For the best experience, open
https://m.samyuktakarnataka.in
on your mobile browser.

ಯಲ್ಲಮ್ಮನ ಗುಡ್ಡಕ್ಕೆ ಕೇಂದ್ರದಿಂದ ೧೦೦ ಕೋಟಿ ಅನುದಾನ

09:01 PM Nov 29, 2024 IST | Samyukta Karnataka
ಯಲ್ಲಮ್ಮನ ಗುಡ್ಡಕ್ಕೆ ಕೇಂದ್ರದಿಂದ ೧೦೦ ಕೋಟಿ ಅನುದಾನ

ಬೆಳಗಾವಿ: ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ರೂ. ೧೦೦ ಕೋಟಿ ಅನುದಾನ ಮಂಜೂರು ಮಾಡಿದೆ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ ಅವರು ತಿಳಿಸಿದ್ದಾರೆ.
ಈ ಅನುದಾನ ಕೇಂದ್ರ ಪ್ರವಾಸೋದ್ಯಮ ಇಲಾಖೆ ``Approval of capital expenditure under part -3 ( Development of lconic tourist centres of global scale ) of the scheme of special assistance to States for capital investment -2024-25 ಈ ಯೋಜನೆ ಅಡಿ ಮಂಜೂರು ಮಾಡಿದ್ದು ಕರ್ನಾಟಕ ರಾಜ್ಯದಲ್ಲಿ ಆಯ್ಕೆಯಾದ ಎರಡು ದೇವಸ್ಥಾನಗಳಲ್ಲಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನವೂ ಒಂದಾಗಿದೆ ಎಂದು ಸಂಸದರು ಜಗದೀಶ ಶೆಟ್ಟರ ತಿಳಿಸಿದ್ದಾರೆ.
ಪ್ರಸ್ತಾಪಿತ ಯೋಜನೆಯ ಅನುಮೋದನೆಯ ಕುರಿತು ಹಿಂದಿನ ತಿಂಗಳಷ್ಟೆ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿದ ಸಂಸದರು, ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದ ಮಹತ್ವದ ಕುರಿತು ಹಾಗೂ ಇಲ್ಲಿ ಬರುವ ಭಕ್ತಾದಿಗಳ ಅನುಕೂಲಕ್ಕೆ ಮೂಲ ಸೌಕರ್ಯದ ಅವಶ್ಯಕತೆಯ ಬಗ್ಗೆ ತಿಳಿಸಿ ಯೋಜನೆಯ ಒಪ್ಪಿಗೆಗಾಗಿ ವಿನಂತಿಸಿದ್ದರು. ಬೇಡಿಕೆಗೆ ಸ್ಪಂದಿಸಿ ಅದರಂತೆ ಒಪ್ಪಿಗೆ ನೀಡಿರುವುದಕ್ಕೆ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಹಾಗೂ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಈ ಯೋಜನೆಯ ಅನುದಾನದಿಂದ ಪ್ರಸ್ತಾಪಿತ ದೇವಸ್ಥಾನದಲ್ಲಿ ಎಲ್ಲ ಮೂಲ ಸೌಕರ್ಯಗಳು ನಿರ್ಮಾಣವಾಗಲಿದ್ದು ಇದರಿಂದ ಭಕ್ತಾದಿಗಳಿಗೆ ಖಂಡಿತವಾಗಿಯೂ ಹೆಚ್ಚಿನ ಅನುಕೂಲತೆ ಆಗಲಿದೆ ಎಂದು ಸಂಸದ ಶೆಟ್ಟರ ಪ್ರಸ್ತಾಪಿಸಿದ್ದಾರೆ.