ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಯತ್ನಾಳ ಭ್ರಮಾಲೋಕದಿಂದ ಹೊರ ಬನ್ನಿ

05:33 PM Dec 10, 2023 IST | Samyukta Karnataka

ದಾವಣಗೆರೆ: ಯಡಿಯೂರಪ್ಪನವರಿಗೆ ಟೀಕಿಸುವುದರಿಂದ ದೊಡ್ಡ ಮಟ್ಟದ ನಾಯಕನಾಗುತ್ತೇನೆಂಬ ಹಗಲುಗನಸು ಕಾಣಬೇಡಿ. ಭ್ರಮಾಲೋಕದಲ್ಲಿರುವ ನೀವು ದೊಡ್ಡ ಮಟ್ಟದ ನಾಯಕನಾಗಲು ಸಾಧ್ಯವೇ ಇಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಿಜಯಪುರ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್ ವಿರುದ್ಧ ಹರಿಹಾಯ್ದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರಿಗೆ ಪದೇ ಪದೇ ಟೀಕಿಸುವುದರಿಂದ ದೊಡ್ಡ ಮಟ್ಟದ ನಾಯಕನಾಗುವ ಭ್ರಮಾಲೋಕದಲ್ಲಿ ಯತ್ನಾಳ್ ಇದ್ದಾರೆ. ಇಂತಹ ಟೀಕೆಗಳಿಂದ ನಾಯಕನಾಗುವುದಕ್ಕೆ ಸಾಧ್ಯವೂ ಇಲ್ಲ. ಹಗಲುಗನಸು ಕಾಣಬೇಡಿ, ಭ್ರಮಾಲೋಕದಿಂದ ಹೊರ ಬನ್ನಿ ಎಂದರು.
ಯತ್ನಾಳ್ ಸಂಘಟನೆಯ ಆಧಾರದ ಮೇಲೆ ಬರಲಿ. ನಮಗೂ ಏರುಧ್ವನಿಯಲ್ಲಿ ಮಾತನಾಡಲು ಬರುತ್ತದೆ. ಹಿಂದೆ ಯತ್ನಾಳ್‌ಗೆ ಕೇಂದ್ರ ಸಚಿವರಾಗಿ ಮಾಡಿದ್ದು ಯಡಿಯೂರಪ್ಪ. ಜೆಡಿಎಸ್‌ಗೆ ಇದೇ ಯತ್ನಾಳ್ ಹೋದಾಗ ಮತ್ತೆ ಬಿಜೆಪಿಗೆ ವಾಪಾಸ್ಸು ಕರೆ ತಂದಿದ್ದು ಸಹ ಯಡಿಯೂರಪ್ಪನವರೇ ಎಂಬುದನ್ನು ಯತ್ನಾಳ್ ಮರೆಯಬಾರದು ಎಂದು ಅವರು ತಿಳಿಸಿದರು.
ಹಿಂದೆ ಅನೇಕರು ಯತ್ನಾಳ್ ಬಾಯಿ ಸುಮ್ಮನಿರಲ್ಲವೆಂದಿದ್ದರು. ಹಿಂದಿನ ಸರ್ಕಾರದಲ್ಲಿ ಮಂತ್ರಿ ಮಾಡಲಿಲ್ಲವೆಂದು ಯತ್ನಾಳ್ ಈಗಲೂ ಟೀಕಿಸುತ್ತಿದ್ದಾರೆ. ನಾವೇ ಬಹಳಷ್ಟು ಜನರು ಹೋಗಿ ಶಾಸಕರನ್ನು ಒಪ್ಪಿಸಿದ್ದೆವು. ಆದರೂ, ಬಸವನಗೌಡ ಪಾಟೀಲ್ ಯತ್ನಾಳ್ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ಟೀಕಿಸುತ್ತಿದ್ದಾರೆ ಎಂದು ಅವರು ದೂರಿದರು.
ಅನಗತ್ಯವಾಗಿ ಯಡಿಯೂರಪ್ಪ, ವಿಜಯೇಂದ್ರರಿಗೆ ಟೀಕೆ ಯಾಕೆ ಮಾಡಬೇಕು? ಇದರಿಂದ ಯಾವುದೇ ಪ್ರಯೋಜನವೂ ಇಲ್ಲ. ವಿಜಯೇಂದ್ರಗೆ ಗುರಿಯಾಗಿಟ್ಟುಕೊಂಡು, ಮಾತನಾಡುವುದು ಯತ್ನಾಳ್‌ಗೆ ಶೋಭೆ ತರುವುದಿಲ್ಲ. ಇದರಿಂದ ಯತ್ನಾಳ್ ವ್ಯಕ್ತಿತ್ವಕ್ಕೆ ಧಕ್ಕೆ ಬರುತ್ತದೆ. ಇನ್ನಾದರೂ ಯತ್ನಾಳ್ ತಮ್ಮ ಮಾತಿನ ಮೇಲೆ ನಿಗಾ ಇಡಲಿ ಎಂದು ಅವರು ಸಲಹೆ ನೀಡಿದರು.

Next Article