ಯಾರ ಸ್ವಾಭಿಮಾನಕ್ಕೂ ಧಕ್ಕೆಯಾಗಬಾರದು…
ರಾಯಚೂರು: ಸ್ವಾಭಿಮಾನ ಧಕ್ಕೆಗಾಗಿ ಸಮಾವೇಶ ನಡೆಸುತ್ತಿಲ್ಲ ಸ್ವಾಭಿಮಾನ ಹೆಚ್ಚಳಕ್ಕಾಗಿ ಸಮಾವೇಶ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ಧರಾಯಯ್ಯ ಅವರು ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಹಿಂದುಳಿದ, ದಲಿತರಲ್ಲಿ ಸ್ವಾಭಿಮಾನ ಹೆಚ್ಚಾಗಬೇಕು ಅಂತ ಈ ಸಮಾವೇಶ ಮಾಡುತ್ತಿದ್ದೇವೆ. ಯಾರ ಸ್ವಾಭಿಮಾನಕ್ಕೂ ಧಕ್ಕೆಯಾಗಬಾರದು ಎಂದು ಸಮಾವೇಶ ನಡೆಸುತಿದ್ದೇವೆ ಎಂದು ಹೇಳಿದರು
ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಜಿ.ಟಿ. ದೇವೆಗೌಡ ಅವರು, ದಸರಾ ಹಬ್ಬದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅವರು ಹೇಳಿದ್ದು ಸರಿಯಾಗಿದೆ. ಆದರೆ ಮುಡಾ ಹಗರಣದಲ್ಲಿ ಅವರು ಭಾಗಿಯಾಗಿರುವ ಬಗ್ಗೆ ನನಗೆ ಗೊತ್ತಿಲ್ಲ
ಜಿಟಿಡಿ ಪಾದಯಾತ್ರೆಯಲ್ಲಿ ಭಾಗವಹಿಸಿರಬಹುದು ಆದರೆ ನೇತೃತ್ವವಹಿಸಿಲ್ಲ. ಅವರೇ ಪಾದಯಾತ್ರೆ ಬೇಡ ಎಂದಿದ್ದರು. ಆದರೆ ಜೆಡಿಎಸ್-ಬಿಜೆಪಿ ನಾಯಕರು ರಾಜಕೀಯ ಕಾರಣಕ್ಕೆ ಪಾದಯಾತ್ರೆ ಮಾಡಿದ್ದರು, ನನ್ನ ರಾಜೀನಾಮೆ ಕೇಳುವ ಆರ್ ಅಶೋಕ್ ಮೊದಲು ರಾಜೀನಾಮೆ ಕೊಡಬೇಕು. ಅವರು ಮೊದಲು ಕೊಡಲಿ. ಅವರಿಗೆ ರಾಜೀನಾಮೆ ಕೊಡಬೇಕು ಅನ್ನಿಸಿದ್ರೆ ಕೊಟ್ಟುಬಿಡಲಿ. ಆದರೆ ತಪ್ಪು ಮಾಡದ ನಾನ್ಯಾಕೆ ರಾಜೀನಾಮೆ ಕೊಡಬೇಕು, ಕಾನೂನು ಹೋರಾಟ ಮಾಡುತ್ತೇನೆ ಸತ್ಯಕ್ಕೆ ಜಯವಿದೆ ಎಂದರು. ಸತೀಶ್ ಜಾರಕಿಹೊಳಿ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿದರೆ ಚರ್ಚೆ ನಡೆಯುತ್ತದೆ. ಬೋಸರಾಜು ಇನ್ಯಾರನ್ನೋ ಭೇಟಿ ಮಾಡಿದರೆ ಚರ್ಚೆ ನಡೆಯುತ್ತವೆ. ಆದರೆ ಈಗ ಯಾಕೆ ಊಹಾಪೋಹ ಎದ್ದಿರೋದು? ಸುಳ್ಳು ಆರೋಪಗಳಿಗೆ ನಾವು ಉತ್ತರ ಕೊಡಲು ಆಗಲ್ಲ. ನಾನು ಜೆಡಿಎಸ್‌ನವರಿಗೂ ಭಯಪಡಲ್ಲ, ಬಿಜೆಪಿಯವರಿಗೂ ಭಯಪಡಲ್ಲ. ನಾನು ತಪ್ಪು ಮಾಡಿದ್ರೆ ತಾನೇ ಭಯಪಡೋಕೆ ಎಂದರು.