For the best experience, open
https://m.samyuktakarnataka.in
on your mobile browser.

ಯಶವಂತಪುರ –ಹೆಬ್ಬಾಳ ನಡುವೆ ತಾಂತ್ರಿಕ ಅದ್ಭುತ "ಯು-ಗರ್ಡರ್"

01:48 PM Mar 16, 2024 IST | Samyukta Karnataka
ಯಶವಂತಪುರ –ಹೆಬ್ಬಾಳ ನಡುವೆ ತಾಂತ್ರಿಕ ಅದ್ಭುತ  ಯು ಗರ್ಡರ್

ಬೆಂಗಳೂರು: ತಾಂತ್ರಿಕ ಅದ್ಭುತವೆಂದೇ ಹೇಳಲಾಗುವ ಯು-ಗರ್ಡರ್ ಅನ್ನು ಯಶವಂತಪುರ –ಹೆಬ್ಬಾಳ ನಡುವಿನ BSRPಯ ಕಾರಿಡಾರ್-2ರಲ್ಲಿ ಅಳವಡಿಸಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಯು-ಗರ್ಡರ್ ಕಾಮಗಾರಿಯ ವೀಕ್ಷಣೆ ನಂತರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಬೆಂಗಳೂರು ಹಾಗೂ ಸುತ್ತ ಮುತ್ತಲ ಜಿಲ್ಲೆಗಳ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಸುಗಮಗೊಳಿಸುವ ಮಹತ್ವಾಕಾಂಕ್ಷಿ ಬೆಂಗಳೂರು ಸಬರ್ಬನ್ ರೈಲು ಯೋಜನೆ (BSRP) ಯಲ್ಲಿ ಅಳವಡಿಸಬೇಕಿರುವ 31 ಮೀಟರ್ ಉದ್ದದ ಯು-ಗರ್ಡರ್ ನ್ನು ದೇವನಹಳ್ಳಿಯ ಕಾಸ್ಟಿಂಗ್ ಯಾರ್ಡ್ ನಲ್ಲಿ ಸಿದ್ದಪಡಿಸಲಾಗುತ್ತಿದೆ. ಈ ದಿನ ಕಾಮಗಾರಿಯ ವೀಕ್ಷಣೆ ನಡೆಸಿದೆ. ಇಲ್ಲಿ ಯು-ಗರ್ಡರ್, ಐ ಗರ್ಡರ್ ಮತ್ತು ಫೈರ್ ಕ್ಯಾಪ್ ಗಳನ್ನು L & T ಸಿದ್ದಪಡಿಸುತ್ತಿದ್ದು ಕೆ-ರೈಡ್ ಇದರ ಉಸ್ತುವಾರಿ ಮತ್ತು ಗುಣಮಟ್ಟ ನಿಯಂತ್ರಣಗಳನ್ನು ಗಮನಿಸುತ್ತಿದೆ. ತಾಂತ್ರಿಕ ಅದ್ಭುತವೆಂದೇ ಹೇಳಲಾಗುವ ಯು-ಗರ್ಡರ್ ಅನ್ನು ಯಶವಂತಪುರ –ಹೆಬ್ಬಾಳ ನಡುವಿನ BSRPಯ ಕಾರಿಡಾರ್-2ರಲ್ಲಿ ಅಳವಡಿಸಲಾಗುವುದು.
ಇಂದಿನ ಭೇಟಿಯ ವೇಳೆ ಕೆರೈಡ್ ವ್ಯವಸ್ಥಾಪಕ ನಿರ್ದೇಶಕ| ಎನ್. ಮಂಜುಳಾ ಸೇರಿದಂತೆ, ಹಿರಿಯ ಅಧಿಕಾರಿಗಳು ಜೊತೆಗಿದ್ದರು ಎಂದಿದ್ದಾರೆ.