For the best experience, open
https://m.samyuktakarnataka.in
on your mobile browser.

ಯಾವ ರಾಜ್ಯವನ್ನೂ ಕಡೆಗಣಿಸಿಲ್ಲ: ವಿಪಕ್ಷಗಳು ದಾರಿ ತಪ್ಪಿಸುತ್ತಿವೆ

01:47 PM Jul 24, 2024 IST | Samyukta Karnataka
ಯಾವ ರಾಜ್ಯವನ್ನೂ ಕಡೆಗಣಿಸಿಲ್ಲ  ವಿಪಕ್ಷಗಳು ದಾರಿ ತಪ್ಪಿಸುತ್ತಿವೆ

ಭಾಷಣದಲ್ಲಿ ನಿರ್ದಿಷ್ಟ ರಾಜ್ಯವನ್ನು ಹೆಸರಿಸಿದರೆ, ಭಾರತ ಸರ್ಕಾರದ ಕಾರ್ಯಕ್ರಮಗಳು ಈ ರಾಜ್ಯಗಳಿಗೆ ಹೋಗುವುದಿಲ್ಲ ಎಂದರ್ಥವೇ?

ನವದೆಹಲಿ: ಬಜೆಟ್‌ನಲ್ಲಿ ಯಾವುದೇ ರಾಜ್ಯವನ್ನು ಕಡೆಗಣಿಸಿಲ್ಲ ಮತ್ತು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಉದ್ದೇಶಪೂರ್ವಕವಾಗಿ ನಾಗರಿಕರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
2024 ರ ಬಜೆಟ್ ಅನ್ನು ತಾರತಮ್ಯ ಎಂದು ಪ್ರತಿಪಕ್ಷಗಳ ಸಂಸದರ ಪ್ರತಿಭಟನೆಯ ನಡುವೆ ರಾಜ್ಯಸಭೆಯಲ್ಲಿ ಮಾತನಾಡಿ ಸಮರ್ಥಿಸಿಕೊಂಡಿರುವ ಅವರು ಪ್ರತಿ ಬಜೆಟ್‌ನಲ್ಲಿ, ಈ ದೇಶದ ಪ್ರತಿಯೊಂದು ರಾಜ್ಯವನ್ನು ಹೆಸರಿಸಲು ನಿಮಗೆ ಅವಕಾಶ ಸಿಗುವುದಿಲ್ಲ" ಎಂದು ಪ್ರತಿಪಕ್ಷಗಳ ಸಂಸದರ ಘೋಷಣೆಗಳ ನಡುವೆ ಸೀತಾರಾಮನ್ ಹೇಳಿದರು. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಂಧವನ್ ಎಂಬ ಪಟ್ಟಣದಲ್ಲಿ ಬಂದರು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ ಆದರೆ ಮಂಗಳವಾರದ ತನ್ನ ಬಜೆಟ್ ಭಾಷಣದಲ್ಲಿ ರಾಜ್ಯದ ಹೆಸರನ್ನು ಉಲ್ಲೇಖಿಸಿಲ್ಲ ಎಂದು ಅವರು ಹೇಳಿದರು. ಇದರರ್ಥ ಮಹಾರಾಷ್ಟ್ರವನ್ನು ಕಡೆಗಣಿಸಲಾಗಿದೆ ಎಂದರ್ಥವೇ? ಭಾಷಣದಲ್ಲಿ ನಿರ್ದಿಷ್ಟ ರಾಜ್ಯವನ್ನು ಹೆಸರಿಸಿದರೆ, ಭಾರತ ಸರ್ಕಾರದ ಕಾರ್ಯಕ್ರಮಗಳು ಈ ರಾಜ್ಯಗಳಿಗೆ ಹೋಗುವುದಿಲ್ಲ ಎಂದರ್ಥವೇ? ಇದು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಉದ್ದೇಶಪೂರ್ವಕ ಪ್ರಯತ್ನವಾಗಿದೆ. ನಮ್ಮ ರಾಜ್ಯಗಳಿಗೆ ಏನನ್ನೂ ನೀಡಿಲ್ಲ ಎಂಬ ಭಾವನೆ ಜನರಲ್ಲಿ ಮೂಡಿದೆ ಎಂದು ಹಣಕಾಸು ಸಚಿವರು ಹೇಳಿದರು.