For the best experience, open
https://m.samyuktakarnataka.in
on your mobile browser.

ಯಶಸ್ಸಿನ ಉತ್ಸಾಹದಲ್ಲಿದ್ದರೂ ಸಾಧಿಸುವ ಹುಮ್ಮಸ್ಸಿರಲಿ

09:53 PM Feb 20, 2024 IST | Samyukta Karnataka
ಯಶಸ್ಸಿನ ಉತ್ಸಾಹದಲ್ಲಿದ್ದರೂ ಸಾಧಿಸುವ ಹುಮ್ಮಸ್ಸಿರಲಿ

ಬೆಳಗಾವಿ: ನಾವೀಗ ಯಶಸ್ವಿನ ಉತ್ಸಾಹದಲ್ಲಿದ್ದೇವೆ. ಹುಮ್ಮಸ್ಸಿನ ವಾತಾವರಣದಲ್ಲಿ ಇದ್ದೇವೆ ಆದರೂ ಕೂಡ ಸಾಧಸುವ ಸಂಕಲ್ಪ ಅಗತ್ಯ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ರವೀಂದ್ರ ಜೀ ಹೇಳಿದರು.
ಬೆಳಗಾವಿ ಮರಾಠಾ ಮಂಡಳ, ಶಹಾಪುರದ ಸರಸ್ವತಿ ವಾಚನಾಲಯ ಹಾಗೂ ಜನಕಲ್ಯಾಣ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ ೩೫೦ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ವಕ್ತಾರರಾಗಿ ಮಾತನಾಡಿದ ಅವರು, ಶಿವಾಜಿ ಮಹಾರಾಜರ ಸದಾಶಯವೂ ಕೂಡ ಇದೇ ಆಗಿತ್ತು ಎಂದರು.
ಶಿವಾಜಿ ಮಹಾರಾಜರು ತಮ್ಮ ಪಟ್ಟಾಭಿಷೇಕದ ನಂತರ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಸಾಮ್ರಾಜ್ಯದ ವಿಸ್ತರಣೆಗೆ ಹಗಲಿರುಳು ಹೋರಾಟ ನಡೆಸಿದರು. ಪಟ್ಟಾಭಿಷೇಕದ ನಂತರದ ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಅವರ ಸಾಮ್ರಾಜ್ಯದ ವ್ಯಾಪ್ತಿಯಲ್ಲಿ ೨೭ ಕೋಟೆಗಳು ಇದ್ದವು ಎಂದರೆ ಅವರ ಪರಾಕ್ರಮ ಎಂಥದ್ದು ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.
ಗೆರಿಲ್ಲಾ ಮಾದರಿಯ ಯುದ್ಧ ತಂತ್ರಗಳನ್ನು ಕರಗತ ಮಾಡಿಕೊಂಡಿದ್ದರಿಂದಲೇ ಗೆಲುವು ಸುಲಭವಾಗಿತ್ತು ಎಂದು ಹೇಳಿದರು.
ಅಪ್ಜಲ್ ಖಾನ್ ಬಲಿಷ್ಠ ಸೈನ್ಯವನ್ನು ಹೊಂದಿದ್ದರು ಶಿವಾಜಿ ಮಹಾರಾಜರ ಎದುರು ಸೋತು ಸುಣ್ಣವಾದ. ಅಪ್ಜಲ್ ಖಾನ್ ನ ಸುತ್ತಮುತ್ತಲೂ ಇದ್ದ ಹತ್ತು ಬಲಿಷ್ಠ ಅಂಗರಕ್ಷಕರಲ್ಲಿ ಒಬ್ಬರೂ ಉಳಿಯಲಿಲ್ಲ. ಶಿವಾಜಿ ಮಹಾರಾಜರ ಹತ್ತು ಅಂಗರಕ್ಷಕರಲ್ಲಿ ಒಬ್ಬರೂ ಉಳಿಯಲಿಲ್ಲ ಎಂದು ರವೀಂದ್ರ ಜೀ ಅಭಿಪ್ರಾಯ ವ್ಯಕ್ತಪಡಿಸಿದರು.
ಉಜ್ಜಯಿನಿ ಬಾಲಯೋಗಿ ಉಮೇಶನಾಥ ಜೀ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.