಶರಣರಿಗೆ ಪ್ರಾಕೃತಿಕ ಶರೀರದ ಬಗ್ಗೆ ಮಮಕಾರವನ್ನು ಇಟ್ಟುಕೊಂಡಿರದೇ ಅಮರತ್ವದ ಕಡೆಗೆ ಹೋಗುತ್ತಿರುತ್ತಾರೆ.